For Quick Alerts
  ALLOW NOTIFICATIONS  
  For Daily Alerts

  Radhana Ram : ಅವರೂ ಅಲ್ಲ.. ಇವರೂ ಅಲ್ಲ.. ದರ್ಶನ್ 56ನೇ ಸಿನಿಮಾಗೆ 'ಕಿರಣ್ ಬೇಡಿ' ಪುತ್ರಿನೇ ನಾಯಕಿ?

  |

  ಚಾಲೆಂಜಿಂಗ್ ಸ್ಟಾರ್ 'ಕ್ರಾಂತಿ' ಸಿನಿಮಾ ಮುಗಿಸಿ ಮತ್ತೊಂದು ಸಿನಿಮಾಗೆ ರೆಡಿಯಾಗಿದ್ದಾರೆ. ನಾಳೆ ( ಆಗಸ್ಟ್ 05) ವರಮಹಾಲಕ್ಷ್ಮಿ ಹಬ್ಬವಿರುವುದರಿಂದ ಈ ಶುಭ ದಿನದಂದೇ ಹೊಸ ಸಿನಿಮಾದ ನಾಯಕಿಯನ್ನು ರಿವೀಲ್ ಮಾಡಲು ಚಿತ್ರತಂಡ ಮುಂದಾಗಿದೆ. ಇದೇ ವೇಳೆ ಹಲವರ ಹೆಸರುಗಳು ಕೇಳಿ ಬರುತ್ತಿದೆ. ಆದ್ರೀಗ ಈ ಸಾಲಿಗೆ ಹೊಸ ಹೆಸರೊಂದು ಸೇರ್ಪಡೆಯಾಗಿದೆ.

  ದರ್ಶನ್ 56ನೇ ಸಿನಿಮಾವನ್ನು ರಾಕ್‌ ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿದ್ದಾರೆ. 'ರಾಜ ವೀರ ಮದಕರಿ ನಾಯಕ' ಸಿನಿಮಾ ಶೂಟಿಂಗ್ ಈಗಾಗಲೇ ಶುರುವಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ಆ ಪ್ರಾಜೆಕ್ಟ್ ಮುಂದೂಡಿದ್ದರಿಂದ 56ನೇ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ರಾಕ್‌ಲೈನ್‌ ಮುಂದಾಗಿದ್ದಾರೆ. ಆದ್ರೀಗ ವಿಷ್ಯ ಇದಲ್ಲ. ದರ್ಶನ್‌ 56ನೇ ಚಿತ್ರಕ್ಕೆ ನಾಯಕಿ ಯಾರು? ಅನ್ನೋದೇ ಪ್ರಶ್ನೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಹೆಸರು ಚರ್ಚೆಗೆ ಬರುತ್ತಿದೆ.

  'D56' ಸಿನಿಮಾ ನಾಯಕಿ ಯಾರು? ಅಭಿಮಾನಿಗಳ ಗೆಸ್ ನಿಜವಾಗುತ್ತಾ?'D56' ಸಿನಿಮಾ ನಾಯಕಿ ಯಾರು? ಅಭಿಮಾನಿಗಳ ಗೆಸ್ ನಿಜವಾಗುತ್ತಾ?

