For Quick Alerts
  ALLOW NOTIFICATIONS  
  For Daily Alerts

  'ಆದಿಪುರುಷ' ಹೆಸರಿಗೂ ಮುಂಚೆ ಪ್ರಭಾಸ್ ಚಿತ್ರಕ್ಕೆ ಇನ್ನೊಂದು ಟೈಟಲ್ ಇಡಲಾಗಿತ್ತು!

  |

  ತೆಲುಗು ನಟ ಪ್ರಭಾಸ್ ಅಭಿನಯಿಸಲಿರುವ 'ಆದಿಪುರುಷ' ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಪ್ಯಾನ್ ಇಂಡಿಯಾ ತೆರೆಕಾಣಲಿರುವ ಈ ಚಿತ್ರ ಶೂಟಿಂಗ್ ಮುಂಚೆಯೇ ಹೆಚ್ಚು ನಿರೀಕ್ಷೆ ಹುಟ್ಟಿಸಿದೆ.

  ಬ್ರಹ್ಮ ಚಿತ್ರದಲ್ಲಿನ Upendra Pranitha ಮುಂಬೈನ ಕ್ಲಬ್‌ನಲ್ಲಿ ಹಾಡಿನ ಚಿತ್ರೀಕರಣ | Filmibeat Kannada

  ರಾಮಾಯಣ ಕಥೆಯನ್ನಾಧರಿತ ಈ ಚಿತ್ರದಲ್ಲಿ ಪ್ರಭಾಸ್ ಶ್ರೀರಾಮನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಈ ಚಿತ್ರ ಮತ್ತಷ್ಟು ಹೈಪ್ ಕ್ರಿಯೇಟ್ ಮಾಡಿದೆ.

  'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ'ಆದಿಪುರುಷ' ಚಿತ್ರದ ಬಜೆಟ್, VFX ಖರ್ಚು ಕೇಳಿ ದಂಗಾದ ಭಾರತ ಚಿತ್ರರಂಗ

  ಈಗ ವಿಷ್ಯ ಏನಪ್ಪಾ ಅಂದ್ರೆ ಈ ಚಿತ್ರಕ್ಕೆ ಆದಿಪುರುಷ ಎನ್ನುವ ಟೈಟಲ್ ಇಡುವುದಕ್ಕೂ ಮುಂಚೆ 'ಅಯೋಧಿ' ಎಂದು ನಾಮಕರಣ ಮಾಡಲಾಗಿತ್ತಂತೆ. ರಾಮ, ಸೀತೆ, ರಾವಣನ ಕಥೆಯಾದರಿಂದ, ರಾಮನ ಜನ್ಮಸ್ಥಳ ಅಯೋಧ್ಯೆಗೆ ಪೂರಕವಾಗಿ 'ಅಯೋಧಿ' ಎಂದು ಹೆಸರಿಡಲು ಚಿತ್ರತಂಡ ನಿರ್ಧರಿಸಿತ್ತು ಎನ್ನಲಾಗಿದೆ.

  ಆದ್ರೆ, ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಹಾಗೂ ಈ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿದ್ದ ಬೆಳವಣಿಗೆಯನ್ನು ಗಮನಿಸಿ ಆ ಟೈಟಲ್ ಬೇಡವೆಂದು ಕೈಬಿಟ್ಟರು ಎಂದು ತಿಳಿದು ಬಂದಿದೆ.

  ಇನ್ನು ಆದಿ ಪುರುಷ ಚಿತ್ರದ ಒಟ್ಟು ಬಜೆಟ್ 500 ಕೋಟಿ ಎಂದು ಹೇಳಲಾಗಿದೆ. ಈ ಚಿತ್ರಕ್ಕೆ ತಾನಾಜಿ ನಿರ್ದೇಶನ ಮಾಡಿದ್ದ ಓಂ ರಾವತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್ ನಟಿಸಿರುವ ಸಾಹೋ ಚಿತ್ರದಲ್ಲಿ ಸಹ ನಿರ್ಮಾಪಕ ಹಾಗೂ ರಾಧೇ ಶ್ಯಾಮ್ ಚಿತ್ರಕ್ಕೆ ನಿರ್ಮಾಪಕರಾಗಿರುವ ಭೂಷಣ್ ಕುಮಾರ್ ಈಗ ಆದಿ ಪುರುಷ ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ.

  ಪ್ರಭಾಸ್ ಶ್ರೀರಾಮನಾಗಿ ನಟಿಸಿದರೆ, ಸೀತೆ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

  English summary
  Telugu actor Prabhas starrer epic drama was initially titled as a Ayodhi not Adipurush?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X