»   » ಒಮ್ಮೆಲೆ ಅಖಾಡಕ್ಕಿಳಿಯುತ್ತಾರಾ ಶಿವಣ್ಣ, ಸುದೀಪ್, ಪುನೀತ್, ಯಶ್.?

ಒಮ್ಮೆಲೆ ಅಖಾಡಕ್ಕಿಳಿಯುತ್ತಾರಾ ಶಿವಣ್ಣ, ಸುದೀಪ್, ಪುನೀತ್, ಯಶ್.?

Posted By:
Subscribe to Filmibeat Kannada
Kannada movies list which is expected to release in December | Filmibeat Kannada

ಸ್ಟಾರ್ ನಟರ ಸಿನಿಮಾಗಳು ಒಂದೇ ಸಮಯಕ್ಕೆ ರಿಲೀಸ್ ಆದರೆ ಅದೇನೋ ಒಂದು ಕ್ರೇಜ್ ಸೃಷ್ಟಿಯಾಗುತ್ತದೆ. ಇದೀಗ ಕನ್ನಡದ ನಟರಾದ ಶಿವಣ್ಣ, ಸುದೀಪ್, ಪುನೀತ್ ಹಾಗೂ ಯಶ್ ಅವರ ಸಿನಿಮಾಗಳು ಒಂದೇ ತಿಂಗಳಿನಲ್ಲಿ ರಿಲೀಸ್ ಆಗುವ ಸಾಧ್ಯತೆ ಹೆಚ್ಚಾಗಿದೆ.

ವಿಷ್ಣು ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ 'ಚಮಕ್' ಗಣೇಶ್.!

ಕನ್ನಡದ ಬಹು ನಿರೀಕ್ಷಿತ ಚಿತ್ರಗಳು ಒಂದೇ ಸಮಯದಲ್ಲಿ ತೆರೆಗೆ ಬರಲಿದೆಯಾ ಎನ್ನುವ ಅನುಮಾನ ಮೂಡಿದೆ. ಯಾಕಂದ್ರೆ, ಈಗಾಗಲೇ ಸ್ಟಾರ್ ನಟರ ಸಿನಿಮಾಗಳು ಕೊನೆಯ ಹಂತದಲ್ಲಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ಸೂಚನೆಯನ್ನು ನೀಡಿದೆ.

ಅಂದಹಾಗೆ, ಡಿಸೆಂಬರ್ ನಲ್ಲಿ ರಿಲೀಸ್ ಆಗಬಹುದಾದ ಕನ್ನಡ ಸಿನಿಮಾಗಳ ಪಟ್ಟಿ ಇಲ್ಲಿದೆ ಓದಿ.

ಕೆಜಿಎಫ್

'ಕೆಜಿಎಫ್' ಸಿನಿಮಾ ಡಿಸೆಂಬರ್ ನಲ್ಲಿ ರಿಲೀಸ್ ಆಗಬಹುದು. ಹಾಗ್ನೋಡಿದ್ರೆ, ಯಶ್ ಗೆ ಡಿಸೆಂಬರ್ ಲಕ್ಕಿ. 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಸೇರಿದಂತೆ ಡಿಸೆಂಬರ್ ತಿಂಗಳಿನಲ್ಲಿ ರಿಲೀಸ್ ಆದ ಯಶ್ ಸಿನಿಮಾಗಳು ಸೂಪರ್ ಡ್ಯೂಪರ್ ಹಿಟ್ ಆಗಿವೆ. ಹೀಗಿರುವಾಗ 'ಕೆಜಿಎಫ್' ಚಿತ್ರದ ಚಿತ್ರೀಕರಣ ಬೇಗ ಮುಗಿದರೆ, ಡಿಸೆಂಬರ್ ಹೊತ್ತಿಗೆ ಚಿತ್ರ ರಿಲೀಸ್ ಆಗುವುದು ಪಕ್ಕಾ.

'ಕೆ.ಜಿ.ಎಫ್' ಚಿತ್ರದ ಫಸ್ಟ್ ಡೈಲಾಗ್ ಬಹಿರಂಗ ಪಡಿಸಿದ ರಾಕಿಂಗ್ ಸ್ಟಾರ್.!

ಅಂಜನೀಪುತ್ರ

'ಅಂಜನೀಪುತ್ರ' ಸಿನಿಮಾದ ಮಾತಿನ ಭಾಗ ಮುಗಿದು ಹಾಡಿನ ಭಾಗದ ಶೂಟಿಂಗ್ ಕೂಡ ಕೊನೆಯ ಹಂತದಲ್ಲಿದೆ. ಅಂದುಕೊಂಡಂತೆ ಆದರೆ ಈ ಚಿತ್ರ ಕೂಡ ಡಿಸೆಂಬರ್ ನಲ್ಲಿ ತೆರೆಗೆ ಬರುತ್ತದೆ.

ದಿ ವಿಲನ್

'ದಿ ವಿಲನ್' ಚಿತ್ರದ ಶೂಟಿಂಗ್ ಕೂಡ ಬಹುತೇಕ ಮುಗಿದಿದ್ದು, ಈ ಚಿತ್ರ ಕೂಡ ಡಿಸೆಂಬರ್ ನಲ್ಲಿ ರಿಲೀಸ್ ಆಗಬಹುದು. ಆದರೆ ಇದು ಪ್ರೇಮ್ ಸಿನಿಮಾ ಆಗಿರುವುದರಿಂದ ಅವರು ಯಾವಾಗ ಬಿಡುಗಡೆ ಮಾಡುತ್ತಾರೆ ಎನ್ನುವುದನ್ನು ನಿಖರವಾಗಿ ಹೇಳುವುದು ಕಷ್ಟ.

ಅಪ್ಪನ 'ಕಾರ್ ಚೇಸಿಂಗ್ ಸೀನ್' ನೋಡಲು ಬ್ಯಾಂಕಾಕ್ ಗೆ ಹಾರಿದ ಶಿವಣ್ಣನ ಮಗಳು!

ಮಫ್ತಿ

ಶ್ರೀಮುರಳಿ ನಟನೆಯ 'ಮಫ್ತಿ' ಸಿನಿಮಾ ಡಿಸೆಂಬರ್ ವೇಳೆಗೆ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ. 'ಉಗ್ರಂ' ಮತ್ತು 'ರಥಾವರ' ಚಿತ್ರಗಳ ಬಳಿಕ ಶ್ರೀ ಮುರಳಿ ಈ ಚಿತ್ರ ಮಾಡಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಿದೆ.

ಟಗರು

ಶಿವರಾಜ್ ಕುಮಾರ್ ಅವರ 'ಟಗರು' ಕೂಡ ಡಿಸೆಂಬರ್ ತಿಂಗಳಿನಲ್ಲಿ ಬಂದರೆ ಆಶ್ಚರ್ಯ ಪಡಬೇಕಾಗಿಲ್ಲ. ಸದ್ಯಕ್ಕೆ ಈ ಚಿತ್ರವನ್ನ ನವೆಂಬರ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಇದ್ದರೂ ಚಿತ್ರದ ಬಿಡುಗಡೆ ದಿನಾಂಕ ಮುಂದೆ ಹೋದರೆ ಈ ಚಿತ್ರ ಕೂಡ ಡಿಸೆಂಬರ್ ತಿಂಗಳಿಗೆ ಶಿಫ್ಟ್ ಆಗಲಿದೆ.

'ಉಪೇಂದ್ರ ಮತ್ತೆ ಬಾ'

ರಿಯಲ್ ಸ್ಟಾರ್ ಉಪೇಂದ್ರ ಅವರ 'ಉಪೇಂದ್ರ ಮತ್ತೆ ಬಾ' ಸಿನಿಮಾ ಕೂಡ ನವೆಂಬರ್ ನಲ್ಲಿ ಅಥವಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

ಚಮಕ್

ಗಣೇಶ್ ಅವರ 'ಚಮಕ್' ಚಿತ್ರವನ್ನು ಈ ವರ್ಷಾಂತ್ಯಕ್ಕೆ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗಬಹುದು.

ಉತ್ತರ ಕರ್ನಾಟಕದ ಜೋಡಿಯಾಗಿ ಪುನೀತ್, ರಶ್ಮಿಕಾ ಮಂದಣ್ಣ ಮಿಂಚಿಂಗ್

'ಕನಕ'

ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾದ ಚಿತ್ರೀಕರಣ ಅನೇಕ ದಿನಗಳಿಂದ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆಗೆ ಸಿದ್ಧವಾಗಲಿದೆ.

ಅನೇಕ ಸಿನಿಮಾಗಳು

ಈ ಸಿನಿಮಾಗಳ ಜೊತೆಗೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಹಾಗೂ ಮನೋರಂಜನ್ ಎರಡನೇ ಚಿತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳು ಡಿಸೆಂಬರ್ ನಲ್ಲಿ ತೆರೆ ಕಾಣುವ ತವಕದಲ್ಲಿವೆ.

English summary
List of Kannada movies which might get released in December 2017 .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada