twitter
    For Quick Alerts
    ALLOW NOTIFICATIONS  
    For Daily Alerts

    ಡಬ್ಬಿಂಗ್ ಪರ ಪಿಟೀಷನ್,'ಮಠ' ಗುರು ಬೆಂಬಲ

    By ಅನ್ನದಾನೇಶ ಶಿ ಸಂಕದಾಳ, ಆನಂದ್ ಜಿ ಮತ್ತು ತಂಡ
    |

    ಕನ್ನಡ ಚಿತ್ರರಂಗಕ್ಕೆ ಡಬ್ಬಿಂಗ್ ಪೂರಕವೋ ಮಾರಕವೋ ಎಂಬ ಚರ್ಚೆ ಮತ್ತೆ ಆರಂಭಗೊಂಡಿದೆ. ಬೂದಿಮುಚ್ಚಿದ ಕೆಂಡದಂತಿರುವ ಈ ವಿಷಯ ಮತ್ತೆ ಮೇಲೇಳಲು 'ನನ್ನ ಗಂಡನ ಹೆಂಡತಿ' ಎಂಬ ಹಿಂದಿ ಭಾಷೆಯ ಕನ್ನಡ ಅವತರಣಿಕೆ ಚಿತ್ರದ ಪೋಸ್ಟರ್ ರಿಲೀಸ್ ಕಾರಣವಾಗಿದೆ. ಈ ನಡುವೆ ಡಬ್ಬಿಂಗ್ ನಿಷೇಧ ಹೇರಿಕೆಯಾಗದಂತೆ ತಡೆಗಟ್ಟಿ ಆದೇಶ ಹೊರಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕನ್ನಡ ಸಿನಿಮಾ ಪ್ರೇಮಿಗಳ ಗುಂಪೊಂದು ಆನ್ ಲೈನ್ ಪಿಟೀಷನ್ ಹಾಕಿದೆ. ಈ ನಡುವೆ ಸ್ವಮೇಕ್ ಗಳನ್ನು ಮಾಡುವ 'ಮಠ' ಖ್ಯಾತಿ ಗುರುಪ್ರಸಾದ್ ಅವರು ಡಬ್ಬಿಂಗ್ ಪರ ನಿಲುವು ತಾಳಿ ಕನ್ನಡ ಚಿತ್ರರಂಗಕ್ಕೆ ಅಚ್ಚರಿ ಮೂಡಿಸಿದ್ದಾರೆ.

    ಮಾನ್ಯರೇ,

    ಜಗತ್ತಿನಾದ್ಯಂತ ಡಬ್ಬಿಂಗ್ -ಅನ್ನು ಒಂದು ಭಾಷೆಯಲ್ಲಿರುವ ಜಗತ್ತಿನ ಅತ್ಯುತ್ತಮವಾದ ಜ್ಞಾನ, ಮನರಂಜನೆಯನ್ನು ಇನ್ನೊಂದು ಭಾಷೆಗೆ ತರುವ ಸಾಧನವನ್ನಾಗಿ ನೋಡುತ್ತಾರೆ.

