For Quick Alerts
  ALLOW NOTIFICATIONS  
  For Daily Alerts

  ನರೇಶ್ ಜೊತೆಗಿನ ಅಫೇರ್ ವಿವಾದ: ಸ್ಟಾರ್ ನಟನಿಂದ ಪವಿತ್ರಾ ಲೋಕೇಶ್‌ಗೆ ಕಹಿ ಅನುಭವ?

  |

  ತೆಲುಗು ನಟ ನರೇಶ್ ಜೊತೆಗಿನ ಪವಿತ್ರಾ ಲೋಕೇಶ್ ಮದುವೆ ವಿವಾದ ಕೆಲ ದಿನಗಳಿಂದ ಭಾರೀ ಸದ್ದು ಮಾಡಿತ್ತು. ಇದೀಗ ಎಲ್ಲವೂ ತಣ್ಣಗಾಗಿದ್ದು, ಮೈಸೂರು ಮೂಲದ ನಟಿ ಸಿನಿಮಾ ಶೂಟಿಂಗ್ ಸದ್ಯ ಹೈದರಾಬಾದ್‌ನಲ್ಲೇ ವಾಸ್ತವ್ಯ ಹೂಡಿದ್ದಾರೆ. ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚಿ ನಟಿಸುತ್ತಿದ್ದಾರೆ. ಈ ನಡುವೆ ಪವಿತ್ರಾ ಲೋಕೇಶ್ ಅವರಿಗೆ ತೆಲುಗಿನ ಸ್ಟಾರ್‌ ನಟನಿಂದ ಅವಮಾನವಾಗಿದೆ ಅನ್ನುವ ಮಾತುಗಳು ಕೇಳಿಬರುತ್ತಿದೆ.

  ಕಳೆದ ಕೆಲ ದಿನಗಳಿಂದ ತೆಲುಗು ಸಿನಿಮಾಗಳ ಚಿತ್ರೀಕರಣಕ್ಕೆ ಬ್ರೇಕ್ ಬಿದ್ದಿತ್ತು. ಕೋವಿಡ್ ಬಳಿಕ ಪ್ರೇಕ್ಷಕರು ಥಿಯೇಟರ್‌ ಬರುತ್ತಿಲ್ಲ. ನಿರ್ಮಾಪಕರಿಗೆ ಬಹಳ ನಷ್ಟ ಆಗುತ್ತಿದೆ. ಚರ್ಚೆ ನಡೆಸಿ ಅದಕ್ಕೆ ಪರಿಹಾರ ಕಂಡುಕೊಳ್ಳುವವರೆಗೂ ಸಿನಿಮಾ ಚಿತ್ರೀಕರಣ ಮಾಡುವುದು ಬೇಡ ಎಂದು ನಿರ್ಧರಿಸಿದ್ದರು. ಇದೀಗ ಒಂದಷ್ಟು ನಿಯಮಗಳನ್ನು ಪಾಲಿಸುವ ಮೂಲಕ ಸಿನಿಮಾಗಳಿಂದ ನಷ್ಟವಾಗದಂತೆ ನೋಡಿಕೊಳ್ಳಲು ತೀರ್ಮಾನ ಕೈಗೊಳ್ಳಲಾಗಿದೆ. ಹಾಗಾಗಿ ಮತ್ತೆ ಸಿನಿಮಾಗಳ ಚಿತ್ರೀಕರಣಕ್ಕೆ ಚಾಲನೆ ಸಿಗುತ್ತಿದೆ. ಇಂತಹ ಹೊತ್ತಲ್ಲೇ ತೆಲುಗು ಚಿತ್ರಗಳಲ್ಲಿ ನಟಿಸುತ್ತಿರುವ ಪವಿತ್ರಾ ಲೋಕೇಶ್ ಅವರಿಗೆ ಕಹಿ ಅನುಭವ ಎದುರಾಗಿದೆ ಎನ್ನಲಾಗುತ್ತಿದೆ.

  ನರೇಶ್ ಮದುವೆ ಮುರಾಬಟ್ಟೆ ಎಂಬುದು ಮೊದಲೇ ಗೊತ್ತಿತ್ತು! ಆದರೂ...ನರೇಶ್ ಮದುವೆ ಮುರಾಬಟ್ಟೆ ಎಂಬುದು ಮೊದಲೇ ಗೊತ್ತಿತ್ತು! ಆದರೂ...

  ಪವಿತ್ರಾ ಲೋಕೇಶ್, ತೆಲುಗು ನಟ​​​​​​​​​​ ನರೇಶ್ ಅವರನ್ನು ಮದುವೆಯಾಗಿದ್ದಾರೆ, ಅವರಿಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ನನ್ನ ಹಾಗೂ ನರೇಶ್ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ನಟಿ ಪವಿತ್ರಾ ಲೋಕೇಶ್ ಕಾರಣ ಎಂದು ನರೇಶ್ 3ನೇ ಪತ್ನಿ ರಮ್ಯಾ ರಘುಪತಿ ಆರೋಪ ಮಾಡಿದ ಮೇಲೆ ವಿವಾದ ತಾರಕಕ್ಕೇರಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಪವಿತ್ರಾ ಲೋಕೇಶ್, ನಾನು ಹಾಗೂ ನರೇಶ್ ಒಳ್ಳೆ ಸ್ನೇಹಿತರು . ರಮ್ಯಾ ರಘುಪತಿಯವರು ಅವರ ವೈಯಕ್ತಿಕ ಕುಟುಂಬ ಕಲಹದಲ್ಲಿ ನನ್ನನ್ನು ಸುಮ್ಮನೆ ಎಳೆದುತರುತ್ತಿದ್ದಾರೆ. ಅವರ ನಡುವಿನ ಕಲಹಕ್ಕೂ ನನಗೂ ಸಂಬಂಧವೇ ಇಲ್ಲ ಎಂದಿದ್ದರು. ಆದರೆ ಇದರ ಬೆನ್ನಲ್ಲೇ ನರೇಶ್ ಹಾಗೂ ಪವಿತ್ರಾ ಲೋಕೇಶ್ ಮೈಸೂರಿನ ಹೋಟೆಲ್‌ವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು.

  ನಟಿ ಪವಿತ್ರಾ ಲೋಕೇಶ್‌ಗೆ ಅವಮಾನ?

  ನಟಿ ಪವಿತ್ರಾ ಲೋಕೇಶ್‌ಗೆ ಅವಮಾನ?

  ವಿವಾದದ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ನಟಿಸಿದ್ದ ರಾಮಾ ರಾವ್ ಆನ್ ಡ್ಯೂಟಿ ಸಿನಿಮಾ ಬಿಡುಗಡೆಯಾಗಿತ್ತು. ಆದರೆ ಯಾವುದೇ ಹೊಸ ಸಿನಿಮಾ ಶೂಟಿಂಗ್ ಶುರುವಾಗರಲಿಲ್ಲ. ಇದೀಗ ಸಿನಿಮಾಗಳ ಚಿತ್ರೀಕರಣ ಅರಂಭವಾಗಿದ್ದು, ಪವಿತ್ರಾ ಲೋಕೇಶ್‌ಗೆ ಕಹಿ ಅನುಭವ ಎದುರಾಗಿದೆಯಂತೆ. ಪವಿತ್ರಾ ಲೋಕೇಶ್‌ ಅವರನ್ನು ತಮ್ಮ ಸಿನಿಮಾದಿಂದ ಕೈಬಿಡುವಂತೆ ಸ್ಟಾರ್ ನಟನೊಬ್ಬ ನಿರ್ದೇಶಕರಿಗೆ ಮನವಿ ಮಾಡಿಕೊಂಡಿದ್ದರಂತೆ. ಚಿತ್ರದಲ್ಲಿ ಪವಿತ್ರಾ ಲೋಕೇಶ್ ತಾಯಿ ಪಾತ್ರದಲ್ಲಿ ನಟಿಸಲು ಆಯ್ಕೆ ಆಗಿದ್ದರಂತೆ. ಅವರನ್ನು ಕೈಬಿಟ್ಟು ಬೇರೆ ನಟಿಯನ್ನು ಆಯ್ಕೆ ಮಾಡಿಕೊಳ್ಳುವಂತೆ ಹೇಳಿದ್ದಾರಂತೆ. ಇದರಿಂದ ಪವಿತ್ರಾ ಲೋಕೇಶ್‌ಗೆ ಕಸಿವಿಸಿ ಉಂಟಾಯಿತು ಅನ್ನುವ ಮಾತುಗಳು ಫಿಲ್ಮ್ ನಗರ್‌ನಲ್ಲಿ ಚಕ್ಕರ್ ಹೊಡೀತಿದೆ.

  ಸಂಭಾವನೆ ಹೆಚ್ಚಿಸಿಕೊಂಡಿದ್ದರಾ ಪವಿತ್ರಾ ಲೋಕೇಶ್?

  ಸಂಭಾವನೆ ಹೆಚ್ಚಿಸಿಕೊಂಡಿದ್ದರಾ ಪವಿತ್ರಾ ಲೋಕೇಶ್?

