»   » ಮರಾಠಿಯ 'ಆರ್ಚೀ' ಕನ್ನಡಕ್ಕೂ ಬರ್ತಾರಾ ಏನ್ಕತೆ.?

ಮರಾಠಿಯ 'ಆರ್ಚೀ' ಕನ್ನಡಕ್ಕೂ ಬರ್ತಾರಾ ಏನ್ಕತೆ.?

By: Suni
Subscribe to Filmibeat Kannada

ಮರಾಠಿಯ ಬ್ಲಾಕ್ ಬಸ್ಟರ್ 'ಸೈರತ್'(ಸೈರಟ್) ಚಿತ್ರವನ್ನು ಕನ್ನಡದಲ್ಲಿ ರೀಮೇಕ್ ಮಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಮರಾಠಿಯಲ್ಲಿ ಕೋಟಿ ಕೋಟಿ ಬಾಚಿಕೊಂಡ 'ಸೈರತ್' ಚಿತ್ರಕ್ಕೆ ಕನ್ನಡದಲ್ಲಿ ಖ್ಯಾತ ನಿರ್ದೇಶಕ ಎಸ್ ನಾರಾಯಣ್ ಅವರು ಆಕ್ಷನ್-ಕಟ್ ಹೇಳಲಿದ್ದಾರೆ.

ಅಂದಹಾಗೆ ಮರಾಠಿಯಲ್ಲಿ ನಾಯಕಿಯ ಪಾತ್ರ ವಹಿಸಿದ್ದ 'ಆರ್ಚೀ'(ರಿಂಕು ರಾಜ್ ಗುರು)ಯ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡಬಹುದು ಅನ್ನೋ ಕುತೂಹಲ ಮರಾಠಿ ಸಿನಿಮಾ ನೋಡಿದವರಲ್ಲಿ ಮನೆ ಮಾಡಿತ್ತು. ಅಷ್ಟಕ್ಕೂ ಈ ಕುತೂಹಲ ಮೂಡಲು ಪ್ರಮುಖ ಕಾರಣ ಏನಪ್ಪಾ ಅಂದ್ರೆ ಈ ಇಡೀ ಚಿತ್ರದಲ್ಲಿ 16 ವರ್ಷದ ನಟಿ ರಿಂಕು ರಾಜ್ ಗುರು ಅವರು ಎಲ್ಲರ ಕೇಂದ್ರ ಬಿಂದುವಾಗಿದ್ದರು.[ಮರಾಠಿ ರೀಮೇಕ್ ಗೆ ಹೆಗಲು ಕೊಡ್ತಾರಾ ಕಲಾ ಸಾಮ್ರಾಟ್.?]

Marathi Actress Rinku Rajguru to play lead in kannada version of 'Sairat'

ಅದ್ಭುತವಾಗಿ ನಟಿಸುವ ಮೂಲಕ ಇಡೀ ಚಿತ್ರವನ್ನು ಕಲರ್ ಫುಲ್ ಮಾಡುವಲ್ಲಿ ರಿಂಕು ಅವರು ಸಫಲರಾಗಿದ್ದರು. ಇದೀಗ ಮರಾಠಿಯ 'ಸೈರತ್' ನಲ್ಲಿ 'ಆರ್ಚೀ' ಆಗಿ ರಿಂಕು ರಾಜ್ ಗುರು ಮತ್ತು 'ಪರ್ಶ್ಯಾ' ಆಗಿ ನಟ ಆಕಾಶ್ ಟೋಸರ್ ಮಾಡಿದ ಪಾತ್ರವನ್ನು ಕನ್ನಡದಲ್ಲಿ ಯಾರು ಮಾಡುತ್ತಾರೆ ಅಂತ ಭಾರಿ ಕುತೂಹಲ ಮೂಡಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಮರಾಠಿಯಲ್ಲಿ ರಿಂಕು ರಾಜ್ ಗುರು ಅವರು ನಿರ್ವಹಿಸಿದ್ದ ಪಾತ್ರಕ್ಕಾಗಿ ಬರೋಬ್ಬರಿ 2 ಸಾವಿರ ಕಲಾವಿದರನ್ನು ಆಡಿಷನ್ ನಡೆಸಲಾಯಿತು.[ಮರಾಠಿ ಚಿತ್ರದ ಮೇಲೆ ರಾಕ್ ಲೈನ್ ವೆಂಕಟೇಶ್ ಕಣ್ಣು ಬಿದ್ದದ್ದು ಹೇಗೆ.?]

Marathi Actress Rinku Rajguru to play lead in kannada version of 'Sairat'

ಆದರೆ ಆ ಪಾತ್ರಕ್ಕೆ ಹೊಂದಾಣಿಕೆ ಆಗೋ ಮುಖಗಳು ನಿರ್ದೇಶಕರಿಗೆ ಸಿಕ್ಕಿಲ್ಲ. ಆದ್ದರಿಂದ ಕನ್ನಡಕ್ಕೂ ರಿಂಕು ಅವರನ್ನೇ ಕರೆತಂದರೆ ಹೇಗಿರಬಹುದು ಅಂತ ನಿರ್ಮಾಪಕ ರಾಕ್ ಲೈನ್ ಅವರು ಯೋಚನೆ ಮಾಡಿದ್ದಾರಂತೆ.

ಅದ್ದರಿಂದ ಈಗಾಗಲೇ ರಿಂಕು ಅವರ ಜೊತೆ ಮಾತುಕತೆ ನಡೆಸಿದ್ದು, ಅವರ ಹಸಿರು ನಿಶಾನೆಗಾಗಿ ಚಿತ್ರತಂಡ ತುದಿಗಾಲಲ್ಲಿ ಕಾಯುತ್ತಿದೆ. ಅದೇ ರೀತಿ ಚಿತ್ರದ ನಾಯಕನ ಪಾತ್ರಕ್ಕೂ ಹುಡುಕಾಟ ನಡೆದಿದ್ದು, ಸೂಕ್ತ ನಟ ಸಿಕ್ಕ ತಕ್ಷಣ ಸಿನಿಮಾ ಸೆಟ್ಟೇರಲಿದೆ.[ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್]

Marathi Actress Rinku Rajguru to play lead in kannada version of 'Sairat'

ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಮರಾಠಿ 'ಸೈರತ್'ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದ ಅಜಯ್ ಅತುಲ್ ಅವರನ್ನು ಕನ್ನಡಕ್ಕೆ ಕರೆಸಿಕೊಳ್ಳುವ ಬಗ್ಗೆ ಕೂಡ ಮಾತು-ಕತೆ ನಡೆದಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮರಾಠಿ ಸಂಗೀತ ನಿರ್ದೇಶಕ ಹಾಗೂ ನಟಿ ರಿಂಕು ರಾಜ್ ಗುರು ಅವರು ಸ್ಯಾಂಡಲ್ ವುಡ್ ಗೆ ಬಲಗಾಲಿಟ್ಟು ಒಳಬರುವ ಸಾಧ್ಯತೆ ಇದೆ. ಒಟ್ನಲ್ಲಿ ಏನೇನು ಬೆಳವಣಿಗೆಗಳು ಆಗುತ್ತವೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Marathi Actress Rinku Rajguru who has been roped into play the lead role in the kannada version of Marathi Movie 'Sairat'. The movie is Produced by Rockline Venkatesh and Directed by S.Narayan.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada