Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಲಾರ್: ಪ್ರಭಾಸ್‌ಗೆ ಜೊತೆಯಾಗಲಿದ್ದಾರೆ ಬಾಲಿವುಡ್ ನಟಿ!
ಕನ್ನಡಿಗ ಪ್ರಶಾಂತ್ ನೀಲ್ ನಿರ್ದೇಶಿಸಿ ಪ್ರಭಾಸ್ ನಟಿಸುತ್ತಿರುವ 'ಸಲಾರ್' ಸಿನಿಮಾ ಒಂದು ಹಂತದ ಚಿತ್ರೀಕರಣ ಮುಗಿಸಿ ಕೊರೊನಾ ಲಾಕ್‌ಡೌನ್ ಕಾರಣದಿಂದ ಸ್ಥಗಿತವಾಗಿದೆ.
'ಸಲಾರ್' ಸಿನಿಮಾದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂಬುದು ಹಳೆಯ ಸುದ್ದಿ. ಹೊಸ ಸುದ್ದಿಯೆಂದರೆ ಸಿನಿಮಾದಲ್ಲಿ ಶ್ರುತಿ ಹಾಸನ್ ಜೊತೆಗೆ ಮತ್ತೊಬ್ಬ ಸ್ಟಾರ್ ನಟಿಯೂ ಇರಲಿದ್ದಾರೆ.
'ಸಲಾರ್'ನಲ್ಲಿ ಪ್ರಭಾಸ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಕಾರಣ ಸಿನಿಮಾಕ್ಕೆ ಮತ್ತೊಬ್ಬ ನಾಯಕಿಯ ಅವಶ್ಯಕತೆ ಇದೆ. ಹಾಗಾಗಿ ಪ್ರಶಾಂತ್ ನೀಲ್ ಬಾಲಿವುಡ್‌ನಿಂದ ನಟಿಯನ್ನು ಕರೆಸುತ್ತಿದ್ದಾರೆಂದು ಸುದ್ದಿ.

ಪ್ರಭಾಸ್‌ಗೆ ಜೊತೆಯಾಗಲಿದ್ದಾರೆ ವಾಣಿ ಕಪೂರ್
ಹಿಂದಿಯ ನಟಿ ವಾಣಿ ಕಪೂರ್ ಅನ್ನು 'ಸಲಾರ್'ಗೆ ಪ್ರಶಾಂತ್ ನೀಲ್ ಆಯ್ಕೆ ಮಾಡಿದ್ದಾರೆ. ವಾಣಿ ಕಪೂರ್ ನಟಿಸಿರುವ ಹಿಂದಿಯ ಮೂರು, ತಮಿಳಿನ ಒಂದು ಸಿನಿಮಾ ಬಿಡುಗಡೆ ಆಗಿವೆ. ತಮ್ಮ ಉತ್ತಮ ನಟನೆ ಜೊತೆಗೆ ಮೈಮಾಟದಿಂದಲೂ ವಾಣಿ ಕಪೂರ್ ಜನಪ್ರಿಯ. ರಣ್ವೀರ್ ಸಿಂಗ್ ಜೊತೆ ನಟಿಸಿದ್ದ 'ಬೇಫಿಕ್ರೆ' ವಾಣಿಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ.

ಮೂರು ಸಿನಿಮಾಗಳು ಬಿಡುಗಡೆ ಆಗಬೇಕಿವೆ
ಪ್ರಭಾಸ್ ಜೊತೆಗೆ ಸಿನಿಮಾಕ್ಕಾಗಿ ವಾಣಿ ಕಪೂರ್ ಅನ್ನು ಭೇಟಿಯಾಗಿದ್ದು ಅವರೂ ಸಹ ಓಕೆ ಎಂದಿದ್ದಾರಂತೆ. ಪ್ರಸ್ತುತ ವಾಣಿ ಕಪೂರ್, 'ಬೆಲ್ ಬಾಟಂ', 'ಶಂಶೇರ', 'ಚಂಡೀಘಡ್ ಕರೇ ಆಶಿಕಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವುಗಳು ಇನ್ನೂ ಬಿಡುಗಡೆ ಆಗಿಲ್ಲ.

ಮಧು ಗುರುಸ್ವಾಮಿ ವಿಲನ್
'ಸಲಾರ್' ಸಿನಿಮಾದಲ್ಲಿ ಮಲಯಾಳಂನ ಮೋಹನ್‌ಲಾಲ್ ಸಹ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದರ ಜೊತೆಗೆ ಕನ್ನಡಿಗ ಮಧು ಗುರುಸ್ವಾಮಿ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಇನ್ನಷ್ಟು ಹಿರಿಯ ಕಲಾವಿದರು ಸಹ ಸಿನಿಮಾದಲ್ಲಿರಲಿದ್ದಾರೆ.

'ಆದಿಪುರುಷ್' ನಲ್ಲಿ ನಟಿಸುತ್ತಿರುವ ಪ್ರಭಾಸ್
'ಸಲಾರ್' ಸಿನಿಮಾದ ಜೊತೆಗೆ ಪ್ರಭಾಸ್ 'ಆದಿಪುರುಷ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಾಮಾಯಣ ಕತೆ ಆಧರಿಸಿದ ಈ ಸಿನಿಮಾದಲ್ಲಿ ಸೀತೆಯಾಗಿ ಕೃತಿ ಸೆನನ್, ಲಕ್ಷ್ಮಣನಾಗಿ ಸನ್ನಿ ಸಿಂಗ್, ರಾವಣನಾಗಿ ಸೈಫ್ ಅಲಿ ಖಾನ್, ಆಂಜನೇಯನಾಗಿ ದೆವದತ್ತ ನಗೆ ನಟಿಸಲಿದ್ದಾರೆ.