»   » ಅಂಬಿ ಪುತ್ರನಿಗೆ 'ಒಡೆಯರ್' ಆಕ್ಷನ್ ಕಟ್: ದರ್ಶನ್ 'ಒಡೆಯರ್' ಏನಾಯ್ತು?

ಅಂಬಿ ಪುತ್ರನಿಗೆ 'ಒಡೆಯರ್' ಆಕ್ಷನ್ ಕಟ್: ದರ್ಶನ್ 'ಒಡೆಯರ್' ಏನಾಯ್ತು?

Posted By:
Subscribe to Filmibeat Kannada

ರೆಬಲ್ ಸ್ಟಾರ್ ಅಂಬರೀಶ್ ಮಗ ಅಭಿಷೇಕ್ ಅವರ ಸಿನಿಮಾ ಎಂಟ್ರಿ ಯಾವಾಗ ಆಗುತ್ತೆ ಎಂಬ ನಿರೀಕ್ಷೆಗೆ ಮತ್ತೊಂದು ಉತ್ತರ ಸಿಕ್ಕಿದೆ. ಈ ಮುಂಚೆಯೇ ಹೇಳಿದಾಗೆ, ಅಂಬಿ ಪುತ್ರನ ಚೊಚ್ಚಲ ಚಿತ್ರವನ್ನ ಖ್ಯಾತ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗಿದೆ.

ಆದ್ರೆ, ಚಿತ್ರದ ಕಥೆ ಮತ್ತು ನಿರ್ದೇಶಕ ಯಾರು ಎಂಬುದರ ಬಗ್ಗೆ ಬಹಿರಂಗವಾಗಿರಲಿಲ್ಲ. ಇದೀಗ, ಈ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ. ಅಂಬಿ ಮಗನ ಚಿತ್ರಕ್ಕೆ ಡೈರೆಕ್ಟರ್ ಸಿಕ್ಕಾಗಿದೆ. ಕಥೆನೂ ಸಿದ್ದವಾಗಿದೆ. ಇನ್ನೇನಿದ್ರೂ ಸಿನಿಮಾ ಲಾಂಚ್ ಮಾಡುವುದು ಮಾತ್ರ ಬಾಕಿ ಅಷ್ಟೇ ಎಂಬುದು ಗಾಂಧಿನಗರದಲ್ಲಿ ಕೇಳಿಬರುತ್ತಿದೆ.

ಅಂಬರೀಶ್ ಮಗನ ಸಿನಿಮಾ ಬಗ್ಗೆ ಹೀಗೊಂದು ಸುದ್ದಿ

ಇದಕ್ಕು ಮುಂಚೆ ನಟ ದರ್ಶನ್ ಜೊತೆ ಒಂದು ಸಿನಿಮಾ ಮಾಡುವುದಾಗಿ ಸಂದೇಶ ನಾಗರಾಜ್ ಹೇಳಿದ್ದರು. ಅದಕ್ಕೆ ಒಡೆಯರ್ ಎಂದು ಟೈಟಲ್ ಕೂಡ ಫಿಕ್ಸ್ ಮಾಡಿದ್ದರು. ಪವನ್ ಒಡೆಯರ್ ಅವರನ್ನ ನಿರ್ದೇಶಕ ಎಂದು ಕೂಡ ಘೋಷಿಸಿಕೊಂಡಿದ್ದರು. ಆದ್ರೀಗ, ಅದಕ್ಕು ಮುಂಚೆಯೇ ಮತ್ತೊಂದು ಚಿತ್ರಕ್ಕೆ ಸಂದೇಶ್ ಕಂಬೈನ್ಸ್ ಮುಂದಾಗಿದೆ. ಹಾಗಿದ್ರೆ, ದರ್ಶನ್ ಸಿನಿಮಾ ಕಥೆ ಏನು? ಅಂಬಿ ಪುತ್ರನ ಚಿತ್ರ ಯಾವುದು? ಎಂದು ತಿಳಿಯಲು ಮುಂದೆ ಓದಿ....

