For Quick Alerts
  ALLOW NOTIFICATIONS  
  For Daily Alerts

  ಮದುವೆ ಬಳಿಕ ಸಿನಿಮಾದಿಂದ ನಯನತಾರಾ ಬ್ರೇಕ್: ರೊಮ್ಯಾನ್ಸ್ ದೃಶ್ಯಗಳಿಗೆ ನೋ ಎಂದ ನಟಿ!

  |

  ನಯನತಾರ ಮತ್ತು ವಿಘ್ನೇಶ್ ಶಿವನ್ ಮದುವೆ ಆಯ್ತು. ಈ ಜೋಡಿ ಕೈ ಕೈ ಹಿಡಿದು ದೇವಸ್ಥಾನಗಳನ್ನು ಸುತ್ತಿದ್ದು ಆಯ್ತು. ಈ ಜೋಡಿ ಮದುವೆ ಬಳಿಕ ಮಾಧ್ಯಮಗಳ ಮುಂದೆ ಹಾಜರಾಗಿ ಹಲವು ವಿಚಾರಗಳನ್ನು ಹಂಚಿಕೊಂಡಿದೆ.

  ನಟಿ ನಯನತಾರ ಮತ್ತ ವಿಘ್ನೇಶ್ ಮದುವೆ ನೆರವೇರಿದೆ. ಆಪ್ತರ ಸಮ್ಮುಖದಲ್ಲಿ ಈ ಜೋಡಿ ಸಂಪ್ರದಾಯ ಬದ್ಧವಾಗಿ ಮದುವೆ ಮಾಡಿಕೊಂಡಿದೆ. ಜೂನ್ 9ರಂದು ನಯನತಾರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಾಕಷ್ಟು ಸಿನಿಮಾ ಕಲಾವಿದರು ಇವರ ಮದುವೆಯಲ್ಲಿ ಭಾಗಿ ಆಗಿದ್ದಾರೆ.

  ನಯನತಾರ ವಿಗ್ನೇಶ್ ಶಿವನ್ ಮದುವೆ ಫೊಟೋ ಔಟ್: ಪತ್ನಿಗೆ ಮುತ್ತಿಟ್ಟ ಪತಿ!ನಯನತಾರ ವಿಗ್ನೇಶ್ ಶಿವನ್ ಮದುವೆ ಫೊಟೋ ಔಟ್: ಪತ್ನಿಗೆ ಮುತ್ತಿಟ್ಟ ಪತಿ!

  ಆದರೆ ಸಹಜವಾಗಿ ಮದುವೆ ಬಳಿಕ ಸಿನಿಮಾ ನಟಿಯರು ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುವುದಿಲ್ಲ. ಮನೆ-ಮಕ್ಕಳು ಅಂತ ಕೌಟುಂಬಿಕ ಜೀವನದಲ್ಲಿ ಹೆಚ್ಚು ಬ್ಯುಸಿಯಾಗಿ ಬಿಡುತ್ತಾರೆ. ನಟಿ ನಯನತಾರಾ ಮುಂದೇನು ಮಾಡುತ್ತಾರೆ ಎನ್ನುವ ಕುತೂಹಕ್ಕೆ ಉತ್ತರ ಸಿಕ್ಕಿದೆ.

  ನಯನತಾರ ಸಿನಿಮಾಗಳಿಂದ ಬ್ರೇಕ್!

  ನಯನತಾರ ಸಿನಿಮಾಗಳಿಂದ ಬ್ರೇಕ್!

  ನಟಿ ನಯನತಾರ ಮದುವೆ ಬಳಿಕ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಾರ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಗ್ಗೆ ಟಾಲಿವುಡ್‌ನಲ್ಲಿ ಸುದ್ದಿ ಹಬ್ಬಿದೆ. ನಟಿ ನಯನತಾರಾ ಮದುವೆ ಬಳಿಕ ಸಿನಿಮಾದಲ್ಲಿ ಅಭಿನಯಿಸದಿರಲು ನಿರ್ಧಾರಿಸಿದ್ದಾರಂತೆ. ಹಾಗಂತ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಆಗಲ್ಲ. ಬದಲಿಗೆ ಒಂದು ದೊಡ್ಡ ಬ್ರೇಕ್ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರಂತೆ. ಬ್ರೇಕ್ ಬಳಿಕ ಮತ್ತೆ ಕಮ್ ಬ್ಯಾಕ್‌ ಕೂಡ ಮಾಡಲಿದ್ದಾರೆ ನಯನತಾರಾ.

  ನಯನತಾರ 'ಕೆಂಪು ಸೀರೆ' ರಹಸ್ಯ: ಸೀರೆಗಿದೆ ಹೊಯ್ಸಳರ ನಂಟು?ನಯನತಾರ 'ಕೆಂಪು ಸೀರೆ' ರಹಸ್ಯ: ಸೀರೆಗಿದೆ ಹೊಯ್ಸಳರ ನಂಟು?

  ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುವುದಿಲ್ಲ!

  ರೊಮ್ಯಾನ್ಸ್ ದೃಶ್ಯಗಳಲ್ಲಿ ನಟಿಸುವುದಿಲ್ಲ!

  ಬ್ರೇಕ್ ತೆಗೆದುಕೊಳ್ಳುವುದು ಮಾತ್ರ ಅಲ್ಲ. ನಯನತಾರಾ ಒಂದಷ್ಟು ಷರತ್ತುಗಳನ್ನು ನಯನತಾರಾ ಹಾಕಿದ್ದಾರೆ. ಅಂದರೆ ಮದುವೆ ಬಳಿಕ ಬ್ರೇಕ್ ತೆಗೆದುಕೊಂಡು, ಕಮ್‌ಬ್ಯಾಕ್ ಮಾಡಿದಾಗ ಆಪ್ತ ದೃಶ್ಯಗಳಲ್ಲಿ ನಟಿಸುವುದಿಲ್ಲವಂತೆ. ನಟರ ಜೊತೆಗೆ ತೆರೆ ಮೇಲೆ ರೊಮ್ಯಾನ್ ಮಡುವುದಿಲ್ಲವಂತೆ ನಯನತಾರಾ. ಈ ಬಗ್ಗೆ ನಯನತಾರ ಹೇಳಿಕೊಳ್ಳದೇ ಇದ್ದರೂ, ಟಾಲಿವುಡ್‌ನಲ್ಲಿ ಗಾಸಿಪ್ ಹಬ್ಬಿದೆ.

  ನಯನತಾರಾ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲು!

  ನಯನತಾರಾ ಕುಟುಂಬಕ್ಕೆ ಹೆಚ್ಚಿನ ಸಮಯ ಮೀಸಲು!

  ಇನ್ನು ನಟಿ ನಯನತಾರಾ ಹೀಗೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ ಕುಟುಂಬ. ಮದುವೆಯಾದ ಬಳಿಕ ಕುಟುಂಬಕ್ಕೆ ಹೆಚ್ಚಿನ ಸಮಯ ಕೊಡಲು ನಟಿ ನಿರ್ಧರಿಸಿದ್ದಾರಂತೆ. ಹಾಗಾಗಿ ಸಿನಿಮಾರಂಗದಿಂದ ಅನಿರ್ದಿಷ್ಟ ಅವಧಿ ಬ್ರೇಕ್ ತೆಗೆದುಕೊಳ್ಳಲಿದ್ದಾರೆ. ಈ ಸಮಯವನ್ನು ತನ್ನ ಮತ್ತು ವಿಘ್ನೇಶ್ ಕುಟುಂಬದ ಜೊತೆಗೆ ನಯನತಾರಾ ಕಳೆಯಲಿದ್ದಾರೆ.

  ನಯನತಾರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಪತಿ ವಿಘ್ನೇಶ್ ಶಿವನ್!ನಯನತಾರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಪತಿ ವಿಘ್ನೇಶ್ ಶಿವನ್!

  ಶಾರುಖ್ ಖಾನ್ ಜೊತೆಗಿನ ಚಿತ್ರವೇ ಕೊನೆ?

  ಶಾರುಖ್ ಖಾನ್ ಜೊತೆಗಿನ ಚಿತ್ರವೇ ಕೊನೆ?

  ಇನ್ನು ನಟಿ ನಯನತಾರಾ ಶಾರುಖ್ ಖಾನ್ ಜೊತೆಗೆ 'ಜವಾನ್' ಚಿತ್ರದಲ್ಲಿ ನಾಯಕಿಯಾಗಿ ಕಾಣಸಿಕೊಳ್ಳಲಿದ್ದಾರೆ. ತಮಿಳು ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಸಿನಿಮಾ ಮೂಡಿ ಬರಲಿದೆ. ಹಾಗಾಗಿ ಈ ಚಿತ್ರದ ಬಳಿಕ ನಯನತಾರಾ ಲಾಂಗ್ ಗ್ಯಾಪ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಚಿತ್ರದಲ್ಲಿರುವ ನಯನತಾರಾ ಪಾತ್ರದ ಬಗ್ಗೆ ಹೆಚ್ಚಿನ ಕುತೂಹಲ ಮೂಡಿದೆ.

  English summary
  Nayanthara Decided To Take Big Break From Films And Says No To Intimate Scenes After Wedding, Know More,
  Monday, June 13, 2022, 17:51
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X