»   » ನೀರ್ ದೋಸೆನಾ ಇಲ್ಲಾ ಬೆಣ್ಣೆ (ಮಸಾಲೆ) ದೋಸೇನಾ?

ನೀರ್ ದೋಸೆನಾ ಇಲ್ಲಾ ಬೆಣ್ಣೆ (ಮಸಾಲೆ) ದೋಸೇನಾ?

Posted By: ಜೀವನರಸಿಕ
Subscribe to Filmibeat Kannada

ದೋಸೆ ಯಾವ್ದಾದ್ರೇನು ತಿನ್ನೋನಿಗೆ ಮಜಾ ಬರ್ಬೇಕಷ್ಟೇ.. ನೀರ್ ದೋಸೆ-ಕೋಳಿ ಸಾರು ಕಾಂಬಿನೇಷನ್ ಅಂದ್ರೆ ಬಾಯಲ್ಲಿ ನೀರೂರಿಸೋವಷ್ಟು ಇಷ್ಟ. ಮಸಾಲೆ ದೋಸೆಗೆ ಮಸಾಲೆ ಜೊತೆ ಸ್ವಲ್ಪ ಬೆಣ್ಣೆ ಹಾಕಿದ್ರೆ ಆಹಾ.. ಅನ್ನಿಸೋ ಸ್ವಾದ.. ಈ ದೋಸೆಗಳ ಬಗ್ಗೆ ಇಷ್ಟು ಹೇಳ್ತಿರೋದಕ್ಕೂ ಸಿನಿಮಾಗೂ ಸಂಬಂಧ ಐತೆ ಸ್ವಾಮೀ ಸಂಬಂಧ ಐತೆ.

ಇತ್ತೀಚೆಗ್ಯಾಕೋ ನೀರ್ದೋಸೆಗೆ ಕೋಳಿ ಸಿಕ್ಕಿಲ್ಲ ಮಸಾಲೆ ಅರೆಯೋಕೆ ಅಂತ ಟೂ ಬಿಟ್ಟಿದ್ದ ನಿರ್ದೇಶಕ ವಿಜಯಪ್ರಸಾದ್ ಮತ್ತೆ ಮಸಾಲೆ ಅರೆಯೋಕೆ ಶರುಮಾಡಿದ್ದಾರೆ. ಆದ್ರೆ ಇನ್ನೂ ಹೊಸಕೋಳಿ ಸಿಕ್ಕಿಲ್ಲವಂತೆ. [ಬಿಜೆಪಿ ಗೆಲುವಿಗೆ ಬಹುಪರಾಕ್ ಎಂದ ಸೆಲೆಬ್ರಿಟಿಗಳು]

ನೀರ್ದೋಸೆ ಅನ್ನೋ ಸಿನಿಮಾ ಶುರುವಾಗಿದ್ದು 2012 ಅಂತ್ಯದಲ್ಲಿ. ಅಲ್ಲಿಂದ ಇಲ್ಲೀವರೆಗೂ ಬಹುಶಃ ಸ್ಯಾಂಡಲ್ವುಡ್ನ ಬಹುದೊಡ್ಡ ವಿವಾದಾತ್ಮಕ ಚಿತ್ರ ಅಂತಲೇ ಹೆಸರಾಗಿರೋ ನೀರ್ದೋಸೆ ಬಗ್ಗೆ ಮಾಧ್ಯದವ್ರಿಗೂ ವಿವಾದವನ್ನ ಜನ್ರಿಗೆ ಹೇಳಿ ಹೇಳಿ ಬೋರಾಗಿದೆ. ಜನ್ರಿಗೋ ಕೇಳಿ ಕೇಳಿ ಬೋರಾಗಿದೆ. ಆದ್ರೆ ಈಗ ವಿಶೇಷ ಸುದ್ದಿ ಬಂದಿದೆ.

ನೀರ್ದೋಸೆ ಶುರುವಾಗಿದೆ

ಇತ್ತೀಚೆಗೆ ಶ್ರೀನಗರದಲ್ಲಿ ನೀರ್ದೋಸೆ ಚಿತ್ರದ ಮುಹೂರ್ತ ಜರುಗಿದೆ. ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್, ದತ್ತಣ್ಣ ಮುಂತಾದವ್ರ ಮುಖ್ಯಪಾತ್ರಗಳೂ ಹಾಗೇ ಇರಲಿದ್ದು ಯಾವ ಬದಲಾವಣೆಯೂ ಇರೋದಿಲ್ಲ, ನಾಯಕಿ ರಮ್ಯಾರನ್ನ ಹೊರತುಪಡಿಸಿದಂತೆ ಅಂತಿದೆ ಚಿತ್ರದ ಮೂಲ.

ರಮ್ಯಾ ಬದಲು ಯಾರು?

ರಮ್ಯಾ ಸ್ಥಾನಕ್ಕೆ ನಾಯಕಿಯಾಗಿ ಆಯ್ಕೆಯಾಗೋದು ಯಾರು ಅಂತ ಈ ಹಿಂದೆ ಹಲವು ಭಾರಿ ಚರ್ಚೆಯಾಗಿತ್ತು. ಈ ಚರ್ಚೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ರಾಗಿಣಿ ಅಂತ ಸುದ್ಧಿಯಾಗಿ ಸೈಲೆಂಟಾದ ನಂತ್ರ ಆ ಸ್ಥಾನಕ್ಕೆ ಮತ್ತೊಬ್ಬ ಮಸಾಲಾ ಗ್ಲ್ಯಾಮರ್ಡಾಲ್ನ ಕರೆತರಲಿದ್ದಾರೆ ನಿರ್ದೇಶಕ ವಿಜಯಪ್ರಸಾದ್.

ಹುಡುಕಾಟದಲ್ಲಿದೆ ಚಿತ್ರತಂಡ

ಅದೊಂದು ಚಾಲೆಂಜಿಂಗ್ ಪಾತ್ರ. ಅಂತಹಾ ಪಾತ್ರವನ್ನ ಎಲ್ಲರಿಂದಲೂ ಮಾಡಿಸೋಕೆ ಸಾಧ್ಯವಿಲ್ಲ. ಹಾಗಾಗಿ ನಿರ್ದೇಶಕರು ನೀರ್ದೋಸೆಯಲ್ಲಿ ಕೋಳಿ ಪಾತ್ರಕ್ಕೆ ರಮ್ಯಾ ರೇಂಜಿನ ಚೆಲುವೆಯನ್ನೇ ಹುಡುಕಾಡ್ತಿದ್ದಾರೆ. ನಿರ್ದೇಶಕರು ನಾಯಕಿಗೆ ತಕ್ಕಂತೆ ಸ್ಕ್ರಿಪ್ಟ್ನಲ್ಲಿ ಸಣ್ಣಮಟ್ಟದ ಬದಲಾವಣೆ ಮಾಡೋಕೂ ತಯಾರಿದ್ದಾರೆ ಅನ್ನೋ ಮಾಹಿತಿಯೂ ಬಂದಿದೆ.

ಬೆಣ್ಣೆದೋಸೆ ಕಥೆ ಏನು?

ಇದ್ರ ನಡುವೆ ವಿಜಯಪ್ರಸಾದ್ ಸುವರ್ಣ ವಾಹಿನಿಯಲ್ಲಿ ಬೆಂಗ್ಳೂರ್ ಬೆಣ್ಣೆದೋಸೆ ಅನ್ನೋ ಶೋ ಒಂದನ್ನ ಶುರು ಮಾಡಿದ್ದ ಸುದ್ದಿ ಇತ್ತು. ಈಗಲೂ ಸುವರ್ಣವಾಹಿನಿಯಲ್ಲಿ ಅದ್ರ ಟ್ರೈಲರ್ ರನ್ ಆಗ್ತಿದೆ. ವಿಜಯಪ್ರಸಾದ್ ಬೆಂಗ್ಳೂರ್ ಬೆಣ್ಣೆದೋಸೆಗೆ ಎಳ್ಳೂ ನೀರು ಬಿಟ್ರಾ ಗೊತ್ತಿಲ್ಲ...

ದೋಸೆ ಬಿಡದ ನಿರ್ದೇಶಕ

ಸುವರ್ಣ ವಾಹಿನಿಯಲ್ಲಿ ಶೋ ಶುರುಮಾಡಿದ ನಿರ್ದೇಶಕ ವಿಜಯಪ್ರಸಾದ್ ಇಲ್ಲೂ ಚಿತ್ರದ ಟೈಟಲ್ನಲ್ಲಿ ದೋಸೆಯನ್ನ ಉಳಿಸಿಕೊಂಡಿದ್ರಿಂದ ಸಿನಿಮಾದಂತೇ ಇಲ್ಲೂ ಥ್ರಿಲ್ ಇರುತ್ತೆ ಅನ್ನೋ ನಿರೀಕ್ಷೆ ಕಿರುತೆರೆ ವೀಕ್ಷಕರಿಗಿತ್ತು. ಈಗ ಬೆಣ್ಣೇದೋಸೆಗಿಂತ ನೀರ್ ದೋಸೆಯನ್ನೇ ಸವಿಯೋ ತಯಾರಿಯಲ್ಲಿದ್ದಾರೆ.

ಬೆಣ್ಣೆದೋಸೆ ಲೇಟಾ

ಯಾವ ದೋಸೆಯನ್ನ ಕೊಟ್ರೂ ಟೇಸ್ಟಾಗಿ ಕೊಟ್ರೇ ಜನ್ರು ಸವಿದೇ ಸವೀತಾರೆ ಅಂತಹಾ ಟೇಸ್ಟೀ ದೋಸೆ ಕೊಡೋಕೆ ಹೊರಟಿರೋ ನಿರ್ದೇಶಕರು ಹಾಗಾದ್ರೆ ಸುವರ್ಣ ವಾಹಿನಿಯ ಬೆಣ್ಣೆದೋಸೆ ಕೊಡೋದ್ಯಾವಾಗಾ?

ಮೂರನೇ ನಿರ್ಮಾಪಕರು

ಚಿತ್ರ ಸದಾ ವಿವಾದಗಳನ್ನೇ ಎದುರಿಸಿ ಮೂರು ವರ್ಷ ಮುಂದೆ ತಳ್ಳೋದ್ರ ಜೊತೆಗೆ ಚಿತ್ರಕ್ಕೆ ನಿರ್ಮಾಪಕರೂ ಮೂರು ಜನ್ರು ಬದಲಾಗಿದ್ದಾರೆ. ಮೂರನೇ ನಿರ್ಮಾಪಕರಿಂದಲಾದ್ರೂ ಬೆಣ್ಣೆದೋಸೆ ಹೊರಬರುತ್ತಾ? ಕಾದು ನೋಡ್ಬೇಕು.

English summary
Kannada movie director Vijay Prasad is in search of new heroine for his controversial film Neer Dose, in which Navarasa Nayaka Jaggesh is playing the lead role. Earlier Ramya was to play the heroine role, but she opted out due to clash. Ragini Dwivedi has also been ruled out. So, who else?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada