»   » ಕೇರಳ ಕುಟ್ಟಿ ಜತೆ ಪ್ರಭುದೇವ ಕಣ್ಣಾಮುಚ್ಚೆ ಕಾಡೆಗೂಡೆ

ಕೇರಳ ಕುಟ್ಟಿ ಜತೆ ಪ್ರಭುದೇವ ಕಣ್ಣಾಮುಚ್ಚೆ ಕಾಡೆಗೂಡೆ

By: ಉದಯರವಿ
Subscribe to Filmibeat Kannada
ನಟಿ ನಯನತಾರಾ ಜೊತೆಗಿನ ಫ್ರೆಂಡ್ ಶಿಪ್ ಬ್ರೇಕ್ ಆಫ್ ಆದ ಮೇಲೆ ಪ್ರಭುದೇವ ಕೊಂಚ ಗ್ಯಾಪ್ ತೆಗೆದುಕೊಂಡು ಹೊಸ ಹುಡುಗಿಯನ್ನು ಹುಡುಕಿಕೊಂಡಿದ್ದಾರೆ. ನಯನತಾರಾ ಹಾಗೂ ಪ್ರಭುದೇವ ಗೆಳೆತನ ಮದುವೆತನಕ ಹೋಗಿ ಕ್ಯಾನ್ಸಲ್ ಆಗಿದ್ದು ಗೊತ್ತೇ ಇದೆ.

ಆದರೆ ಇವರಿಬ್ಬರೂ ಯಾಕೆ ದೂರವಾದರು ಎಂಬ ಬಗ್ಗೆ ಇದುವರೆಗೂ ಸೂಕ್ತ ಕಾರಣ ಸಿಕ್ಕಿಲ್ಲ. ಈ ಬಗ್ಗೆ ನಯನತಾರ ಅದೊಂದು ಕೆಟ್ಟ ಕನಸು ಎನ್ನುತ್ತಿದ್ದಾರೆ ಅಷ್ಟೇ. ಅಷ್ಟು ಬಿಟ್ಟು ಆಕೆ ಇನ್ನೇನು ಹೇಳುತ್ತಿಲ್ಲ. ಆದರೆ ಗಾಸಿಪ್ ಗಳು ಮಾತ್ರ ಹರಿದಾಡಿದವು.

ಈಗ ಲೇಟೆಸ್ಟ್ ಸುದ್ದಿ ಏನೆಂದರೆ ಪ್ರಭುದೇವ ಹೊಸ ಗರ್ಲ್ ಫ್ರೆಂಡ್ ಹುಡುಕಿಕೊಂಡಿದ್ದಾರೆ. ಆಕೆ ಬೇರಾರು ಅಲ್ಲ ಕೇರಳ ಕುಟ್ಟಿ ಈಗಷ್ಟೇ ಬಾಲಿವುಡ್ ನಲ್ಲಿ ಅಂಬೆಗಾಲಿಡುತ್ತಿರುವ ನಟಿ ಅಸಿನ್. ಇಬ್ಬರೂ ಕಣ್ಣಾಮುಚ್ಚಾಲೆ, ಐಸ್ ಪೈಸ್, ಲಗೋರಿ, ಚಿನ್ನಿದಾಂಡು ಎಲ್ಲಾ ಆಟಗಳನ್ನು ಆಡುತ್ತಿದ್ದಾರೆ ಎಂದು ಬಾಲಿವುಡ್ ಮಾತನಾಡಿಕೊಳ್ಳುತ್ತಿದೆ.

ಇತ್ತೀಚೆಗೆ ಇವರಿಬ್ಬರೂ ಕೆನಡಾಗೆ ಗುಟ್ಟಾಗಿ ಹೋಗಿಬಂದಿದ್ದಾರಂತೆ. ಅಲ್ಲಿನ ರಮಣೀಯ ತಾಣಗಳಲ್ಲಿ ಇಬ್ಬರೂ ಕೈಕೈ ಹಿಡಿದು ಓಡಾಡಿದ ಗುಟ್ಟು ರಟ್ಟಾಗಿದೆ. ಅಸಿನ್ ಕೈಯಲ್ಲಿ ಸದ್ಯಕ್ಕೆ ಯಾವುದೇ ಬಾಲಿವುಡ್ ಚಿತ್ರಗಳಿಲ್ಲ. ಹಳೆಗಂಡನ ಪಾದವೇ ಗತಿ ಎಂಬಂತೆ ಮತ್ತೆ ದಕ್ಷಿಣಕ್ಕೆ ಬಂದಿದ್ದಾರೆ.

ಇನ್ನೊಂದು ಕಡೆ ಬಾಲಿವುಡ್ ನಲ್ಲಿ ಪ್ರಭುದೇವ ಬಿಜಿಯಾಗಿದ್ದಾರೆ. ಸೌತ್ ನಲ್ಲೂ ಅಷ್ಟೇ ನಾರ್ತ್ ನಲ್ಲೂ ಅಷ್ಟೇ ಪ್ರಭು ಬಿಜಿ. ದಕ್ಷಿಣದಲ್ಲಿ ಹಿಟ್ ಆದ ಚಿತ್ರಗಳನ್ನು ಬಾಲಿವುಡ್ ನಲ್ಲಿ ರೀಮೇಕ್ ಮಾಡಿ ಪ್ರಭುದೇವ ಗೆದ್ದಿದ್ದಾರೆ. ಈಗ ಪ್ರಭುಗೆ ಹತ್ತಿರವಾಗಿ ಬಾಲಿವುಡ್ ನಲ್ಲಿ ಚಾನ್ಸ್ ಗಿಟ್ಟಿಸುವ ಪ್ಲಾನ್ ಇದು ಎಂದೂ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

English summary
The latest buzz making rounds is that Prabhudeva is in love with Malayalam girl Asin.As per the sources they are moving close together and both have gone to Canada together and are being spotted there at many places.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada