»   » ನಟಿ ಹೇಮಶ್ರೀ ಬಿಟ್ಟು ಹೋದ ಪ್ರಶ್ನೆಗಳ ಸರಮಾಲೆ

ನಟಿ ಹೇಮಶ್ರೀ ಬಿಟ್ಟು ಹೋದ ಪ್ರಶ್ನೆಗಳ ಸರಮಾಲೆ

By: ಉದಯರವಿ
Subscribe to Filmibeat Kannada
Actress Hemashree
ತನಗೆ ಮದುವೆ ಇಷ್ಟವಿಲ್ಲ ಎಂದು ಹೇಳಿದ್ದ ಹೇಮಾಶ್ರೀ ಗುರುಹಿರಿಯರ ಬಲವಂತಕ್ಕೆ ಮದುವೆಯಾದೆ ಎಂದಿದ್ದರು. ತನಗೂ ಹಾಗೂ ತನ್ನ ಪತ್ನ್ನಿಗೂ ವಯಸ್ಸಿನಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂಬುದು ಪ್ರಮುಖ ಆರೋಪ. ಕೇವಲ ಇದಿಷ್ಟೇ ಕಾರಣವೇ?

ಆತನಿಗೆ ಈಗಾಗಲೆ ಮದುವೆಯಾಗಿದೆ ಎಂದೂ ಹೇಮಶ್ರೀ ಹೇಳಿಕೊಂಡಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೂ ಏರಿದ್ದರಂತೆ. ಇಷ್ಟೆಲ್ಲಾ ಆದರೂ ಯಾಕೆ ಆಕೆಯ ಸಮಸ್ಯೆಗೆ ಪರಿಹಾರ ಸಿಗಲಿಲ್ಲ?

ಹೇಮಶ್ರೀ ಪೋಷಕರದು ತಪ್ಪೇ ಇಲ್ಲವೇ? ಅವರ್‍ಯಾಕೆ ಈ ರೀತಿಯ ನಿರ್ಧಾರ ತೆಗೆದುಕೊಂಡರು. ಕೇವಲ ಹಣವೊಂದೇ ಕಾರಣವೇ? ಯಾವ ತಂದೆತಾಯಿಯಾದರೂ ಮಕ್ಕಳ ಸುಖವನ್ನಷ್ಟೇ ಬಯಸುತ್ತಾರೆ ತಾನೆ? ಹೇಮಶ್ರೀ ವಿಚಾರದಲ್ಲಿ ಹೀಗೇಕಾಯಿತು?

ಆತನೊಂದಿಗೆ ಬಾಳಲು ಇಷ್ಟವಿಲ್ಲ ಎಂದ ಮೇಲೆ ವಿಚ್ಛೇದನ ಪಡೆಯಬಹುದಿತ್ತಲ್ಲವೇ? ಅದು ಏಕೆ ಸಾಧ್ಯವಾಗಲಿಲ್ಲ? ತನಗೆ ತನ್ನ ಪತಿ ಹಾಗೂ ತಾಯಿಯಿಂದಲೇ ಜೀವ ಬೆದರಿಕೆ ಇದೆ ಎಂದು ದೂರು ಕೊಟ್ಟಿದ್ದರಂತೆ ಹೌದೆ?

ಆಕೆಯ ಅಂತ್ಯಕ್ರಿಯೆ ಸಹ ತರಾತುರಿಯಲ್ಲಿ ನಡೆದಿದ್ದೇಕೆ? ಹೀಗೆ ಪ್ರಶ್ನೆಗಳ ಸರಮಾಲೆಯೇ ಇದೆ ಹೊರತು ಉತ್ತರಗಳು ಮಾತ್ರ ಸ್ಪಷ್ಟವಾಗಿಲ್ಲ. ಈ ಎಲ್ಲಾ ಪ್ರಶ್ನೆಗಳು ಹೇಮಶ್ರೀ ಅವರ ಅಭಿಮಾನಿಗಳು ಹಾಗೂ ಆಕೆಯನ್ನು ಹತ್ತಿರದಿಂದ ಬಲ್ಲವರ ತಲೆ ಕೊರೆಯುತ್ತಿವೆ. ಉತ್ತರ ಆ ದೇವರಿಗೇ ಗೊತ್ತು.

English summary
Many questions are rises on Kannada actress H.N.Hemashree mysterious death. Her father Nagaraj filed a complaint with police, accusing her husband, R Surendra Babu, 48, of murdering her.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada