For Quick Alerts
  ALLOW NOTIFICATIONS  
  For Daily Alerts

  ವರುಣ್ ತೇಜ್, ಲಾವಣ್ಯ ತ್ರಿಪಾಠಿ ಮದುವೆ: ಕೊನೆಗೂ ಸತ್ಯ ಹೇಳಿದ ನಟಿ!

  |

  ಚಿರಂಜೀವಿ ಸಹೋದರ ನಾಗಬಾಬು ಪುತ್ರ ವರುಣ್ ತೇಜ್ ಮದುವೆ ಬಗ್ಗೆ ಸುದ್ದಿ ಕೆಲವು ದಿನಗಳ ಹಿಂದೆ ಹೆಚ್ಚು ಸದ್ದು ಮಾಡಿತ್ತು. ವರಣ್ ವಿವಾಹವಾಗಲು ತಯಾರಾಗಿದ್ದು, ತೆಲುಗು ಚಿತ್ರರಂಗದ ಸ್ಟಾರ್ ನಟಿಯೊಬ್ಬರನ್ನೇ ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಹರದಾಡಿತ್ತು.

  ಈ ಸುದ್ದಿ ಹೊರ ಬಂದಾಗಿನಿಂದೂ ಈ ಬಗ್ಗೆ ವರುಣ್‌ ಅಥವಾ ಲಾವಣ್ಯ ತ್ರಿಪಾಠಿ ಕುಟುಂಬದವರು ಇಲ್ಲಿ ತನಕ ಏನನ್ನೂ ಮಾತನಾಡಿಲ್ಲ. ಮದುವೆ ವಿಚಾರ ಗಾಳಿ ಸುದ್ದಿ ರೂಪದಲ್ಲಿಯೇ ಓಡಾಡುತ್ತಿದೆ. ಈ ಸುದ್ದಿ ದೊಡ್ಡದಾಗಿ ಸದ್ದು ಮಾಡಿದ್ದರೂ ಈ ಬಗ್ಗೆ ಇದರ ಬಗ್ಗೆ ಯಾರೋಬ್ಬರೂ ತುಟಿ ಬಿಚ್ಚಿರಲಿಲ್ಲ.

  'ಪುಷ್ಪ' ಮಾದರಿಯಲ್ಲಿರಲಿದೆ 'ಲೈಗರ್' ಕ್ಲೈಮ್ಯಾಕ್ಸ್!'ಪುಷ್ಪ' ಮಾದರಿಯಲ್ಲಿರಲಿದೆ 'ಲೈಗರ್' ಕ್ಲೈಮ್ಯಾಕ್ಸ್!

  ವರುಣ್ ತೇಜ್ ಜೊತೆಗೆ ತಳುಕು ಹಾಕಿಕೊಂಡಿದ್ದು, ನಟಿ ಲಾವಣ್ಯ ತ್ರಿಪಾಠಿ ಹೆಸರು. ಲಾವಣ್ಯ ತ್ರಿಪಾಠಿ, ವರುಣ್ ತೇಜ್ ಮದುವೆ ಆಗ್ತಾರೆ ಎನ್ನಲಾಗಿತ್ತು. ಈಗ ಈ ಸುದ್ದಿ ಬಗ್ಗೆ ನಟಿ ಲಾವಣ್ಯ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮದುವೆ ಬಗ್ಗೆ ಏನಂದ್ರೂ ಎನ್ನುವುದನ್ನು ಮುಂದೆ ಓದಿ...

  ಲಾವಣ್ಯ ತ್ರಿಪಾಠಿ ಮದುವೆ ಸುದ್ದಿ!

  ಲಾವಣ್ಯ ತ್ರಿಪಾಠಿ ಮದುವೆ ಸುದ್ದಿ!

  ವರುಣ್ ತೇಜ್ ಹೇಳಿ ಕೇಳಿ ಮೇಘಾ ಕುಟುಂಬದ ಹೀರೊ. ಹಾಗಾಗಿ ವರುಣ್ ಮದುವೆ ಆಗ್ತಿದ್ದಾರೆ ಅಂದರೆ ಕುತೂಹಲ ಸಹಜವಾಗಿಯೇ ಮೂಡುತ್ತವೆ. ವರುಣ್ ತೇಜ್ ಲಾವಣ್ಯಾರನ್ನೇ ಮದುವೆ ಆಗ್ತಾರೆ ಎನ್ನುವು ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಈ ಜೋಡಿಗೆ ಸಿನಿಮಾ ಕೂಡ ಮಾಡಿದ್ದಾರೆ. ಜೊತೆಗೆ ಲಾವಣ್ಯ, ವರುಣ್ ಕುಟುಂಬಕ್ಕೆ ಹತ್ತಿರವಾಗಿದ್ದಾರೆ ಎನ್ನುವ ಕಾರಣಕ್ಕೆ ಸುದ್ದಿ ಹಬ್ಬಿರ ಬಹುದು.

  ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್': ಸಲ್ಲು ಬ್ರದರ್ ಜೊತೆ ಬಂದ ಮೆಗಾಸ್ಟಾರ್!ಚಿರಂಜೀವಿ ಹುಟ್ಟುಹಬ್ಬಕ್ಕೆ 'ಗಾಡ್ ಫಾದರ್': ಸಲ್ಲು ಬ್ರದರ್ ಜೊತೆ ಬಂದ ಮೆಗಾಸ್ಟಾರ್!