    ವಿಶ್ವಸಂಸ್ಥೆಯು ಬಾರ್ಸಿಲೋನಾ ಭಾಷಾ ಹಕ್ಕುಗಳಲ್ಲಿ ಡಬ್ಬಿಂಗ್ ಅನ್ನು ಭಾಷೆಯನ್ನು ಪಸರಿಸುವ ಒಂದು ಸಾಧನವನ್ನಾಗಿ ಗುರುತಿಸಿದೆ. ಕರ್ನಾಟಕದಲ್ಲಿ ಡಬ್ಬಿಂಗ್ ಮೇಲೆ ಅಸಂವಿಧಾನಿಕವಾದ ಖಾಸಗಿ ನಿಷೇಧವೊಂದು ಜಾರಿಯಲ್ಲಿದ್ದು ಇದರಿಂದಾಗಿ ಜಗತ್ತಿನ ಅತ್ಯುತ್ತಮವಾದ ಮಾಹಿತಿ, ಜ್ಞಾನ, ಮನರಂಜನೆಯ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಸವಿಯುವ ಆಯ್ಕೆ ಸ್ವಾತಂತ್ರ್ಯದಿಂದ ಕನ್ನಡಿಗರು ವಂಚಿತರಾಗಿದ್ದಾರೆ. ಭಾರತದ ಸಂವಿಧಾನದಲ್ಲಾಗಲೀ, ಇತರೆ ರಾಜ್ಯಗಳಲ್ಲಾಗಲಿ ಇಲ್ಲವೇ ಕರ್ನಾಟಕ ರಾಜ್ಯದ ಕಾನೂನಿನಲ್ಲಾಗಲಿ ಎಲ್ಲೂ ಕೂಡಾ ಡಬ್ಬಿಂಗನ್ನು ಕಾನೂನು ಬಾಹಿರ ಅನ್ನುವ ಉಲ್ಲೇಖಗಳಿಲ್ಲ.

    ಕರ್ನಾಟಕದಲ್ಲಿನ ಡಬ್ಬಿಂಗ್ ಮೇಲಿನ ನಿಷೇಧದಿಂದಾಗಿ ಜ್ಞಾನ ವಾಹಿನಿಗಳಾದ ಡಿಸ್ಕವರಿ, ನ್ಯಾಟ್-ಜಿಯೊ, ಅನಿಮಲ್ ಪ್ಲಾನೆಟ್ ಗಳಾಗಲೀ, ಮಕ್ಕಳ ಅಚ್ಚುಮೆಚ್ಚಿನ ಡಿಸ್ನಿ, ಕಾರ್ಟೂನ್ ನೆಟ್ವರ್ಕ್, ಪೋಗೊ ಮುಂತಾದ ವಾಹಿನಿಗಳಾಗಲೀ, ಇಲ್ಲವೇ ಜಗತ್ತಿನ ಅತ್ಯುತ್ತಮ ಮನರಂಜನೆಯ ಚಿತ್ರಗಳನ್ನಾಗಲೀ ಕನ್ನಡಿಗರು ಕನ್ನಡದಲ್ಲಿ ನೋಡಿ ಸವಿಯಲಾಗದಂತಹ ಪರಿಸ್ಥಿತಿ ಹುಟ್ಟಿದೆ.

    ಇದರಿಂದಾಗಿ ಹಣ ತೆತ್ತು ಮನರಂಜನಾ ಕಾರ್ಯಕ್ರಮಗಳನ್ನು ನೋಡುವ ಕನ್ನಡಿಗ ಗ್ರಾಹಕನಿಗೆ ತನ್ನ ಇಷ್ಟದ ನುಡಿಯಲ್ಲಿ ತನಗಿಷ್ಟವಾದದ್ದನ್ನು ನೋಡುವ ಆಯ್ಕೆ ಸ್ವಾತಂತ್ರ್ಯವಿಲ್ಲದಂತಾಗಿದೆ. ಕನ್ನಡಿಗರ ಪ್ರತಿನಿಧಿಯಾದ ನೀವು ಇದನ್ನು ಸರಿಪಡಿಸಿ ಸಂವಿಧಾನವು ಮಾನ್ಯ ಮಾಡಿರುವ ಆಯ್ಕೆ ಸ್ವಾತಂತ್ರ್ಯವನ್ನು ಕನ್ನಡಿಗರೆಲ್ಲರಿಗೆ ಕಲ್ಪಿಸಲು ಇರುವ ತೊಡಕುಗಳನ್ನು ನಿವಾರಿಸಬೇಕೆಂದು ಈ ಸಹಿ ಸಂಗ್ರಹ ಅಭಿಯಾನದ ಮೂಲಕ ಕೇಳಿಕೊಳ್ಳುತ್ತೇವೆ.