ಅಂಬಿ ಪುತ್ರನಿಗೆ ಒಡೆಯರ್ ನಿರ್ದೇಶನ

ಅಂಬಿರೀಷ್ ಮಗನ ಮೊದಲ ಚಿತ್ರಕ್ಕೆ ಪವನ್ ಒಡೆಯರ್ ಮತ್ತು ಚೇತನ್ ಕುಮಾರ್ ಹೆಸರು ಕೇಳಿ ಬರುತ್ತಿತ್ತು. ಇದೀಗ ಅಂತಿಮವಾಗಿ ಸ್ಟಾರ್ ಡೈರೆಕ್ಟರ್ ಪವನ್ ಒಡೆಯರ್ ಅವರಿಗೆ ಈ ಜವಾಬ್ದಾರಿ ಸಿಕ್ಕಿದೆಯಂತೆ. ಅಧಿಕೃತ ಘೋಷಣೆಯೊಂದೇ ಬಾಕಿ.

ಅಂಬರೀಶ್ ಮಗನ ಮೊದಲ ಸಿನಿಮಾದ ಟೈಟಲ್ ಫಿಕ್ಸ್ ಆಯ್ತು!

ಯಾವಾಗ ಆರಂಭ

ಸದ್ಯ, ಕೇಳಿಬಂದಿರುವ ಮಾಹಿತಿಯಂತೆ, ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಪವನ್ ನಿರ್ದೇಶನದಲ್ಲಿ ಅಭಿಷೇಕ್ ಸಿನಿಮಾ ಶುರುವಾಗಲಿದೆಯಂತೆ. ಅಭಿಷೇಕ್​ಗೆ ನಾಯಕಿಯಾಗಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕೌತುಕವಾಗಿಯೇ ಉಳಿದಿದೆ.

ಸಂದೇಶ್-ಪವನ್ ಜೋಡಿ

ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ಪವನ್ ಒಡೆಯರ್ ಜೋಡಿಯಲ್ಲಿ ದರ್ಶನ್ ಸಿನಿಮಾ ಸೆಟ್ಟೇರಬೇಕಿತ್ತು. ಅದ್ರೀಗ, ಅದಕ್ಕೂ ಮುಂಚೆ ಅಂಬಿಪುತ್ರನಿಗಾಗಿ ಈ ಜೋಡಿ ಒಂದಾಗಿರುವುದು ಕುತೂಹಲ ಹೆಚ್ಚಿಸಿದೆ. ಹಾಗಿದ್ರೆ, ದರ್ಶನ್ ಸಿನಿಮಾ ಏನಾಯ್ತು?

ದರ್ಶನ್ 'ಒಡೆಯರ್' ಕಥೆ ಏನು?

ಪವನ್ ಒಡೆಯರ್ ನಿರ್ದೇಶನದಲ್ಲಿ ಮೂಡಿ ಬರಬೇಕಿದ್ದ ದರ್ಶನ್ ಸಿನಿಮಾ, ರದ್ದಾಗಿದೆ ಎಂದ ಸುದ್ದಿಯೂ ಹರಿದಾಡಿತ್ತು. ಈ ಚಿತ್ರಕ್ಕೆ ಒಡೆಯರ್ ಎಂದು ಟೈಟಲ್ ಕೂಡ ಇರಿಸಲಾಗಿತ್ತು. ದರ್ಶನ್ ಅವರ ಮುಂದಿನ ಸಿನಿಮಾ ಶೈಲಾಜ್ ನಾಗ್ ಬ್ಯಾನರ್ ನಲ್ಲಿ ಎಂದು ಘೋಷಿಸುತ್ತಿದ್ದಂತೆ, ಒಡೆಯರ್ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಬಹುಶಃ ಈ ಸಿನಿಮಾ ಮುಂದಕ್ಕೆ ಹೋದ ಕಾರಣ, ಅಂಬಿ ಮಗನಿಗೆ ಸಿನಿಮಾ ಮಾಡ್ತಿದ್ದಾರ ಅಥವಾ ದರ್ಶನ್ ಗೆ ಮಾಡಬೇಕಿದ್ದ ಅದೇ ಚಿತ್ರವನ್ನ ಅಭಿಷೇಕ್ ಕೈಯಲ್ಲಿ ಮಾಡಿಸುತ್ತಿದ್ದಾರ ಗೊತ್ತಿಲ್ಲ.

'ಒಡೆಯರ್'ಗಾಗಿ ದರ್ಶನ್ ಎದುರಿಸಬೇಕಾಗಿದೆ ಬಹುದೊಡ್ಡ 'ಚಾಲೆಂಜ್'

English summary
Latest news in gandhinagar, kannada director Pawan wodeyar to direct ambarish son abhishek's debut movie. the movie will produced by sandesh nagraj

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X