  ಹುಡುಗಿಗಾಗಿ ಉಂಗುರ ಖರೀದಿಸಿದ್ದ ವರುಣ್!

  ಹುಡುಗಿಗಾಗಿ ಉಂಗುರ ಖರೀದಿಸಿದ್ದ ವರುಣ್!

  ನಟ ವರುಣ್ ತೇಜ್ ತಾನು ಮದುವೆ ಆಗುವ ಹುಡುಗಿಗಾಗಿ ಉಂಗುವರವನ್ನು ಖರೀದಿ ಮಾಡಿದ್ದಾರೆ ಎನ್ನಲಾಗಿತ್ತು. ಜೊತೆಗೆ ಸದ್ಯದಲ್ಲಿಯೇ ಆಕೆಗೆ ಉಂಗುರ ತೊಡಿಸಲಿದ್ದಾರೆ ಎನ್ನುವ ವಿಚಾರ, ಸುದ್ದಿಯ ರೂಪದಲ್ಲಿ ಹರಿದಾಡಿದೆ. ಆ ಹುಡುಗಿ ಲಾವಣ್ಯ ತ್ರಿಪಾಠಿ ಅವ್ರೇ ಎನ್ನಲಾಗಿತ್ತು. ಜೊತೆಗೆ ಈ ಜೋಡಿ ಹಲವು ದಿನಗಳಿಂದ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದರು ಎನ್ನುವ ಬಗ್ಗೆ ಕೂಡ ವರದಿ ಆಗಿತ್ತು. ಈಗ ಇದಕ್ಕೆಲ್ಲಾ ಸ್ಪಷ್ಟನೆ ಕೊಟ್ಟಿದ್ದಾರೆ ಲಾವಣ್ಯ ತ್ರಿಪಾಠಿ.

  ಗಾಸಿಪ್‌ಗೆ ಲಾವಣ್ಯ ಬ್ರೇಕ್!

  ಗಾಸಿಪ್‌ಗೆ ಲಾವಣ್ಯ ಬ್ರೇಕ್!

  ಲಾವಣ್ಯ ತ್ರಿಪಾಠಿ ಕೂಡ ಈ ವಿಚಾರದ ಬಗ್ಗೆ ಮಾತನಾಡುವ ಗೋಜಿಗೆ ಹೋಗಿರಲಿಲ್ಲ. ಇಷ್ಟು ದಿನ ವರುಣ್ ಜೊತೆಗೆ ತಮ್ಮ ಹೆಸರು ಕೇಳಿ ಬಂದಿದ್ದರ ಬಗ್ಗೆಯೂ ಮಾತನಾಡಿರಲಿಲ್ಲ. ಇತ್ತೀಚೆಗೆ ಮಾಧ್ಯಮ ಸಂದರ್ಶನದಲ್ಲಿ ಲಾವಣ್ಯಾಗೆ ಈ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ ಕೊಟ್ಟ ಲಾವಣ್ಯ ತ್ರಿಪಾಠಿ, "ನಾನು ಒಂಟಿಯಾಗಿದ್ದೇನೆ, ಯಾಕೆಂದರೆ ನನಗೆ ಸರಿಯಾದ ಜೋಡಿ ಸಿಕ್ಕಿಲ್ಲ" ಎಂದು ಹೇಳಿಕೆ ಕೊಟ್ಟಿದ್ದಾರೆ. ಈ ಮೂಲಕ ಗಾಸಿಪ್‌ಗಳಿಗೆ ಲಾವಣ್ಯ ತ್ರಿಪಾಟಿ ಪೂರ್ಣ ವಿರಾಮ ಇಟ್ಟಿದ್ದಾರೆ.

  ಸಾಲು, ಸಾಲು ಚಿತ್ರಗಳಲ್ಲಿ ವರುಣ್ ತೇಜ್!

  ಸಾಲು, ಸಾಲು ಚಿತ್ರಗಳಲ್ಲಿ ವರುಣ್ ತೇಜ್!

  ವರುಣ್ ನಟನೆಯ ಹೊಸ ಸಿನಿಮಾ 'ಗನಿ' ಮತ್ತು 'ಎಫ್3' ಸಿನಿಮಾಗಳು ರಿಲೀಸ್ ಆಗಿವೆ. 'ಎಫ್3' ಸಿನಿಮಾ ದೊಡ್ಡ ಮಟ್ಟದಲ್ಲಿ ಮಾಡಿದ್ದು, ಯಶಸ್ಸು ಕಂಡಿದೆ. ಇನ್ನು ವರುಣ್ ತಮ್ಮ ಮುಂದಿನ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ವರುಣ್ 12ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾ ವಿ12 ಎನ್ನುವ ಹೆಸರಿನಲ್ಲಿ ಶುರುವಾಗಿದೆ. ಸದ್ಯ ವರುಣ್ ಮದುವೆ ಗಾಸಿಪ್‌ಗೆ ಬ್ರೇಕ್ ಬಿದ್ದಿದ್ದು, ವರುಣ್ ಕೈ ಹಿಡಿಯೋ ಹುಡುಗಿ ಯಾರು ಎನ್ನುವುದು ಮದುವೆ ಸಂದರ್ಭದಲ್ಲಿ ಗೊತ್ತಾಗಲಿದೆ.

  English summary
  Lavanya Tripathi Reacts on Wedding Rumours With Mega Hero Varun Tej, Know More
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X