  ಪವಿತ್ರಾ ಲೋಕೇಶ್ ಹಾಗೂ ನರೇಶ್ ವೈಯಕ್ತಿಕ ವಿಚಾರ ಹಾದಿ ರಂಪ ಬೀದಿ ರಂಪ ಆಗುತ್ತಿದ್ದಂತೆ ಇಬ್ಬರಿಗೂ ಚಿತ್ರರಂಗದಲ್ಲಿ ಅವಕಾಶಗಳು ಕಮ್ಮಿ ಅಗುತ್ತದೆ ಅನ್ನುವ ಚರ್ಚೆ ನಡೆದಿತ್ತು. ಆದರೆ ವಿವಾದದ ನಂತರ ಇಬ್ಬರೂ ಸಂಭಾವನೆ ಹೆಚ್ಚಿಸಿಕೊಂಡಿದ್ದಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಪವಿತ್ರಾ ಲೋಕೇಶ್‌ಗೆ ಮತ್ತಷ್ಟು ಅವಕಾಶಗಳು ಸಿಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಇದೀಗ ವಿವಾದದ ಪರಿಣಾಮ ಗೊತ್ತಾಗುತ್ತಿರುವಂತೆ ಕಾಣುತ್ತಿದೆ.

  ಪವಿತ್ರಾ- ನರೇಶ್ ನೋಡಿ ಪ್ರೇಕ್ಷಕರ ವ್ಯಂಗ್ಯ?

  ಪವಿತ್ರಾ- ನರೇಶ್ ನೋಡಿ ಪ್ರೇಕ್ಷಕರ ವ್ಯಂಗ್ಯ?

  ವಿವಾದದ ಬೆನ್ನಲ್ಲೇ ರವಿತೇಜಾ ನಟನೆಯ ಆಕ್ಷನ್ ಎಂಟರ್‌ಟೈನರ್ 'ರಾಮಾರಾವ್ ಆನ್ ಡ್ಯೂಟಿ' ಸಿನಿಮಾ ಬಿಡುಗಡೆ ಆಗಿತ್ತು. ಚಿತ್ರದಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಅಣ್ಣ- ತಂಗಿ ಆಗಿ ಅಭಿನಯಿಸಿದ್ದರು. ಆದರೆ ಇವರಿಬ್ಬರು ತೆರೆಮೇಲೆ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ಕಿರುಚಾಡಿದ್ದರು. ಸಿನಿಮಾ ಸೋತರೂ ತೆರೆಮೇಲೆ ಇವರಿಬ್ಬರನ್ನು ನೋಡಿ ಕೆಲವರು ವಿಚಿತ್ರವಾಗಿ ಸಂಭ್ರಮಿಸಿದ್ದರು. ರಿಯಲ್ ಲೈಫ್‌ನಲ್ಲಿ ಇಷ್ಟೆಲ್ಲಾ ರಾದ್ದಾಂತ ಆದಮೇಲೆ ಅಣ್ಣ- ತಂಗಿ ಪಾತ್ರಗಳಲ್ಲಿ ಇವರನ್ನು ಹೇಗೆ ನೋಡುವುದು ಎಂದು ವ್ಯಂಗ್ಯ ಮಾಡಿ ನಕ್ಕಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು.

  ಡೇಟಿಂಗ್‌ಗಾಗಿ ಹಣ ಕಾಸಿನ ಒಪ್ಪಂದ?

  ಡೇಟಿಂಗ್‌ಗಾಗಿ ಹಣ ಕಾಸಿನ ಒಪ್ಪಂದ?

  ಪವಿತ್ರಾ ಲೋಕೇಶ್ ಹಾಗೂ ನರೇಶ್ ನಡುವೆ ಡೇಟಿಂಗ್‌ಗಾಗಿ ಹಣಕಾಸಿನ ಒಪ್ಪಂದ ನಡೆದಿತ್ತು ಅನ್ನುವ ಸುದ್ದಿ ಕೂಡ ಹರಿದಾಡಿತ್ತು. ಟಾಲಿವುಡ್‌ ಅಂಗಳದಲ್ಲಿ ಕೇಳಿ ಬಂದ ಸುದ್ದಿಯ ಪ್ರಕಾರ ನರೇಶ್ ತಿಂಗಳಿಗೆ 25 ಲಕ್ಷ ರೂ. ಹಣವನ್ನು ಪವಿತ್ರಾ ಲೋಕೇಶ್‌ಗೆ ನೀಡುತ್ತಿದ್ದಾರಂತೆ. ಒಂದು ವೇಳೆ ಪವಿತ್ರಾ ಲೋಕೇಶ್‌ಗೆ ಕೈ ಕೊಟ್ಟರೆ 50 ಕೋಟಿ ರೂ. ನೀಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಇದನ್ನು ಕೇಳಿ ಬಹಳ ಜನ ಇಂದೆಂತಹ ಒಪ್ಪಂದ ಎಂದು ಶಾಕ್ ಆಗಿದ್ದರು.

  English summary
  Naresh and Pavithra Lokesh Issue Actress Facing Bad Experience In Movie Set. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X