Don't Miss!
- Automobiles
'ಮಹೀಂದ್ರಾ ಸ್ಕಾರ್ಪಿಯೊ ಎನ್' ಈ ರೂಪಾಂತರಗಳಿಗೆ ಬರೋಬ್ಬರಿ 2 ವರ್ಷ ಕಾಯಬೇಕು..
- News
Iran Earthquake: ವಾಯುವ್ಯ ಇರಾನ್ನಲ್ಲಿ ಭೂಕಂಪನ; 7 ಸಾವು, 400 ಕ್ಕೂ ಹೆಚ್ಚು ಗಾಯಾಳು
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಕೆಜಿಎಫ್ 2' ಬಳಿಕ ಪ್ರಭಾಸ್ ಮೇಲೆ ಹೆಚ್ಚಿದ ಒತ್ತಡ: ಪ್ರಶಾಂತ್ ನೀಲ್‌ಗೆ ಸ್ಪೆಷಲ್ ಕಾಲ್‌ಶೀಟ್!
'ಕೆಜಿಎಫ್ 2' ಸಿನಿಮಾ ಇನ್ನೇನು 50 ದಿನಗಳನ್ನು ಪೂರೈಸಲಿದೆ. ಇದೇ ಸಂಭ್ರಮದಲ್ಲಿ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತೇಲಾಡುತ್ತಿದೆ. ಬಾಕ್ಸಾಫೀಸ್‌ನಲ್ಲಿ ಈಗಾಗಲೇ 1230 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾವೊಂದು ಜಾಗತಿಕ ಮಟ್ಟದಲ್ಲಿ ಬೇಜಾನ್ ಸದ್ದು ಮಾಡಿ, ಹಲ್‌ಚಲ್ ಎಬ್ಬಿಸಿದೆ.
ಇನ್ನೊಂದು ಕಡೆ ಹೊಂಬಾಳೆ ಫಿಲ್ಮ್ಸ್ 'ಕೆಜಿಎಫ್ 2' ಹ್ಯಾಂಗೋವರ್‌ನಿಂದ ಹೊರಬಂದಿದೆ. 'ಸಲಾರ್' ಸಿನಿಮಾ ಕಡೆ ಗಮನ ಹರಿಸುತ್ತಿದೆ. ಪ್ರಶಾಂತ್ ನೀಲ್ ಕೂಡ ಈಗಾಗಲೇ 'ಸಲಾರ್' ಸಿನಿಮಾ ಶೂಟಿಂಗ್ ಕೂಡ ಆರಂಭ ಮಾಡಿದೆ. ಈ ಬೆನ್ನಲ್ಲೇ 'ಸಲಾರ್' ಅಡ್ಡಾದಿಂದ ಒಂದಲ್ಲಾ ಒಂದು ಅಚ್ಚರಿಯ ಸುದ್ದಿಗಳು ಹೊರಬೀಳುತ್ತಲೇ ಇವೆ.
ಲೀಕ್
ಆಯ್ತು
'ಸಲಾರ್'
ಸೆಟ್ಟಿನ
ಫೋಟೊ:
ಡಾರ್ಲಿಂಗ್ಸ್
ಖುಷ್
ಹುವಾ!
'ಸಲಾರ್' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಈಗಾಗಲೇ ಸಿನಿಮಾ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಸುಮಾರು ಶೇ.30 ರಿಂದ ಶೇ.35ರಷ್ಟು ಶೂಟಿಂಗ್ ಮುಗಿದಿದೆ. ಇನ್ನುಳಿದ ಭಾಗದ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ವೇಳೆ ಟಾಲಿವುಡ್ ಅಡ್ಡಾದಲ್ಲಿ ಪ್ರಭಾಸ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಅದೇನು ಅಂತ ತಿಳಿಯಲು ಮುಂದೆ ಓದಿ.
'KGF
2',
'ಸಲಾರ್',
'NTR
31'
ಈ
3
ಸಿನಿಮಾದ
ಪೋಸ್ಟರ್
ಸ್ಟೈಲ್
ಒಂದೇ:
'ಬಘೀರ'
ಬಿಟ್ಟಿದ್ಯಾಕೆ?

ಪ್ರಭಾಸ್ ಮೇಲೆ ಹೆಚ್ಚಿದ ಒತ್ತಡ
ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಭಾರತದ ಮೊದಲ ಪ್ಯಾನ್ ಇಂಡಿಯಾ ಸೂಪರ್‌ಸ್ಟಾರ್. 'ಬಾಹುಬಲಿ 2' ಸಿನಿಮಾ ಬಳಿಕ ಪ್ರಭಾಸ್ ಆಲ್ ಇಂಡಿಯಾ ಲೆವೆಲ್‌ನಲ್ಲಿ ಫೇಮಸ್ ಆಗಿದ್ದರು. ಆದರೆ, 'ಬಾಹುಬಲಿ' ಬಳಿಕ ಪ್ರಭಾಸ್ ಅಭಿನಯದ ಒಂದೇ ಒಂದು ಸಿನಿಮಾ ಗೆದ್ದಿಲ್ಲ. 'ಸಾಹೋ' ಹಾಗೂ 'ರಾಧೆ ಶ್ಯಾಮ್' ಎರಡೂ ಸಿನಿಮಾಗಳೂ ಸೋತು ಸುಣ್ಣವಾಗಿವೆ. ಈ ಮಧ್ಯೆ 'ಕೆಜಿಎಫ್ 2' ಮೆಗಾ ಹಿಟ್ ಆಗಿದೆ ಈ ಕಾರಣಕ್ಕೆ ಪ್ರಭಾಸ್ ಮುಂದಿನ ಸಿನಿಮಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಪ್ರಭಾಸ್ ಒತ್ತಡದಲ್ಲಿದ್ದಾರೆ ಎನ್ನಲಾಗಿದೆ.

ಪ್ರಶಾಂತ್ -ಪ್ರಭಾಸ್ ಕಾಂಬೋ
'ಸಲಾರ್' ಸಿನಿಮಾ ಆರಂಭ ಆಗುತ್ತಿದ್ದಂತೆ ಪ್ರಶಾಂತ್ ನೀಲ್ ಆಕ್ಟಿವ್ ಆಗಿದ್ದಾರೆ. ಇನ್ನೊಂದು ಕಡೆ ಪ್ರಭಾಸ್ ಕೂಡ ಶೂಟಿಂಗ್ ಸೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಶಾಂತ್ ನೀಲ್ ಮೇಕಿಂಗ್ ಸ್ಟೈಲ್ ಅರಿತುಕೊಂಡಿರುವ ಪ್ರಭಾಸ್ ಸ್ಪೆಷಲ್ ಕಾಲ್ ಶೀಟ್ ಕೊಟ್ಟಿದ್ದಾರಂತೆ. ಪ್ರಭಾಸ್ ಪ್ರತಿ ತಿಂಗಳಿ 'ಸಲಾರ್' ಸಿನಿಮಾಗಂತಲೇ 10 ರಿಂದ 15 ದಿನ ಕಾಲ್ ಶೀಟ್ ನೀಡುತ್ತಿದ್ದಾರಂತೆ. ಈ ವಿಷಯ ಟಾಲಿವುಡ್‌ನಲ್ಲಿ ಹೊಸ ಸಂಚಲವನ್ನೇ ಸೃಷ್ಟಿಸಿದೆ.

'ಸಲಾರ್' ಜೋಡಿ ಮೇಲೆ ಹೆಚ್ಚಿದ ನಿರೀಕ್ಷೆ
ಪ್ರಶಾಂತ್ ನೀಲ್ ಹಾಗೂ ಪ್ರಭಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಮೊದಲ ಸಿನಿಮಾವಿದು. ಪ್ರಶಾಂತ್ ನೀಲ್ ಯಶಸ್ಸಿನ ತುತ್ತ ತುದಿಯಲ್ಲಿದ್ದಾರೆ. ಇನ್ನೊಂದು ಕಡೆ ಪ್ರಭಾಸ್ ಸೋಲಿನ ಭೀತಿಯಲ್ಲಿದ್ದಾರೆ. ಈ ಕಾರಣಕ್ಕೆ ಇಬ್ಬರಿಗೂ ಈ ಸಿನಿಮಾ ಗೆಲ್ಲಲೇ ಬೇಕಿದೆ. ಅಲ್ಲದೆ ಪ್ರಭಾಸ್ ಡೈ ಹಾರ್ಡ್ ಫ್ಯಾನ್ಸ್ ಕೂಡ ಕುತೂಹಲದಿಂದ ಸಿನಿಮಾ ನೋಡಲು ಕಾದು ಕೂತಿದ್ದಾರೆ. ಈ ಕಾರಣಕ್ಕೆ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರೀಕ್ಷೆ ಹೆಚ್ಚಾಗಿದೆ. .

'ಸಲಾರ್' ಸಿನಿಮಾ ರಿಲೀಸ್ ಡೇಟ್ ಏನು?
'ಸಲಾರ್' ಸಿನಿಮಾ ಸ್ಪೀಡ್ ಹೆಚ್ಚಿಸಿಕೊಂಡಿದ್ದಾರೆ. ಸಿನಿಮಾ ಮೇಕಿಂಗ್ ಭರದಿಂದ ಆರಂಭ ಆಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಗೆಲ್ಲಲೇ ಬೇಕು. ಈಗ ಹೋಗುತ್ತಿರುವ ಸ್ಪೀಡ್ ಪ್ರಕಾರ, ಆಕ್ಟೋಬರ್ ವೇಳೆಗೆ ಸಿನಿಮಾ ಮುಗಿಸುವ ಪ್ಲ್ಯಾನ್ ಹಾಕಿಕೊಂಡಿದೆ ಚಿತ್ರತಂಡ. ಇದಾದ ಬಳಿಕ ಪೋಸ್ಟ್ ಪ್ರೊಡಕ್ಷನ್‌ಗೆ ಧುಮುಕಲಿದ್ದಾರೆ. ಈ ಕಾರಣಕ್ಕೆ ಈ ವರ್ಷ 'ಸಲಾರ್' ರಿಲೀಸ್ ಆಗೋದು ಅನುಮಾನ.