»   » ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ.!

ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ.!

Posted By:
Subscribe to Filmibeat Kannada
ಕುರುಕ್ಷೇತ್ರದ 'ಬಿಗ್' ನ್ಯೂಸ್: ದರ್ಶನ್ ಗೆ ಕನ್ನಡದ ಸ್ಟಾರ್ ನಟಿ ನಾಯಕಿ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕೊನೆಯ ಹಂತ ತಲುಪಿದ್ದು, ಗದಾಯುದ್ಧ ದೃಶ್ಯವನ್ನ ಚಿತ್ರೀಕರಿಸುವುದಕ್ಕೆ ಸಖಲ ತಯಾರಿ ಆಗುತ್ತಿದೆ.

ಇದರ ಬೆನ್ನಲ್ಲೇ ಈಗ 'ಕುರುಕ್ಷೇತ್ರ' ಅಡ್ಡದಿಂದ ಬಿಗ್ ನ್ಯೂಸ್ ವೊಂದು ಹೊರಬಿದ್ದಿದೆ. ದುರ್ಯೋಧನ ದರ್ಶನ್ ಗೆ ನಾಯಕಿ ಅಂತಿಮವಾಗಿದ್ದಾರೆ. ಅದು ಕನ್ನಡದ ನಟಿಯೇ ಜೋಡಿಯಾಗುತ್ತಿರುವುದು ಸ್ಯಾಂಡಲ್ ವುಡ್ ಗೆ ಖುಷಿ ಕೊಟ್ಟಿದೆ.

ಹಾಗಿದ್ರೆ, ದರ್ಶನ್ ಅವರ 50ನೇ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಯಾರು? ಎಂದು ತಿಳಿಯಲು ಮುಂದೆ ಓದಿ.....

ಕುರುಕ್ಷೇತ್ರಕ್ಕೆ ಮೇಘನಾ ಎಂಟ್ರಿ

ಸ್ಯಾಂಡಲ್ ವುಡ್ ನ ಬಹುದೊಡ್ಡ ತಾರಬಳಗ ಮತ್ತು ದೊಡ್ಡ ಬಜೆಟ್ ಸಿನಿಮಾ ಕುರುಕ್ಷೇತ್ರಕ್ಕೆ ಕನ್ನಡ ನಟಿ ಮೇಘನಾ ರಾಜ್ ಎಂಟ್ರಿ ಕೊಟ್ಟಿದ್ದಾರೆ.

ಡಬ್ಬಿಂಗ್ ಮಾಡಲು ಸಜ್ಜಾದ ದರ್ಶನ್ 'ಕುರುಕ್ಷೇತ್ರ' ತಂಡ

ದುರ್ಯೋಧನನಿಗೆ ನಾಯಕಿ

ಕುರುಕ್ಷೇತ್ರದಲ್ಲಿ ಮೇಘನಾ ರಾಜ್ ದುರ್ಯೋಧನ ದರ್ಶನ್ ಅವರಿಗೆ ಜೋಡಿಯಾಗಿದ್ದು, ಭಾನುಮತಿ ಪಾತ್ರ ನಿರ್ವಹಿಸಲಿದ್ದಾರಂತೆ.

'ಗದಾಯುದ್ದಕ್ಕೆ' ದರ್ಶನ್ ಸಜ್ಜು: ಫೆಬ್ರವರಿಯಲ್ಲಿ 'ಕುರುಕ್ಷೇತ್ರ' ದರ್ಶನ

ರೆಜಿನಾ, ರಮ್ಯಾ ಬದಲು ಮೇಘನಾ

ಈ ಮುಂಚೆ ಭಾನುಮತಿ ಪಾತ್ರಕ್ಕೆ ದಕ್ಷಿಣ ಭಾರತದ ಖ್ಯಾತ ನಟಿಯರಾದ ರೆಜಿನಾ ಮತ್ತು ರಮ್ಯಾ ನಂಬಿಸೇನ್ ಆಯ್ಕೆ ಆಗಿದ್ದರು ಎನ್ನಲಾಗಿತ್ತು. ಆದ್ರೀಗ, ಅವರಿಬ್ಬರ ಬದಲು ಮೇಘನಾ ಅವಕಾಶ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ದರ್ಶನ್ ಪತ್ನಿಯಾದ ನಟಿ ರಮ್ಯಾ!

ಮೊದಲ ಬಾರಿಗೆ ದರ್ಶನ್ ಸಿನಿಮಾ

ಲೂಸ್ ಮಾದ ಯೋಗೇಶ್, ರಾಕಿಂಗ್ ಸ್ಟಾರ್ ಯಶ್, ಶ್ರೀನಗರ ಕಿಟ್ಟಿ, ಚಿರಂಜೀವಿ ಸರ್ಜಾ, ಧನಂಜಯ್ ಅಂತಹ ಸ್ಟಾರ್ ನಟರ ಜೊತೆ ಅಭಿನಯಿಸಿರುವ ಮೇಘನಾ, ಇದೇ ಮೊದಲ ಬಾರಿಗೆ ದರ್ಶನ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ದರ್ಶನ್ 'ಕುರುಕ್ಷೇತ್ರ'ದ ಬಗ್ಗೆ ಗುಸುಗುಸು: ಚಿತ್ರತಂಡದ ವಿರುದ್ಧ ಅಂಬರೀಶ್ ಮುನಿಸು.!

'ಅಲ್ಲಮ' ಚಿತ್ರದಲ್ಲಿ ಮೇಘನಾ ಗಮನ

ಇದಕ್ಕು ಮುಂಚೆ ಟಿ.ಎಸ್ ನಾಗಾಭರಣ ಅವರ ನಿರ್ದೇಶನದಲ್ಲಿ ಮೂಡಿ ಬಂದಿದ್ದ 'ಅಲ್ಲಮ' ಚಿತ್ರದಲ್ಲಿ ಮೇಘನಾ ನಾಯಕಿ ಆಗಿ ಕಾಣಿಸಿಕೊಂಡಿದ್ದು, ಪೌರಾಣಿಕ ಪಾತ್ರವನ್ನ ನಿಭಾಯಿಸಿದ್ದರು. ಹೀಗಾಗಿ, ಕುರುಕ್ಷೇತ್ರ ಚಿತ್ರದಲ್ಲಿ ಭಾನುಮತಿ ಪಾತ್ರಕ್ಕೆ ಮೇಘನಾ ಸೂಕ್ತ ಎನ್ನಲಾಗಿದೆ.

'ಕುರುಕ್ಷೇತ್ರ' ಚಿತ್ರದ ಮೇಕಪ್, ಕಾಸ್ಟ್ಯೂಮ್ ರಿಜೆಕ್ಟ್ ಮಾಡಿದ್ದ ರವಿಚಂದ್ರನ್.!

'ಇರುವುದೆಲ್ಲವ ಬಿಟ್ಟು' ನಂತರ 'ಕುರುಕ್ಷೇತ್ರ'

ಕಳೆದ ತಿಂಗಳು ನಟ ಚಿರಂಜೀವಿ ಸರ್ಜಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಮೇಘನಾ, 'ಇರುವುದೆಲ್ಲವ ಬಿಟ್ಟು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಕುರುಕ್ಷೇತ್ರದಲ್ಲೂ ಭಾಗಿಯಾಗಲಿದ್ದಾರೆ ಸ್ಟಾರ್ ದಂಪತಿಯ ಪುತ್ರಿ.

ಮೊದಲ ಬಾರಿಗೆ ಒಂದೇ ಸಿನಿಮಾದಲ್ಲಿ ಮೇಘನಾ ರಾಜ್, ತಿಲಕ್ ನಟನೆ

English summary
Kannada Actress Meghana Raj would be playing the role of Bhanumathi who is wife of Duryodhana in kurukshetra. ದರ್ಶನ್ ಅಭಿನಯಿಸುತ್ತಿರುವ ಕುರುಕ್ಷೇತ್ರ ಚಿತ್ರದಲ್ಲಿ ಕನ್ನಡ ನಟಿ ಮೇಘನಾ ರಾಜ್ ನಾಯಕಿಯಾಗಿ ಅಭಿನಯಿಸಲಿದ್ದಾರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada