»   » ಸ್ಯಾಂಡಲ್ವುಡ್ನಲ್ಲಿ ನಡೆದು ಹೋಗಿದೆ ಎಂಟನೇ ಅದ್ಭುತ!

ಸ್ಯಾಂಡಲ್ವುಡ್ನಲ್ಲಿ ನಡೆದು ಹೋಗಿದೆ ಎಂಟನೇ ಅದ್ಭುತ!

Posted By: ಜೀವನರಸಿಕ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಕನ್ನಡ ಚಿತ್ರರಂಗದಲ್ಲಿ ಅದೊಂದು ವಿಷ್ಯ ಯಾವತ್ತಿಗೂ ನಡೆಯೋದಿಲ್ಲ ಅಂತಾನೇ ಅಂದುಕೊಳ್ಳಲಾಗಿತ್ತು. ಆದ್ರೆ ನಿಜಕ್ಕೂ ಅಸಾಧ್ಯ ಅನ್ನಿಸೋ ವಿಷಯವೊಂದು ಕೊನೆಗೂ ನಡೆದು ಹೋಗಿದೆ. ಈ ಸುದ್ದಿ ಸದಾಶಿವನಗರದ ಮನೆಯದ್ದು. ಅರ್ಥಾತ್ ಅಣ್ಣಾವ್ರ ಮನೆಯ ಕಡೆಯ ಸುದ್ದಿ ಇದು.

  ಚಿನ್ನದ ಮೊಟ್ಟೆ ಇಡುವ ಕೋಳಿ ಅಂತಾನೇ ಕರೆಸಿಕೊಂಡಿದ್ದ ವಜ್ರೇಶ್ವರಿ ಕಂಬೈನ್ಸ್ ಪೂರ್ಣಿಮಾ ಎಂಟರ್ಪ್ರೈಸಸ್ನ ಸಿನಿಮಾ 'ಓಂ' ಸ್ಯಾಟಲೈಟ್ ಹಕ್ಕು ಮಾರಾಟವಾಗಿದೆ. ಅದೆಷ್ಟಕ್ಕೆ ಮಾರಾಟವಾಗಿದೆ ಮುಂದೆ ಓದಿ. ಅಂದ ಹಾಗೆ, 'ಓಂ' ಚಿತ್ರ ಚಿತ್ರಮಂದಿರದಲ್ಲಿ ರಿಲೀಸಾದಾಗಲೆಲ್ಲ ಹೌಸ್ಫುಲ್ ಪ್ರದರ್ಶನ ಕಾಣ್ತಿತ್ತು. ಆ ಪರಿಯ ಕ್ರೇಜ್ ಹುಟ್ಟಿಸಿದಂಥ ಸಿನೆಮಾ ಅದು.[ಸತ್ಯ.. ಬಿಡ್ಬೇಡ ಕೊಚ್ಚು ..'ಓಂ' ಗೇಮ್ ಸೂಪರ್!]

  ರಿಯಲ್ಸ್ಟಾರ್ ಉಪ್ಪಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಅನ್ನೋ ಎರಡು ಮಾಸ್ಟರ್ಗಳ ಕಲಾ ಕುಸುರಿಯಲ್ಲಿ ಅರಳಿದ ಪೀಸೇ ಈ ಮಾಸ್ಟರ್ ಪೀಸ್ 'ಓಂ' ಅನ್ನೋ ಸಿನಿಮಾ. 1995ರಲ್ಲಿ ತೆರೆಕಂಡ 'ಓಂ' 17 ವರ್ಷಗಳ ನಂತ್ರ ಪ್ರತಿಷ್ಠಿತ ವಾಹಿನಿಗೆ ಸೇಲಾಗಿದೆ. ಹಾಗಾದ್ರೆ ಓಂ ಸಿನಿಮಾ ಸೇಲಾಗಿದ್ದು ಯಾವ ಟಿವಿಗೆ? ಓಂ ಸಿನಿಮಾ ಇಷ್ಟು ವರ್ಷ ಯಾಕೆ ಸೇಲಾಗಿರ್ಲಿಲ್ಲ? ಈ ಎಲ್ಲ ಕುತೂಹಲಗಳಿಗೆ ಈ ಸ್ಲೈಡ್ನಲ್ಲಿದೆ ಉತ್ತರ..[ಶಿವಣ್ಣ ಕೊಟ್ಟ ಏಟಿಗೆ ನಟಿ ಪ್ರೇಮಾ ಗಡಗಡ.!]

  ಓಂ ಗೆ ಓಂ ಮಾತ್ರ ಸಾಟಿ

  1995 ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲು. ರಿಯಲ್ ರೌಡಿಗಳೂ ಕೂಡ ನಟಿಸಿದ್ದ ಓಂ ಚಿತ್ರ ತೆರೆಕಂಡಿತ್ತು. ಅದು ಸಂಪೂರ್ಣ ರಿಯಲ್ಸ್ಟಾರ್ ಉಪ್ಪಿ ಪರಿಕಲ್ಪನೆ. ಚಿತ್ರವನ್ನ ನೋಡಿದ ಸಿನಿಪ್ರೇಮಿಗಳು ಹುಚ್ಚರಾಗಿಬಿಟ್ಟಿದ್ರು.. ಹಾಗೆ ಮೋಡಿ ಮಾಡಿದ್ದ ಸಿನಿಮಾ ಅದು.

  ಕಿಚ್ಚ ಸುದೀಪ್ 10 ಸಾರಿ ನೋಡಿದ್ರು

  ಇವತ್ತಿನ ಸೂಪರ್ಸ್ಟಾರ್ ಕಿಚ್ಚ ಸುದೀಪ್ ಕಾಲೇಜು ದಿನಗಳಲ್ಲೇ ಹತ್ತು ಬಾರಿ ಓಂ ಸಿನಿಮಾ ನೋಡಿದ್ರು ಅಂದ್ರೆ ಯೋಚಿಸಿ ಓಂ ಸಿನಿಮಾ ಕಿಚ್ಚನನ್ನೇ ಹೇಗೆ ಹುಚ್ಚಾಗಿಸಿತ್ತು. ಇನ್ನು ಒಬ್ಬ ಸಾಮಾನ್ಯ ಪ್ರೇಕ್ಷಕ ಓಂ ನೋಡಿ ಬೆರಗಾಗಿ ಹೋಗಿರದೆ ಇರ್ತಾನಾ?[ಶಿವಣ್ಣನ ಬಗ್ಗೆ ನನಗೆ ಅಪಾರ ಗೌರವವಿದೆ : ಕಿಚ್ಚ ಸುದೀಪ್]

  500ಕ್ಕೂ ಹೆಚ್ಚು ಬಾರಿ ರೀರಿಲೀಸ್

  17 ವರ್ಷಗಳಲ್ಲಿ ಓಂ ಚಿತ್ರ 500ಕ್ಕೂ ಹೆಚ್ಚು ಬಾರಿ ರೀರಿಲೀಸಾಗಿದೆ ಅಂದ್ರೆ ಯೋಚ್ನೆ ಮಾಡಿ ಓಂ ಹವಾ ಇವತ್ತಿಗೂ ಹೆಂಗಿದೆ ಅಂತ. ಓಂ ರಿಲೀಸಾದಾಗ್ಲೇಲ್ಲ ಕೋಟಿಗಟ್ಟಲೇ ಹಣವನ್ನ ಬಾಚಿ ಬಾಚಿಕೊಟ್ಟಿದೆ.

  ಥಿಯೇಟರ್ನಲ್ಲಿ ಗಲಾಟೆ

  ಒಂದು ವರ್ಷದ ಹಿಂದೆ ಓಂ ರೀರಿಲೀಸಾಗಿದ್ದ ಟೈಂನಲ್ಲಿ ನಗರದ ಪ್ರಮುಖ ಚಿತ್ರಮಂದಿರದಲ್ಲಿ ಸಿನಿಮಾ ತಾಂತ್ರಿಕ ಕಾರಣಗಳಿಂದ ಪ್ರದರ್ಶನ ನಿಂತಿದ್ದಕ್ಕೆ ಸಿನಿಪ್ರೇಮಿಗಳು ದೊಡ್ಡ ಜಗಳವನ್ನೇ ಶುರುಮಾಡಿದ್ರು. ಥಿಯೇಟರ್ ಅವತ್ತೂ ಹೌಸ್ಫುಲ್ ಆಗಿತ್ತು.

  ಪುರೋಹಿತ ರೌಡಿಯಾಗೋ ಕಥೆ

  ಸತ್ಯ ಅನ್ನೋ ಪಾತ್ರಧಾರಿ ಹೆಸರಿಗೆ ತಕ್ಕಂತೆ ಸತ್ಯವಂತ. ಆದ್ರೆ ಪರಿಸ್ಥಿತಿಯ ಒತ್ತಡಕ್ಕೆ ಸಿಕ್ಕಿ ಎಲ್ಲರನ್ನ ಎದುರಿಸಿ ನಿಂತು ಲಾಂಗ್ ಹಿಡಿಯೋ ಶಿವಣ್ಣ ಅಂಡರ್ವರ್ಲ್ಡ್‌ನಲ್ಲಿ ಅಬ್ಬರಿಸೋ ಅಟ್ಟಹಾಸವನ್ನ ನೋಡೀನೇ ಸವೀಬೇಕು.

  ಶಿವಣ್ಣ-ಪ್ರೇಮಾ ಜೋಡಿ

  ಚಿತ್ರದಲ್ಲಿ ಮೆಹಬೂಬಾ ಜೋಡಿಯಾಗಿ ಶಿವಣ್ಣ-ಪ್ರೇಮಾ ಭರ್ಜರಿ ಅಭಿನಯ ನೀಡಿದ್ದಾರೆ. 1995ರಲ್ಲಿ ರಿಯಲ್ ರೌಡಿಗಳು ನಟಿಸೋ ವಿವಾದದ ಮೂಲಕ ಭಾರತೀಯ ಚಿತ್ರರಂಗವೇ ಇತ್ತ ತಿರುಗುವಂತೆ ಮಾಡಿದ ಚಿತ್ರ ಟ್ರೆಂಡ್ ಸೆಟ್ಟರ್ ಅನ್ನಿಸಿಕೊಳ್ತು.

  ಓಂ ಕೊಳ್ಳೋಕೆ ಪೈಪೋಟಿ

  ಓಂ ಚಿತ್ರ ತೆರೆಗೆ ಬಂದು 17 ವರ್ಷವಾದ್ರೂ ಅದನ್ನ ಕೊಳ್ಳೋಕೆ ಇವತ್ತಿಗೂ ಪೈಪೋಟಿಯಿತ್ತು. ಈ ಹಿಂದೆ ಉದಯ ವಾಹಿನಿ 8 ಕೋಟಿಗೆ ಓಂ ಸಿನಿಮಾನ್ನ ಕೇಳಿ ರಾಜ್ ಕುಟುಂಬ ಸಿನಿಮಾವನ್ನ ಕೊಡೋಕೆ ಒಪ್ಪದೆ ಬಂದ ದಾರಿಗೆ ಸುಂಕವಿಲ್ಲ ಅಂತ ಸುಮ್ಮನಾಗಿತ್ತು.

  ಚಿತ್ರ ಸೇಲಾದ ಮೊತ್ತ ಎಷ್ಟು ಗೊತ್ತಾ?

  ಓಂ ಚಿತ್ರ 17 ವರ್ಷಗಳ ನಂತ್ರ ಪ್ರತಿಷ್ಠಿತ ಉದಯ ವಾಹಿನಿಯ ತೆಕ್ಕೆಗೆ ಬಿದ್ದಿದೆ. ಚಿತ್ರಕ್ಕೆ ಉದಯವಾಹಿನಿ 10 ಕೋಟಿ ಕೊಟ್ಟು ಖರೀದಿಸಿದೆ ಅಂತ ಮೂಲಗಳಿಂದ ತಿಳಿದುಬಂದಿದೆ.

  ಓಂ ಜೊತೆ ಸೇಲಾಯ್ತು ಸಿದ್ಧಾರ್ಥ

  ಓಂ ಜೊತೆ ರಾಘಣ್ಣ ಪುತ್ರ ವಿನಯ್ರಾಜ್ಕುಮಾರ್ ಅಭಿನಯದ ಮೊದಲ ಚಿತ್ರ ಸಿದ್ಧಾರ್ಥ ಕೂಡ ಸೇಲಾಗಿದೆ. ಸಿದ್ಧಾರ್ಥವನ್ನ ಒಂದೂವರೆ ಕೋಟಿ ಕೊಟ್ಟು ಉದಯ ವಾಹಿನಿ ಕೊಂಡುಕೊಂಡಿದೆ ಅಂತಿವೆ ಮೂಲಗಳು.

  ಇನ್ನೂ ನಂಬೋದು ಕಷ್ಟ

  ಹೀಗೊಂದು ಮಾಹಿತಿ ನಮಗೆ ಬಂದಿದೆ ಆದ್ರೆ ಇದನ್ನ ನಾವೂ ನಂಬೋದು ಕಷ್ಟವಾಗ್ತಿದೆ. ಯಾಕಂದ್ರೆ ಈ ಹಿಂದೆ ಓಂ ಸಿನಿಮಾವನ್ನ ಅದೆಷ್ಟು ಕೇಳಿದ್ರೂ ರಾಜ್ ಕುಟುಂಬ ಮಾರಾಟ ಮಾಡಿರಲಿಲ್ಲ. ಚಿತ್ರ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿ ರಿಲೀಸಾದಾಗಲೆಲ್ಲ ಕೋಟಿ ಕೋಟಿ ಕಾಸು ಮಾಡಿಕೊಡ್ತಿತ್ತು.

  English summary
  Kannada movie Om satellite rights has been sold to Udaya Channel for a huge amount. Rajkumar family had not sold it for 17 years. Real star directorial movie Om had given lease of life to Shiva Rajkumar. Actress also came to limelight after this movie. Siddharth movie too sold to Udaya Channel.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more