»   » 'ನೀರ್ ದೋಸೆ' ಬಿಡಿ ಇನ್ಮುಂದೆ 'ಮಸಾಲೆ ದೋಸೆ' ತಿನ್ನೋ ಕಾಲನೂ ಬರುತ್ತೆ

'ನೀರ್ ದೋಸೆ' ಬಿಡಿ ಇನ್ಮುಂದೆ 'ಮಸಾಲೆ ದೋಸೆ' ತಿನ್ನೋ ಕಾಲನೂ ಬರುತ್ತೆ

Posted By: ಭರತ್
Subscribe to Filmibeat Kannada

ದತ್ತಣ್ಣ: ಈ ಮಸಾಲೆ ದೋಸೆ ಚಿತ್ರದಿಂದ ಅರ್ಧಕ್ಕೆ ಹೊರಗೆ ಹೋಗಿದ್ದಾಳಲ್ಲಾ ಆ ಚಿತ್ರ ನಟಿ ಸೌಮ್ಯ...ಅಯಮ್ಮ ಹೆಂಗೋ..?

ಜಗ್ಗೇಶ್: ಅವರು ಒಂಥರ ಅವರೆಕಾಯಿ ಇದ್ದಂಗೆ, ಹುಳ ಇದ್ರೂ ಸೊಗಡು ಜಾಸ್ತಿ.!


ಜಗ್ಗೇಶ್ ಅಭಿನಯದ 'ನೀರ್ ದೋಸೆ' ಸಿನಿಮಾ ಎಷ್ಟು ಸಕ್ಸಸ್ ಆಯ್ತೋ...ಅಷ್ಟೇ ಹಿಟ್ ಆಗಿದ್ದು ಈ ಮಸಾಲೆ ದೋಸೆ ಡೈಲಾಗ್. ಯಾಕಂದ್ರೆ, ಎಲ್ಲರಿಗೂ ಗೊತ್ತಿರುವ ಹಾಗೆ ಇದು ಸ್ಯಾಂಡಲ್ ವುಡ್ ನ ಮಾಜಿ ಕ್ವೀನ್, ಮಂಡ್ಯದ ಮಾಜಿ ಸಂಸದೆ ರಮ್ಯಾ ಅವರಿಗೆ ಬಿಟ್ಟ ಬಾಣ. ಈ ಡೈಲಾಗ್ ಟ್ವಿಟ್ಟರ್ ನಲ್ಲಿ ಯದ್ವಾ ತದ್ವಾ ಟ್ರೆಂಡಿಂಗ್ ಬೇರೆ ಆಗಿತ್ತು.[ವಿಮರ್ಶೆ : ಬಾಡೂಟದ ಜೊತೆ 'ನೀರ್ ದೋಸೆ' ಸವಿದಂತೆ ಇದೇ ಜಗ್ಗೇಶ.!]


ಅಂದ್ಹಾಗೆ, ಈ ಡೈಲಾಗ್ ಗೂ, ಜಗ್ಗೇಶ್ ಗೂ ಮತ್ತು ರಮ್ಯಾಗೂ ನಂಟಿರೋ ಸಂಗತಿ ಬಗ್ಗೆ ನಿಮಗೆ ಸ್ವಲ್ಪ ಫ್ಲ್ಯಾಶ್ ಬ್ಯಾಕ್ ಹೇಳ್ತೀವಿ ಕೇಳಿ...ಎಲ್ಲರಿಗೂ ಗೊತ್ತಿರೋ ಹಾಗೆ 'ನೀರ್ ದೋಸೆ' ಚಿತ್ರದಲ್ಲಿ ರಮ್ಯಾ ನಾಯಕಿಯಾಗಿ ಅಭಿನಯಿಸಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಅವರು ಚಿತ್ರದಿಂದ ಹೊರಬಂದ್ರು.


ಅದಾದ ಮೇಲೆ ನಟ ಜಗ್ಗೇಶ್ ಗೂ ರಮ್ಯಾಗೂ ಟ್ವಿಟ್ಟರ್ ವಾರ್ ಕೂಡ ಆಗಿತ್ತು. ಅಮೇಲೆನೇ ರಮ್ಯಾ ಜಾಗಕ್ಕೆ ಹರಿಪ್ರಿಯಾ ಬಂದಿದ್ದು. ಆದ್ರೂ, ರಮ್ಯಾನ ಬಿಟ್ಟರೂ ಬಿಡದ ಚಿತ್ರತಂಡ ಅವರ ನೆನಪಿಗಾಗಿಯೇ 'ಮಸಾಲೆ ದೋಸೆ ಸೌಮ್ಯ' ಅಂತ ಡೈಲಾಗ್ ಕ್ರಿಯೇಟ್ ಮಾಡಿದ್ದು ಅನ್ನೋದ್ರಲ್ಲಿ ಅನುಮಾನ ಬೇಡ. ಮುಂದೆ ಓದಿ...


