»   » ಶಾರುಖ್ ಖಾನ್ ವಿರುದ್ಧ ವರ್ಣಮಯ ದೂರು

ಶಾರುಖ್ ಖಾನ್ ವಿರುದ್ಧ ವರ್ಣಮಯ ದೂರು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ನಿಮ್ಮ ತ್ವಚೆಗೆ ಗೌರವರ್ಣ ಬೇಕೆ? ಈ ಕ್ರಿಮ್ ಹಚ್ಚಿಕೊಳ್ಳಿ ಎಂದು ಪುರುಷರ ಮುಖರಾವಿಂದವನ್ನು ಬೆಳಗುವ ಟಿಪ್ಸ್ ನೀಡುತ್ತಿದ್ದ ಕಿಂಗ್ ಖಾನ್ ಶಾರುಖ್ ವಿರುದ್ಧ ಆನ್ ಲೈನ್ ಪಿಟೀಷನ್ ಗೆ ಚಾಲನೆ ನೀಡಲಾಗಿದೆ. ಟಿವಿಗಳಲ್ಲಿ ಶಾರುಖ್ ಖಾನ್ ಅವರು ಗೌರವರ್ಣದ ಬಗ್ಗೆ ಕೊಡುವ ಸಲಹೆ ಈಗ ಶ್ವೇತ ವರ್ಣ ಹಾಗೂ ಕೃಷ್ಣ ವರ್ಣೀಯರ ನಡುವಿನ ಕದಂಕ ಹೆಚ್ಚಿಸಿದೆ.

Dark is Beautiful ಎಂದು ಹೇಳಿ ಶಾರುಖ್ ಖಾನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಇಮಾಮಿ ಸಮೂಹದ ಉತ್ಪನ್ನ ಫೇರ್ ಅಂಡ್ ಹ್ಯಾಂಡ್ ಸಮ್ ನ ಉತ್ಪನ್ನದ ಪರವಾಗಿ ಪ್ರಚಾರ ಮಾಡುತ್ತಾ ಕಪ್ಪು ವರ್ಣಕ್ಕಿಂತ ಶ್ವೇತವರ್ಣ ಶ್ರೇಷ್ಠ ಅದಕ್ಕಾಗಿ ನೀವು ಈ ಕ್ರೀಮ್ ಬಳಸಿ ಮುಜುಗರ ಅನುಭವಿಸಬೇಡಿ ಎಂದು ಶಾರುಖ್ ಹೇಳುತ್ತಾರೆ.

Petition filed against Shahrukh Khan for endorsing fairness cream

ಶಾರುಖ್ ಪ್ರಚಾರ ಹೇಳಿಕೆ ಖಂಡಿಸಿ www.change.org ನಲ್ಲಿ ಹಾಕಿರುವ ಆನ್ ಲೈನ್ ಪಿಟೀಷನ್ ಗೆ ಈಗಾಗಲೇ 13,000ಕ್ಕೂ ಹೆಚ್ಚು ಜನರ ಸಹಿ ಬಿದ್ದಿದೆ. ಶ್ವೇತ ಶುಭ್ರ ಮುಖವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಚಾರ ಮಾಡುವುದ್ದು ಎಷ್ಟು ಸರಿ ಇದು ವರ್ಣ ಬೇಧ ನೀತಿ ಅನುಸರಿಸಿದ್ದಂತೆ. ಹೀಗಾಗಿ ಜಾಹೀರಾತಿನಲ್ಲಿರುವ 'zyada' ಎಂಬ ಪದ ಬಳಕೆ ಆಕ್ಷೇಪಾರ್ಹ ಎಂದು ದೂರುದಾರರು ಹೇಳಿದ್ದಾರೆ.

ಶ್ವೇತ ಶುಭ್ರ ಮುಖವಿದ್ದರೆ ಮಾತ್ರ ಯಶಸ್ಸು ಸಾಧ್ಯ ಎಂದು ಪ್ರಚಾರ ಮಾಡುವುದ್ದು ಎಷ್ಟು ಸರಿ ಇದು ವರ್ಣ ಬೇಧ ನೀತಿ ಅನುಸರಿಸಿದ್ದಂತೆ. ಹೀಗಾಗಿ ಜಾಹೀರಾತಿನಲ್ಲಿರುವ 'zyada' ಎಂಬ ಪದ ಬಳಕೆ ಆಕ್ಷೇಪಾರ್ಹ ಎಂದು ದೂರು ದಾರರು ಹೇಳಿದ್ದಾರೆ.

ಬಾಲಿವುಡ್ ನಟಿ, ಸಾಮಾಜಿಕ ಕಾರ್ಯಕರ್ತೆ ನಂದಿತಾ ದಾಸ್ ಅವರು ಕೂಡಾ ಈ ದೂರಿಗೆ ಸಹಿ ಹಾಕಿ, ಈ ರೀತಿ ತಾರತಮ್ಯದ ಹೇಳಿಕೆ ಇರುವ ಜಾಹೀರಾತಿಗೆ ಕಡಿವಾಣ ಅಗತ್ಯ ಎಂದಿದ್ದಾರೆ. ಇಮಾನಿ ಕಂಪನಿ ಉತ್ಪನ್ನದ ಜಾಹೀರಾತು ನಿರ್ದೇಶಿಸಿದ ರಾಜ್ ಕುಮಾರ್ ಹಿರಾನಿ ವಿರುದ್ಧ ಕೂಡಾ ದೂರು ಬಂದಿದೆ. ಕ್ಯಾನ್ವಸ್ ಫಿಲಂ ಅಡಿಯಲ್ಲಿ ಈ ಜಾಹೀರಾತು ನಿರ್ಮಾಣಗೊಂಡಿದೆ.

Actiogenನ ಚಂದಾ ಝವೇರಿ, ಕ್ಯಾನ್ವಸ್ ಫಿಲಂನ ಶಾಕುನ್ ಬಾತ್ರ, ಇಮಾನಿ ಸಮೂಹದ ನಿರ್ದೇಶಕ ಮೋಹನ್ ಗೋಯೆಂಕಾ, ಸಿಚುಯೇಷನ್ ಅಡ್ವರ್ಟೈಸ್ಮೆಂಟ್ ನ ಕ್ರಿಯಾಶೀಲ ನಿರ್ದೇಶಕ ಮಿಲಿಂದ್ ನಬಾರ್ ವಿರುದ್ಧ ಕೂಡಾ ಆನ್ ಲೈನ್ ದೂರು, ಟೀಕೆಗಳು ಕೇಳಿ ಬಂದಿದೆ. ಈ ದೂರಿಗೆ ಸಹಿ ಹಾಕಿದ ಮೇಲೆ ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರಿಗೆ ದೂರು ಸಲ್ಲಿಸುವ ಆಲೋಚನೆ ಇದೆ ಎಂದು ದೂರುದಾರರು ಹೇಳಿದ್ದಾರೆ.

English summary
Fairness is an obsession and its not just limited to women anymore. Men are being trapped into the same "fair skin and successful stories" lie at an alarming rate with the help of celebrities. One such celebrity who is seen inspiring hundreds of men to use a fairness cream on the television is Shahrukh Khan.
Please Wait while comments are loading...