»   » ಕೆಟ್ಟ ಕನಸು ಕಂಡ ನಟನಿಗೆ ಕೆಟ್ಟ ಮೇಲಾದ್ರೂ ಬುದ್ಧಿ ಬಂತಾ?

ಕೆಟ್ಟ ಕನಸು ಕಂಡ ನಟನಿಗೆ ಕೆಟ್ಟ ಮೇಲಾದ್ರೂ ಬುದ್ಧಿ ಬಂತಾ?

By ದೀಕ್ಷಿತ್ ಶೆಟ್ಟಿಗಾರ್ ಕೊಣಾಜೆ
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಮುಂಬೈನ ಜನನಿಬಿಡ ಬೀದಿಯಲ್ಲಿ ವ್ಯಕ್ತಿಯೊಬ್ಬ ಬಿದ್ದಿದ್ದಾನೆ, ಆತನಿಗೆ ಜಗದ ಆಗುಹೋಗುಗಳ ಪರಿವೆಯೇ ಇಲ್ಲ , ಊಟ ಮಾಡಿ ಹಲವು ದಿನಗಳೇ ಕಳೆದಿವೆ, ನೀರು ಕೊಡಲೂ ಗತಿ ಇಲ್ಲ.

  ಫುಟ್ ಪಾತಿನಲ್ಲಿ ಮಲಗಿದರೆ ಎಲ್ಲಿ ಸಲ್ಲು ಮಿಯಾ ಮತ್ತೆ ಪಾನಮತ್ತನಾಗಿ ವಾಹನದಲ್ಲಿ ಬರುವನೇನೋ ಎಂಬ ಆತಂಕದಿಂದ ಗೋಡೆಯೊಂದಕ್ಕೆ ಒರಗಿದ್ದಾನೆ. ಈತನ ಸುತ್ತಲೂ ಈಗ ಜನ ಸೇರಿದ್ದಾರೆ.

  ಆ ವ್ಯಕ್ತಿ ಒಂದು ಹೊತ್ತಿನ ಊಟದ ಬಗ್ಗೆ ಚಿಂತಿಸುತ್ತಿದ್ದರೆ ಅಲ್ಲಿ ಕೆಲವು ಮಂದಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ, ಆ ಸನ್ನಿವೇಶವನ್ನು ನೆನೆದರೆ ಭಯಾನಕ ! ಆದರೆ ಯಾರೊಬ್ಬರೂ ಕರುಣೆ ತೋರುತ್ತಿಲ್ಲ. (ದಿಲ್ವಾಲೆ ಚಿತ್ರಕ್ಕೆ ವಿಮರ್ಶಕರಿಂದ ಚಾಟಿಯೇಟು)

  ಅಸಲಿಗೆ ಆ ವ್ಯಕ್ತಿ ಯಾರು? ಸ್ವಲ್ಪ ಹಿನ್ನೆಲೆ ಗಮನಿಸೋಣ. ಆತ ಒಬ್ಬ ಕೋಟ್ಯಾಧೀಶ ಚಿತ್ರನಟ. ಪ್ರತಿಷ್ಠಿತ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳು, ಐಷಾರಾಮಿ ಕಾರುಗಳು, ಬಂಗಲೆ ಹಾಗೂ ಸುಂದರ ಹೆಂಡತಿಯಿದ್ದ ಆ ಗಣ್ಯ ವ್ಯಕ್ತಿ ಇಂದು ಬೀದಿಗೆ ಬಿದ್ದವ.

  ಚಿನ್ನದ ಬಟ್ಟಲಿನಲ್ಲಿ ಊಟ ಮಾಡುತ್ತಿದ್ದಾತ, ಬೇಕೆನಿಸಿದನ್ನು ತಿಂದುಂಡವ, ಒಂದೇ ಬಾರಿಗೆ ಇಂತಹ ಹೀನಾಯ ಪರಿಸ್ಥಿತಿಗೆ ಬರಲು ಕಾರಣವೇನು ಎಂದು ಹುಡುಕುತ್ತಾ ಹೊರಟಾಗ, ಈತ ಒಂದುಕಾಲದಲ್ಲಿ ರಾಜಕೀಯದ ಹುಚ್ಚಾಟಗಳಿಗೆ ಒಳಗಾಗಿ ಇನ್ನೊಬ್ಬ ಚಿತ್ರೋದ್ಯಮದ ಸಹದ್ಯೋಗಿಯನ್ನು ಸಮರ್ಥಿಸಲು ಹೊರಟು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿ ಆತನ ಚಿತ್ರವನ್ನು ಎಲ್ಲರೂ ಬಹಿಷ್ಕರಿಸಿದ್ದು.

  ಆ ಬಹಿಷ್ಕಾರದಿಂದಾಗಿ ಆತನ ಚಿತ್ರ ಮತ್ತು ಚಿತ್ರತಂಡ ಸಂಪೂರ್ಣ ನಷ್ಟಗೊಂಡು, ನಿರ್ಮಾಪಕರು, ವಿತರಕರು ನಷ್ಟ ತುಂಬಿಕೊಳ್ಳುವಂತೆ ಪೀಡಿಸಿದರು. ಆದ್ದರಿಂದ ಈತನ ಇದ್ದಬದ್ದ ಆಸ್ತಿಗಳನೆಲ್ಲಾ ಮಾರಿ , ಸಾಲದಕ್ಕೆ ಬಡ್ಡಿ ವ್ಯವಹಾರದವರ ಹತ್ತಿರ ಸಾಲ ಪಡೆದು ಸ್ವಲ್ಪ ಹಣವನ್ನು ತೀರಿಸಿದ್ದಾನೆ.

  ಕೆಲ ಸಮಯದ ನಂತರ ಈತನ ಬಳಿ ಬಡ್ಡಿ ಕಟ್ಟಲೂ ಹಣವಿರದ ಪರಿಸ್ಥಿತಿ. ಆತನ ಹಿನ್ನೆಲೆ ತಿಳಿಯಿತಲ್ವೇ? ಈಗ ಆತ ಬಿದ್ದಿರುವ ಜಾಗದಲ್ಲಿ ಬಡ್ಡಿಗೆ ಹಣಕೊಟ್ಟ ಜನ ನೆರೆದಿದ್ದಾರೆ. ಆತ ಬಡ್ಡಿ ಕಟ್ಟದ ಕಾರಣ ಮನಸ್ಸಿಗೆ ಬಂದಂತೆ ಬೈಯುತ್ತಿದ್ದಾರೆ.

  ಈತ ಜೋರಾಗಿ ಕೂಗಾಡಲು ತೊಡಗಿದ, ಅಯ್ಯೋ ನನ್ನನ್ನು ಕಾಪಾಡಿ, ಅಯ್ಯೋ ಕಾಪಾಡಿ ಎಂದು! ಅಷ್ಟರಲ್ಲೇ ಯಾರೋ ಹಿಡಿದು ಎಳೆದ ಅನುಭವ ವಾಯಿತು, ಎದುರಿಗೆ ಆತನ ಹೆಂಡತಿ ಟೀ ಹಿಡಿದುಕೊಂಡು ನಿಂತು, ಏನಾಯ್ತು ರೀ ಎಂದು ವಿಚಾರಿಸಿದಳು.

  ಆತ ಆಶ್ಚರ್ಯದಿಂದಲೇ ಸುತ್ತಮುತ್ತ ಒಮ್ಮೆ ತಿರುಗಿ ನೋಡುತ್ತಾನೆ, ಎಲ್ಲವೂ ಸರಿಯಾಗಿದೆ ತನ್ನದೇ ಮನೆಯ ಬೆಡ್ ರೂಮಿನಲ್ಲಿದ್ದಾನೆ ತಾನು ಕಂಡದ್ದೆಲ್ಲಾ ಕೆಟ್ಟ ಕನಸು ಎಂಬ ಅರಿವಾಗುತ್ತದೆ .

  ಕೂಡಲೇ ಆತ ಅವಸರ ಅವಸರವಾಗಿ ಎದ್ದು ಪ್ರೆಸ್ ಕ್ಲಬ್ ಗೆ ತೆರಳಿ ಪತ್ರಿಕಾಗೋಷ್ಠಿಯೊಂದನ್ನು ನಡೆಸುತ್ತಾನೆ. ಈ ದೇಶದಲ್ಲಿ ಎಲ್ಲವೂ ಸರಿಯಿದೆ, ಎಲ್ಲೂ ಅಸಹಿಷ್ಣುತೆ ಅನ್ನೋದು ಇಲ್ಲ. ಪ್ರಧಾನಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸುತ್ತಾನೆ. (ಕಿಂಗ್ ಖಾನ್ ಶಾರುಖ್ ಜೊತೆ ಮಂಡ್ಯ ಹೈದ)

  ಯಾಕೆಂದರೆ ಕೆಲವೇ ದಿನಗಳಲ್ಲಿ ಆತನ ಚಿತ್ರ ಬಿಡುಗಡೆಯಾಗಲು ಕಾಯುತ್ತಿತ್ತು. ಇನ್ನು ದೇಶದವರ ವಿರೋಧ ಕಟ್ಟಿಕೊಂಡರೆ ಭಾರತೀಯರು ಬಿನಾ ದಿಲ್ವಾಲೆ ಯಾಗಿ ವರ್ತಿಸಿದರೆ, ನಾ ಬೀದಿಗೆ ಬರಬೇಕಾಗಬಹುದೇನೋ ಎಂಬ ಸತ್ಯವನ್ನು ಕನಸಿನಲ್ಲಿ ಕಂಡುಕೊಂಡಿದ್ದ.

  ಕೇವಲ ಒಂದು ಕನಸು ಆತನಲ್ಲಿ ದೇಶದ ಬಗೆಗಿದ್ದ ದ್ವೇಷದ ಭಾವನೆ ಬಿಡಿಸಿ, ಆತನ ದೇಶ ಸಹಿಷ್ಣು ಎಂಬ ಭಾವನೆ ಮೂಡಿಸಿತ್ತು ಎಂಬ ಮಾತು ಮುಂಬೈ ಬೀದಿಗಳಲ್ಲಿ ಹರಿದಾಡುತ್ತಿದೆ ಅನ್ನುವುದು "ಸಂಪೂರ್ಣ ಕಾಲ್ಪನಿಕ ಕಥೆ".

  English summary
  Spoof article: One dream made him to think positively and no intolerance in country.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more