  ಅಂದ್ಹಾಗೆ, ಕಳೆದೆರಡು ದಿನಗಳಿಂದ ಹಲವರ ಹೆಸರು ಕೇಳಿ ಬರುತ್ತಲೇ ಇದೆ. ಆದ್ರೀಗ ಈ ಲಿಸ್ಟ್‌ನಲ್ಲಿ ಕನ್ನಡದ ಕನಸಿನ ರಾಣಿ ಮಾಲಾಶ್ರೀ ಪುತ್ರಿಯ ಹೆಸರೂ ಸೇರಿಕೊಂಡಿದೆ. ಏನಕ್ಕೂ ನಾಳೆ (ಆಗಸ್ಟ್ 05) ಬೆಳಗ್ಗೆ 9.45ಕ್ಕೆ ದರ್ಶನ್ ನಾಯಕಿ ಯಾರು ಅಂತ ರಿವೀಲ್ ಆಗಲಿದೆ. ಆದರೆ, ಮಾಲಾಶ್ರೀ ಪುತ್ರಿಯೇ ದರ್ಶನ್ 56ನೇ ಚಿತ್ರಕ್ಕೆ ಹೀರೊಯಿನ್. ಇದರೊಂದಿಗೆ ಸಿನಿಮಾದ ಟೈಟಲ್ ಕೂಡ ಫಿಕ್ಸ್ ಆಗಿದೆ ಅನ್ನೋದನ್ನು ಮೂಲಗಳು ಫಿಲ್ಮಿಬೀಟ್‌ಗೆ ತಿಳಿಸಿವೆ.

  ದರ್ಶನ್‌ಗೆ ಮಾಲಾಶ್ರೀ ಪುತ್ರಿ ಹೀರೊಯಿನ್

  ದರ್ಶನ್‌ಗೆ ಮಾಲಾಶ್ರೀ ಪುತ್ರಿ ಹೀರೊಯಿನ್

  ಸ್ಯಾಂಡಲ್‌ವುಡ್‌ನ ಕನಸಿನ ರಾಣಿ ಮಾಲಾಶ್ರೀ. ಕನ್ನಡ ಚಿತ್ರರಂಗ ಕಂಡ ಅತೀ ಸುಂದರ ನಾಯಕಿಯರಲ್ಲಿ ಇವರೂ ಕೂಡ ಒಬ್ಬರು. ಈಗ ಅವರ ಪುತ್ರಿಯ ಸರದಿ. ಹೌದು, ಮಾಲಾಶ್ರೀ ಪುತ್ರಿ ಚಿತ್ರರಂಗಕ್ಕೆ ಗ್ರ್ಯಾಂಡ್ ಎಂಟ್ರಿ ಕೊಡಲಿದ್ದಾರೆ. ಅದೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾ ಮೂಲಕ ಲಾಂಚ್ ಆಗಲಿದ್ದಾರೆ ಅನ್ನೋದು ವಿಶೇಷ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದಲ್ಲಿ ಮಾಲಾಶ್ರೀ ಪುತ್ರಿ ನಟಿಸೋದು ಪಕ್ಕಾ ಅಂತ ಮೂಲಗಳು ಹೇಳುತ್ತಿವೆ.

  15 ದಿನಗಳಿಂದ ತರುಣ್ ಸುಧೀರ್ ತರಬೇತಿ

  15 ದಿನಗಳಿಂದ ತರುಣ್ ಸುಧೀರ್ ತರಬೇತಿ

  ಕಳೆದ ಕೆಲವು ದಿನಗಳಿಂದ ಮಾಲಾಶ್ರೀ ಪುತ್ರಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಅನ್ನೋ ಮಾತು ಕೇಳಿ ಬರುತ್ತಲೇ ಇತ್ತು. ಆದರೆ, ಯಾವ ಪ್ರಾಜೆಕ್ಟ್‌ಗೆ ಎಂಟ್ರಿ ಕೊಡುತ್ತಾರೆ ಅನ್ನೋ ಸುಳಿವು ಮಾತ್ರ ಇರಲಿಲ್ಲ. ಈ ಮಧ್ಯೆ ಕನ್ನಡ ಚಿತ್ರರಂಗದ ಗಣ್ಯರು ಮಾಲಾಶ್ರೀ ಪುತ್ರಿಯನ್ನು ಚಿತ್ರರಂಗಕ್ಕೆ ಪರಿಚಯಿಸುವ ಹಂಬಲ ವ್ಯಕ್ತಪಡಿಸಿದ್ದರು. ಈ ವೇಳೆ ಹಲವು ನಿರ್ದೇಶಕರ ಹೆಸರು ಕೂಡ ಕೇಳಿ ಬಂದಿತ್ತು. ಕೊನೆಗೂ ಈಗ ತರುಣ್ ಸುಧೀರ್ ಇಂಟ್ರುಡ್ಯೂಸ್ ಮಾಡಲಿದ್ದಾರೆ ಎನ್ನಲಾಗಿದೆ. ಅಲ್ಲದೆ ತರುಣ್ ಸುಮಾರು 15 ದಿನಗಳಿಂದ ತರಬೇತಿಯನ್ನೂ ನೀಡುತ್ತಿದ್ದಾರೆ ಎನ್ನಲಾಗಿದೆ.

  ಹೆಸರು ಬದಲಿಸಿ ಚಿತ್ರರಂಗಕ್ಕೆ ಪರಿಚಯ

  ಹೆಸರು ಬದಲಿಸಿ ಚಿತ್ರರಂಗಕ್ಕೆ ಪರಿಚಯ

  ಅಂದ್ಹಾಗೆ, ಮಾಲಾಶ್ರೀ ಪುತ್ರಿಯ ಒರಿಜಿನಲ್ ಹೆಸರು ಅನನ್ಯಾ ರಾಮು. ಆದ್ರೀಗ ಸಿನಿಮಾಗೆ ಎಂಟ್ರಿ ಕೊಡುತ್ತಿರುವುದರಿಂದ ಚಿತ್ರತಂಡ ಮಾಲಾಶ್ರೀ ಪುತ್ರಿಯ ಹೆಸರನ್ನು ಬದಲಾಯಿಸಿದೆ. ನಾಳೆ (ಆಗಸ್ಟ್ 05) ಮಾಲಾಶ್ರೀ ಪುತ್ರಿ ರಾಧನಾ ರಾಮ್ ಅನ್ನೋ ಹೆಸರಲ್ಲಿ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ. ಹೀಗಾಗಿ ದರ್ಶನ್ ಹಾಗೂ ಮಾಲಾಶ್ರೀ ಇಬ್ಬರ ಫ್ಯಾನ್ಸ್ ಫಸ್ಟ್ ಲುಕ್ ನೋಡಲು ಕಾತುರದಿಂದ ಕಾದು ಕೂತಿದ್ದಾರೆ.

  56ನೇ ಸಿನಿಮಾದ ಟೈಟಲ್ ಏನು?

  56ನೇ ಸಿನಿಮಾದ ಟೈಟಲ್ ಏನು?

  ಚಾಲೆಂಜಿಂಗ್ 56ನೇ ಸಿನಿಮಾದ ನಾಯಕಿ ಯಾರು? ಅನ್ನೋ ಕುತೂಹಲ ಎಷ್ಟಿತ್ತೊ, ಅಷ್ಟೇ ಕುತೂಹಲ ಟೈಟಲ್ ಬಗ್ಗೆನೂ ಇದೆ. D56 ಸಿನಿಮಾ ವಿಚಾರದಲ್ಲಿ ಎರಡು ಟೈಟಲ್ ಓಡಾಡುತ್ತಿತ್ತು. ಒಂದು 'ಕಾಟೇರಾ' ಇನ್ನೊಂದು 'ಚೌಡಯ್ಯ'. ಈ ಎರಡರಲ್ಲಿ ಒಂದು ಟೈಟಲ್ ಫಿಕ್ಸ್ ಆಗಿದ್ದು, ಇದರಲ್ಲಿ 'ಕಾಟೇರಾ' ಅನ್ನೋದನ್ನು ಫೈನಲ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇವೆಲ್ಲಾ ಏನೇ ಇದ್ದರೂ, ನಾಳೆ (ಆಗಸ್ಟ್ 05) ಬೆಳಗ್ಗೆ 9.45ಕ್ಕೆ ರಿವೀಲ್ ಆಗಲಿದೆ.

  English summary
  Malashri Daughter Making Debut With Darshan 56th Movie Raadhana Ram, Know More.
  Friday, August 5, 2022, 9:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X