    ಡಬ್ಬಿಂಗ್ ಪೂರಕವೋ ಮಾರಕವೋ : ನನ್ನ ಗಂಡನ ಹೆಂಡತಿ

    ಡಬ್ಬಿಂಗ್ ಪೂರಕವೋ ಮಾರಕವೋ : ನನ್ನ ಗಂಡನ ಹೆಂಡತಿ

    ಕೃಷ್ಣಮೂರ್ತಿ ಎಂಬುವರು ನಿರ್ಮಿಸಿರುವ ನನ್ನ ಗಂಡನ ಹೆಂಡತಿ ಎಂಬ ಡಬ್ ಆದ ಚಿತ್ರದ ಪೋಸ್ಟರ್ ಈಗ ಡಬ್ಬಿಂಗ್ ಬೇಕೇ? ಬೇಡವೇ? ಎಂಬ ಚರ್ಚೆಗೆ ನಾಂದಿ ಹಾಡಿದೆ. ಪತ್ರಕರ್ತ ಜೋಗಿ ಅವರು ಈ ಪೋಸ್ಟರ್ ತಮ್ಮ ಫೇಸ್ ಬುಕ್ ಪುಟದಲ್ಲಿ ಹಾಕಿ.. ಕನ್ನಡ ಚಿತ್ರಗಳನ್ನು ಮರೆತುಬಿಡಿ ಎಂದಿದ್ದರು.

    ಸುಮಾರು 200ಕ್ಕೂ ಅಧಿಕ ಪರಭಾಷೆ ಚಿತ್ರಗಳು ಡಬ್ ಆಗಿ ಬರಲು ಸಿದ್ಧವಿದೆ. ಡಬ್ಬಿಂಗ್ ನಿಷೇಧವನ್ನು ಸಿಸಿಐ ಕೂಡಾ ವಿರೋಧಿಸಿದೆ. ಅದರೆ, Competition Commission Of India ಈ ಬಗ್ಗೆ ಇನ್ನೂ ತೀರ್ಪು ನೀಡಿಲ್ಲ. ಹೀಗಿರುವಾಗ ಡಬ್ಬಿಂಗ್ ಸಿನಿಮಾ ರಿಲೀಸ್ ಎಷ್ಟು ಸರಿ ಎಂದು ಡಬ್ಬಿಂಗ್ ವಿರೋಧಿಗಳು ವಾದಿಸಿದ್ದಾರೆ.

    ಡಬ್ಬಿಂಗ್ ಪರ ನಿಂತ ನಿರ್ದೇಶಕ ಗುರುಪ್ರಸಾದ್

    ಡಬ್ಬಿಂಗ್ ಪರ ನಿಂತ ನಿರ್ದೇಶಕ ಗುರುಪ್ರಸಾದ್

    ಮಠ, ಎದ್ದೇಳು ಮಂಜುನಾಥ, ಡೈರೆಕ್ಟರ್ ಸ್ಪೆಷಲ್ ಸದಭಿರುಚಿ ಚಿತ್ರಗಳನ್ನು ಕನ್ನಡ ಸಿನಿರಸಿಕರಿಗೆ ನೀಡಿರುವ ಗುರುಪ್ರಸಾದ್ ಅವರು ಡಬ್ಬಿಂಗ್ ಚಿತ್ರ ಬರಲಿ ಇದರಿಂದ ಸೃಜನಶೀಲತೆಗೆ ಏನು ಧಕ್ಕೆ ಆಗುವುದಿಲ್ಲ. ಡಬ್ಬಿಂಗ್ ಬಂದರೆ ಭಯ ಏತಕ್ಕೆ? ಎಂದು ಪ್ರಶ್ನಿಸಿದ್ದಾರೆ.