ಟೈಟಲ್ ರಿಜಿಸ್ಟರ್ ಆಯ್ತು

ಈಗ ಈ ಫ್ಲ್ಯಾಶ್ ಬ್ಯಾಕ್ ಬಗ್ಗೆ ನಾವು ಹೇಳಲು ಕಾರಣ ಒನ್ಸ್ ಅಗೇನ್ 'ಮಸಾಲೆ ದೋಸೆ ಸೌಮ್ಯ'. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ 'ಮಸಾಲೆ ದೋಸೆ ಸೌಮ್ಯ' ಅಂತ ಟೈಟಲ್ ಬೇರೆ ಈಗಾಗಲೇ ರಿಜಿಸ್ಟರ್ ಆಗಿದೆ.[ನಟ ಜಗ್ಗೇಶ್ ಬಾಯಲ್ಲಿ ನಟಿ ರಮ್ಯಾ ಬಗ್ಗೆ ಎಂತಹ ಮಾತು!?]


ಜಗ್ಗಣ್ಣ 'ಮಸಾಲೆ ದೋಸೆ' ತಿನ್ನಿಸ್ತಾರಂತೆ

ಅಷ್ಟಕ್ಕೂ, ಈ ಟೈಟಲ್ ರಿಜಿಸ್ಟ್ರರ್ ಮಾಡಿರೋದು ಯಾರು ಅಂತಾ ಗೊತ್ತಾದ್ರೆ ನೀವೂ ಕೂಡ ಶಾಕ್ ಆಗ್ಬಿಡ್ತೀರಾ.! 'ಮಸಾಲೆ ದೋಸೆ ಸೌಮ್ಯ' ಅಂತಾ ಟೈಟಲ್ ನೊಂದಣಿ ಮಾಡಿರೋದು ಬೇರ್ಯಾರೂ ಅಲ್ಲ, ನವರಸ ನಾಯಕ ಜಗ್ಗೇಶ್!.['ನೀರ್ ದೋಸೆ' ಬೇಡ ಅಂತ ತಳ್ಳಿದ ರಮ್ಯಾ ಬಗ್ಗೆ ಚಿತ್ರದಲ್ಲಿ ಕೊಂಕು ನುಡಿ.?!]


ಜಗ್ಗೇಶ್ ದಂಪತಿಯಿಂದ ಶೀರ್ಷಿಕೆ ನೋಂದಣೆ

ಹೌದು, 'ನೀರ್ ದೋಸೆ' ಚಿತ್ರ ಬಿಡುಗಡೆಯಾದ ದಿನವೇ ಗುರುರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಪರಿಮಳ ಜಗ್ಗೇಶ್ ಅವರು, ದಂಪತಿ ಸಮೇತ ಹೋಗಿ ಈ ಶೀರ್ಷಿಕೆ ನೋಂದಾಯಿಸಿದ್ದಾರಂತೆ. ಹೀಗಾಗಿ 'ಮಸಾಲೆ ದೋಸೆ ಸೌಮ್ಯ' ಬಗ್ಗೆ ಈಗ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ.[ಕಲೆಕ್ಷನ್ ರಿಪೋರ್ಟ್: ಬಿಸಿಬಿಸಿಯಾಗಿ ಸೇಲಾದ 'ನೀರ್ ದೋಸೆ']


ರಮ್ಯಾ ಬಗ್ಗೆ ಸಿನಿಮಾನಾ?

'ಮಸಾಲೆ ದೋಸೆ ಸೌಮ್ಯ' ಅಂತ ಜಗ್ಗೇಶ್ ಸಿನಿಮಾ ಮಾಡ್ತಾರಾ? ಒಂದ್ವೇಳೆ ಅವರು ಮಾಡಿದರೂ ಅದು ರಮ್ಯಾ ಕುರಿತ ಸಿನಿಮಾ ಆಗಿರುತ್ತಾ ಎಂಬುದು ಸದ್ಯಕ್ಕೆ ಎಲ್ಲರ ತಲೆಯಲ್ಲಿ ಇರುವ ಪ್ರಶ್ನೆಗಳು. ಈ ಎಲ್ಲಾ ಪ್ರಶ್ನೆಗಳಿಗೆ ಕಾಲವೇ ಉತ್ತರ ನೀಡಬೇಕು.[ಪಾಕ್ ಹೊಗಳಿದ ರಮ್ಯಾಗೆ ಛೀಮಾರಿ ಹಾಕಿದ ನಟ ಜಗ್ಗೇಶ್]


English summary
Kannada Actor Jaggesh registered title for his upcoming movie is 'Masala Dosa Sowmya'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada