For Quick Alerts
  ALLOW NOTIFICATIONS  
  For Daily Alerts

  ಹಬ್ಬಕ್ಕೆ ಸಜ್ಜಾಗಿ ಧ್ರುವ ಫ್ಯಾನ್ಸ್: ಪೊಗರು ಬಿಡುಗಡೆ ದಿನಾಂಕ ಲಾಕ್?

  |

  2021ನೇ ವರ್ಷಕ್ಕೆ ದೊಡ್ಡ ದೊಡ್ಡ ಸಿನಿಮಾಗಳು ತೆರೆಗೆ ಬರಲು ಸಾಲುಗಟ್ಟಿ ಸಜ್ಜಾಗಿ ನಿಂತಿವೆ. ಪವರ್ ಸ್ಟಾರ್ ನಟನೆಯ ಯುವರತ್ನ ಏಪ್ರಿಲ್ ಮೊದಲನೇ ವಾರದಲ್ಲಿ ಥಿಯೇಟರ್‌ಗೆ ಬರ್ತಿದೆ. ಹಾಗಾಗಿ ಯಾವ ಸ್ಟಾರ್ ನಟನ ಚಿತ್ರ ಮೊದಲು ಬರುತ್ತೆ ಎಂಬ ಕುತೂಹಲ, ಚರ್ಚೆ ಹೆಚ್ಚಾಗಿದೆ.

  ಪೊಗರು ರಿಲೀಸ್ ದಿನಾಂಕವನ್ನು ಲಾಕ್ ಮಾಡಿಕೊಂಡ ಚಿತ್ರತಂಡ | Filmibeat Kannada

  ಸದ್ಯದ ಬೆಳವಣಿಗೆ ಗಮನಿಸಿದರೆ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಮೊದಲು ಬರುವುದು ಬಹುತೇಕ ಖಚಿತವಾಗಿದೆ. ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದ ಡೈಲಾಗ್ ಟ್ರೈಲರ್ ಮೂರು ಭಾಷೆಯಲ್ಲಿ ಸದ್ದು ಮಾಡ್ತಿದೆ. ಲೇಟೆಸ್ಟ್ ವರದಿ ಪ್ರಕಾರ ಪೊಗರು ಸಿನಿಮಾ ಎರಡು ದಿನಾಂಕವನ್ನು ಲಾಕ್ ಮಾಡಿದೆ. ಈ ಎರಡರಲ್ಲಿ ಒಂದು ದಿನ ಪೊಗರು ಚಿತ್ರಮಂದಿರಕ್ಕೆ ಬರುವುದು ಕನ್‌ಫರ್ಮ್ ಎನ್ನಲಾಗಿದೆ. ಮುಂದೆ ಓದಿ...

  ರಶ್ಮಿಕಾ ಜೊತೆ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ನಟ ಧ್ರುವ ಸರ್ಜಾ

  ಜನವರಿ ಅಂತ್ಯಕ್ಕೆ ಪೊಗರು!

  ಜನವರಿ ಅಂತ್ಯಕ್ಕೆ ಪೊಗರು!

  ಜನವರಿ ತಿಂಗಳಲ್ಲಿ ಪೊಗರು ಸಿನಿಮಾ ರಿಲೀಸ್ ಆಗುವ ತಯಾರಿಯಲ್ಲಿದೆ ಎಂದು ಹೇಳಲಾಗುತ್ತಿತ್ತು. ಈ ಹಿನ್ನೆಲೆ ಪ್ರಚಾರದ ಕೆಲಸಗಳನ್ನು ಸಹ ಶುರು ಮಾಡಿದೆ. ಈಗಾಗಲೇ ಹೈದರಾಬಾದ್‌ ಮತ್ತು ಚೆನ್ನೈಗೆ ಹೋಗಿ ಬಂದಿರುವ ಧ್ರುವ ಮತ್ತು ನಂದಕಿಶೋರ್ ರಿಲೀಸ್ ದಿನಾಂಕವನ್ನು ಲಾಕ್ ಮಾಡಿ ಬಂದಿದ್ದಾರೆ ಎನ್ನಲಾಗಿದೆ.

  ಜನವರಿನಾ ಅಥವಾ ಫೆಬ್ರವರಿನಾ?

  ಜನವರಿನಾ ಅಥವಾ ಫೆಬ್ರವರಿನಾ?

  ಸದ್ಯಕ್ಕೆ ನಿಗದಿಯಾಗಿರುವಂತೆ ಜನವರಿ ಕೊನೆಯ ವಾರದಲ್ಲಿ ಅಂದ್ರೆ 29ನೇ ತಾರೀಖು ಅಥವಾ ಫೆಬ್ರವರಿ ಮೊದಲ ವಾರ ಅಂದ್ರೆ 5ನೇ ತಾರೀಖು ಪೊಗರು ಪ್ರೇಕ್ಷಕರ ಮುಂದೆ ಬರುವ ಹಾದಿಯಲ್ಲಿದೆ. ಶೀಘ್ರದಲ್ಲೇ ಅಧಿಕೃತವಾಗಿ ದಿನಾಂಕ ಘೋಷಣೆಯಾಗಲಿದೆ.

  ಹೊಷ ವರ್ಷಕ್ಕೆ ತೆಲುಗು ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ಘೋಷಿಸಿದ ಧ್ರುವ ಸರ್ಜಾ

  ಕರ್ನಾಟಕದಲ್ಲಿ ಶೇಕಡಾ 100ರಷ್ಟು ಅನುಮತಿ!

  ಕರ್ನಾಟಕದಲ್ಲಿ ಶೇಕಡಾ 100ರಷ್ಟು ಅನುಮತಿ!

  ತಮಿಳುನಾಡಿನಲ್ಲಿ ಥಿಯೇಟರ್‌ಗಳಿಗೆ ಶೇಕಡಾ 100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಈಗ ಕರ್ನಾಟಕದಲ್ಲೂ ಇಂತಹದೊಂದು ಬೆಳವಣಿಗೆಯ ನಿರೀಕ್ಷೆಯಲ್ಲಿದ್ದಾರೆ ಸ್ಯಾಂಡಲ್‌ವುಡ್ ಮಂದಿ. ಬಹುಶಃ ಪೊಗರು ಚಿತ್ರಕ್ಕೆ ಇದು ವರದಾನ ಆಗಬಹುದು.

  ಧ್ರುವ-ರಶ್ಮಿಕಾ ಸಿನಿಮಾ

  ಧ್ರುವ-ರಶ್ಮಿಕಾ ಸಿನಿಮಾ

  ನಂದಕಿಶೋರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ತೆಲುಗು ನಟ ಜಗಪತಿ ಬಾಬು, ಧನಂಜಯ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಕಾಣಿಸಿಕೊಂಡಿದ್ದಾರೆ.

  English summary
  dhruva sarja starrer pogaru movie set to release on january 29 or february 5?.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X