    'ಥಾಮಸ್ ಎಡಿಸನ್ ಬಲ್ಬ್ ಕಂಡು ಹಿಡಿತಾನೆ. ಆಗ ಮೇಣದ ಬತ್ತಿ ಮಾಡೋರೆಲ್ಲ, ಇದನ್ನ ಬಿಡಲ್ಲ ನಾವು, ನಮ್ದು ಮೇಣದ ಬತ್ತಿ ವ್ಯಾಪಾರ, ಅದಕ್ಕೆ ಏಟಾಗುತ್ತೆ. ನಾವು ಬಿಡಲ್ಲ ಅಂತ ಕೂತಿದ್ರೆ ಹೇಗಿರುತ್ತೆ? ಡಬ್ಬಿಂಗ್ ಬೇಡ ಅನ್ನೋರ ಕತೆನೂ ಅಷ್ಟೇ'

    ಸ್ವಮೇಕ್ ಚಿತ್ರಗಳನ್ನು ನೀಡಿರುವ ನಿರ್ದೇಶಕ ಗುರುಪ್ರಸಾದ್ ಅವರು ರಿಮೇಕ್ ಚಿತ್ರಗಳು ಹಾಗೂ ರಿಮೇಕ್ ರಿಯಾಲಿಟಿ ಶೋಗಳಿಗೆ ಸಂಭಾಷಣೆ, ಸ್ಕ್ರಿಪ್ಟ್ ಒದಗಿಸಿದ್ದಾರೆ ಎಂಬುದು ಬೇರೆ ಮಾತು. ಆದರೆ, ಡಬ್ಬಿಂಗ್ ಪರ ಬ್ಯಾಟಿಂಗ್ ಮಾಡುತ್ತಿರುವುದು ಕಂಡು ಗಾಂಧಿನಗರ ಗಲಿಬಿಲಿಯಾಗಿರುವುದಂತೂ ಸತ್ಯ.

    ಪಬ್ಲಿಕ್ ಟಿ.ವಿ ಮುಖ್ಯಸ್ಥ ರಂಗನಾಥ್ ಕೇಳಿದ ಪ್ರಶ್ನೆ

    ಪಬ್ಲಿಕ್ ಟಿ.ವಿ ಮುಖ್ಯಸ್ಥ ರಂಗನಾಥ್ ಕೇಳಿದ ಪ್ರಶ್ನೆ

    ಪಬ್ಲಿಕ್ ಟಿ.ವಿಯಲ್ಲಿ ನಿರೂಪಕ ರಂಗನಾಥ್ ಗೆ ಕನ್ನಡ ಚಿತ್ರರಂಗ ಸಮರ್ಪಕವಾಗಿ ಉತ್ತರಿಸಲಾಗದ ಪ್ರಶ್ನೆಗಳು ಇಂತಿವೆ:
    * ಜಾಹೀರಾತುಗಳನ್ನು ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆಗೊಳಿಸಿ ನೀವು ನೀವೇ ದುಡ್ಡು ಮಾಡುತ್ತೀರಾ
    * ಕನ್ನಡಚಿತ್ರಗಳಿಗೆ ಪರಭಾಶಾ ಕಲಾವಿದರನ್ನು ಕರೆತರುತ್ತೀರಾ ಕನ್ನಡ ಚಿತ್ರಗಳನ್ನು ಇತರ ಭಾಷೆಗೆ ಡಬ್ ಮಾಡಿ ಅಲ್ಲಿನ ಸಂಸ್ಕೃತಿ ಯಾಕೆ ಹಾಳುಗೆಡವುತ್ತಿದ್ದೀರಾ
    * ಸಿ.ಸಿ.ಐ. ಗೆ ಸಲ್ಲಿಸಿದ ಉತ್ತರದಲ್ಲಿ ನಾವು ಯಾವುದೇ ಉದ್ಯಮಿಗಳಿಗೆ,ಚಾನೆಲ್ಗಳಿಗೆ ಡಬ್ಬಿಂಗ್ ಮಾಡಲು ನಿರ್ಭಂದ ಒಡ್ಡಿಲ್ಲ ತಿಳಿಸಿ ಪರಭಾಷೆ ಚಿತ್ರಗಳು ಇಲ್ಲಿ ಡಬ್ಬಿಂಗ್ ಆಗಲು ಯಾಕೆ ವಿರೋಧ ಮಾಡ್ತಾ ಇದ್ದೀರಾ?

    ಡಬ್ಬಿಂಗ್ ಪರ ಸಾರ್ವಜನಿಕರ ವಾದ

    ಡಬ್ಬಿಂಗ್ ಪರ ಸಾರ್ವಜನಿಕರ ವಾದ

    ಕನ್ನಡಕ್ಕೆ ಡಬ್ಬಿಂಗ್ ಬರುವ ಕುರಿತು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಸಮಿತಿ ವರದಿ ಸಲ್ಲಿಸಿದ್ದು, ಡಬ್ಬಿಂಗ್ ಪರ ಒಲವು ತೋರಿರುವುದು ಸ್ವಾಗತಾರ್ಹ. ಡಬ್ಬಿಂಗ್ ನಿಂದ ಕನ್ನಡ ಸಂಸ್ಕೃತಿ ಕೆಡುತ್ತದೆ ಎಂಬ ಕನ್ನಡ ಚಿತ್ರರಂಗದ ವಾದದಲ್ಲಿ ಹುರುಳಿಲ್ಲ. ಒಂದು ವೇಳೆ ಹಾಗಿದ್ದರೆ ಮಚ್ಚು ಲಾಂಗುಗಳ, ಅರೆ ಬರೆ ಬಟ್ಟೆಗಳ ದೃಶ್ಯಗಳು, ಅತ್ಯಾಚಾರ, ಕೊಲೆ, ಹಿಂಸೆ ದೃಶ್ಯಗಳೇಕೆ ಕನ್ನಡ ಚಿತ್ರಗಳಲ್ಲಿವೆ?

    ಅನ್ಯ ಭಾಷಾ ಚಿತ್ರಗಳ ರಿಮೇಕ್ ಕೂಡಾ ಅಪಾಯಕಾರಿ ಅಲ್ಲವೇ? ಡಬ್ಬಿಂಗ್ ಅಥವಾ ಇನ್ನಾವುದೇ ಚಿತ್ರವನ್ನು ನೋಡುವ ಇಲ್ಲವೇ ಬಿಡುವ ಆಯ್ಕೆ ಹಣಕೊಟ್ಟು ಚಿತ್ರ ನೋಡುವ ಗ್ರಾಹಕನಿಗಿರುತ್ತದೆ.ಈ ಆಯ್ಕೆಯನ್ನು ಕಿತ್ತುಕೊಳ್ಳುವಹಕ್ಕು ಯಾರಿಗೂ ಇರುವುದಿಲ್ಲ. ಈ ನಿಟ್ಟಿನಲ್ಲಿ ಸಿಸಿಐ ವರದಿ ಸರಿಯಾಗಿಯೇ ಇದೆ, ಹಾಗಾಗಿ ಕನ್ನಡಕ್ಕೆ ಡಬ್ಬಿಂಗ್ ಬರಲಿ- ರತೀಶ್ ರತ್ನಾಕರ, ಚಿಕ್ಕಮಗಳೂರು

    'ಸಿಲ್ಕ್ ಸಕತ್ ಹಾಟ್ ಮಗಾ' ನೋಡಿ ಜನ ಕೆಡೋಕೆ ಆಗಲ್ವ

    'ಸಿಲ್ಕ್ ಸಕತ್ ಹಾಟ್ ಮಗಾ' ನೋಡಿ ಜನ ಕೆಡೋಕೆ ಆಗಲ್ವ

    ಡಬ್ಬಿಂಗ್ ಮಾಡಿದ್ರೆ ಪರಭಾಷೆಯ ಸಂಸ್ಕೃತಿ ಕನ್ನಡಕ್ಕೆ ಬಂದು ಕನ್ನಡಿಗರು ಹಾಳಾಗ್ತಾರಂತೆ ಫ್ರೆಂಚ್ ಕಿಸ್, ಬಿಕಿನಿ ಕಲ್ಚರ್ ಬರುತ್ತೆ ಅಂತಾರೆ. ಹಾಗಿದ್ರೆ ಇವತ್ತು ಕನ್ನಡ ಚಿತ್ರಗಳಲ್ಲಿ ತೋರಿಸೊದೆಲ್ಲಾ ಕನ್ನಡ ಸಂಸ್ಕೃತಿನಾ 'ಸಿಲ್ಕ್ ಸಕತ್ ಹಾಟ್ ಮಗಾ' ನೋಡಿ ಜನ ಕೆಡೋಕೆ ಆಗಲ್ವ. ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಆ ಚಿತ್ರದಲ್ಲಿ ಬರೀ ಸೀರೆಯುಟ್ಟು ಅಭಿನಯಿಸಿದ್ದಾರಾ?

    ಡಬ್ಬಿಂಗ್ ವಿರೋಧಿಸುವವರು ರೀಮೇಕ್ ಬೆನ್ನ ಹತ್ತುತ್ತಾರಲ್ಲಾ? ಇದು ಯಾವ ನ್ಯಾಯ ಸ್ವಾಮಿ? ಕ್ರಿಯಾಶೀಲತೆ, ಸೃಜನಶೀಲತೆ ಡಬ್ಬಿಂಗ್ ಮಾಡಿದರೆ ಇರಲ್ಲ ಅನ್ನೋದಾದ್ರೆ, ರೀಮೇಕ್ ಮಾಡಿದ್ರೆ ಇರತ್ತಾ?

    ಟೈಟಾನಿಕ್ ರೀತಿಯ ಸಿನಿಮಾ ಮಾಡಕ್ಕೆ ಆಗತ್ತಂತೆ

    ಟೈಟಾನಿಕ್ ರೀತಿಯ ಸಿನಿಮಾ ಮಾಡಕ್ಕೆ ಆಗತ್ತಂತೆ

    ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಟೈಟಾನಿಕ್ ರೀತಿಯ ಸಿನಿಮಾ ಮಾಡಕ್ಕೆ ಆಗತ್ತಂತೆ ಅದಕ್ಕೆ ಟೈಟಾನಿಕ್ ಸಿನಿಮಾ ಡಬ್ಬಿಂಗ್ ಬೇಡವಂತೆ . ಕನ್ನಡ ಮೂಲ ಚಿತ್ರರಂಗದಲ್ಲಿ ಯಾವಾಗ್ ಬರತ್ತೆ ಸಿವಾ ಟೈಟಾನಿಕ್.

    ಕನ್ನಡ ಚಿತ್ರಗಳನ್ನು ನೋಡೋವ್ರು ಗ್ರಾಹಕರು ಅಲ್ಲ ಅವರು ಪ್ರೇಕ್ಷಕರು ಅಂತಾರೆ ಚಿತ್ರರಂಗದ ಕೆಲ ದಿಗ್ಗಜರು ಗ್ರಾಹಕರು ಅಲ್ಲ ಅಂದ್ರೆ ಏನ್ ಚಿತ್ರಮಂದಿರದಲ್ಲಿ ಚಿತ್ರಗಳ್ನ ಬಿಟ್ಟಿ ತೋರಿಸ್ತಾರಾ ಅಥವಾ ನಾನು ಚಿತ್ರ ರಸಿಕ ನಾನು ಕಲೆಯ ಆರಾಧಕ ನನಗೆ ಸಿನಿಮಾ ಬಿಟ್ಟಿ ತೋರಿಸಿ ಅಂದ್ರೆ ತೋರಿಸ್ತಾರಾ ?

    ಚಿಂಟು ಟಿವಿಯಲ್ಲಿ ಡಬ್ಬಿಂಗ್ ಇಲ್ವಾ

    ಚಿಂಟು ಟಿವಿಯಲ್ಲಿ ಡಬ್ಬಿಂಗ್ ಇಲ್ವಾ

    ತಮಿಳುನಾಡು, ಆಂಧ್ರಪ್ರದೇಶದಲ್ಲಿ ಚಿಂಟು ಟಿವಿ, ಡಿಸ್ಕವರಿ ಚಾನೆಲ್, ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ಎಲ್ಲವನ್ನು ತಮ್ಮ ಭಾಷೆಯಲ್ಲೇ ಅಲ್ಲಿನ ಮಕ್ಕಳು ನೋಡಿ ಜ್ಞಾನ ವೃದ್ಧಿ ಮಾಡಿಕೊಳ್ಳುತ್ತಿದ್ದಾರೆ. ಅದರೆ, ಇಲ್ಲಿ ಕನ್ನಡದಲ್ಲಿ ಕಾರ್ಟೂನ್ ಕೂಡಾ ಡಬ್ ಆಗಲು ಕಷ್ಟವಿದೆ

    ಈ ಸಮಸ್ಯೆಗೆ ತಕ್ಷಣದ ಪರಿಹಾರವಾದರೂ ಏನು?

    ಈ ಸಮಸ್ಯೆಗೆ ತಕ್ಷಣದ ಪರಿಹಾರವಾದರೂ ಏನು?

    ಸಿನಿಮಾ ನಿರ್ಮಾಪಕರು ವಿತಕರು, ವಿಮರ್ಶಕರು, ಚಿತ್ರಮಂದಿರ ಮಾಲೀಕರು ಸಮಸ್ಯೆಗ ಪರಿಹಾರ ಕಂಡುಕೊಳ್ಳಬೇಕಿದೆ. ಕಾರಣವಿಲ್ಲದೆ ಡಬ್ಬಿಂಗ್ ವಿರೋಧಿಸುವುದು ಪ್ರಜಾಪ್ರಭುತ್ವದಲ್ಲಿ ಸಾಧ್ಯವಿಲ್ಲ. ಡಬ್ಬಿಂಗ್ ನಿಂದ ಇಲ್ಲಿನ ಕಲಾವಿದರ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದಾದರೆ ಮಹಾರಾಷ್ಟ್ರ ಮಾದರಿಯಲ್ಲಿ ವಿಮೆ ಮಾಡಿಸಿಕೊಳ್ಳಲಿ.
    * ಕನ್ನಡದ ಖ್ಯಾತನಾಮರು ರಜನಿಕಾಂತ್ ಅವರ ತಮಿಳು ಚಿತ್ರ ವಿತರಣೆ ನಿಲ್ಲಿಸಲಿ.
    * ಎಲ್ಲಾ ಪರಭಾಷೆ ಚಿತ್ರಗಳಿಗೂ ಕನ್ನಡ ಸಬ್ ಟೈಟಲ್ ಕಡ್ಡಾಯ ಗೊಳಿಸಲಿ
    *ವೈಜ್ಞಾನಿಕ, ಐತಿಹಾಸಿಕ ಚಾನೆಲ್ ಗಳಿಗೆ ಡಬ್ಬಿಂಗ್ ಅನುಮತಿ ಕಡ್ಡಾಯವಾಗಲಿ
    * ಯಾವುದೂ ಆಗದಿದ್ದರೆ ಡಬ್ಬಿಂಗ್ ಜತೆಗೆ ರಿಮೇಕ್ ಕೂಡಾ ನಿಲ್ಲಿಸಿ ಸ್ವಂತವಾಗಿ ಚಿತ್ರಗಳನ್ನು ಮಾಡಲಿ

    English summary
    Sandalwood, which was in a shock on Thursday by seeing the poster of a dubbed Kannada movie Nann Gandana Hendthi (My Husband's Wife), had another shock in the late evening, when the move was supported by director Guruprasad. Many fans submitted an Online Petition to remove Ban on Dubbing films in Karnataka
    Friday, January 10, 2014, 13:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X