»   » ಮುಂಬೈ ಡಾನ್ಸರ್ ಜತೆ ಪ್ರಭುದೇವ ಎರಡನೇ ಮದುವೆ?

ಮುಂಬೈ ಡಾನ್ಸರ್ ಜತೆ ಪ್ರಭುದೇವ ಎರಡನೇ ಮದುವೆ?

Posted By: ರವಿಕಿಶೋರ್
Subscribe to Filmibeat Kannada

ಜನಪ್ರಿಯ ನಟ, ನೃತ್ಯ ನಿರ್ದೇಶಕ ಹಾಗೂ ನಿರ್ದೇಶಕ ಪ್ರಭುದೇವ ಅವರು ಮದುವೆಯಾಗಿದ್ದಾರಾ? ಇಲ್ಲವೇ? ಇಷ್ಟು ದಿನ ಅವರು ಒಂಟಿಯಾಗಿಯೇ ಬಾಳ್ವೆ ನಡೆಸುತ್ತಿದ್ದರೆ? ಎಂಬ ಪ್ರಶ್ನೆಗಳು ಮತ್ತೊಮ್ಮೆ ಉದ್ಭವಿಸಿವೆ. ಏಕೆಂದರೆ ಅವರು ಎರಡನೇ ಮದುವೆಗೆ ಸಿದ್ಧರಾಗುತ್ತಿದ್ದಾರೆ ಎನ್ನುತ್ತವೆ ಮೂಲಗಳು.

ಮುಂಬೈನ ಮೂಲದ ಡಾನ್ಸರ್ ಜೊತೆ ಅವರ ಪ್ರೇಮ ವ್ಯವಹಾರ ಬಲು ಜೋರಾಗಿ ನಡೆಯುತ್ತಿದೆಯಂತೆ. ಶೀಘ್ರದಲ್ಲೇ ಇಬ್ಬರೂ ಹಸೆಮಣೆ ಮೇಲೆ ಕೂರಲಿದ್ದಾರೆ ಎನ್ನಲಾಗಿದೆ. ಪ್ರಭುದೇವ ಅವರ ಮೊದಲ ವಿವಾಹ ತನ್ನೊಂದಿಗೆ ಕೆಲ ಸಿನಿಮಾಗಳಲ್ಲಿ ಕೆಲಸ ಮಾಡಿದ ರಾಮಲತಾ ಜೊತೆಗೆ ನಡೆಯಿತು.

Prabhu Deva love with Bollywood choreographer

ಮೊದಲ ವಿವಾಹಕ್ಕೆ ಸಾಕ್ಷಿಯಾಗಿ ಇಬ್ಬರು ಮಕ್ಕಳು ಇದ್ದಾರೆ. ಬಳಿಕ ನಟಿ ನಯನತಾರಾ ಜೊತೆಗೆ ಪ್ರೇಮಲೋಕ ಪಾರ್ಟ್ ಟೂ ಶುರುವಾದ ಬಳಿಕ ಮೊದಲ ಪತ್ನಿಗೆ ವಿಚ್ಛೇದನ ನೀಡಿದರು. ಪ್ರಭು ಮತ್ತು ನಯನಿ ಅವರ ಪ್ರೀತಿ ಪ್ರೇಮ ಪ್ರಣಯ ಮದುವೆವರೆಗೂ ಬಂದಿತ್ತು. ಆದರೆ ಕಾರಣಾಂತರಗಳಿಂದ ಅವರಿಬ್ಬರೂ ದೂರವಾದರು.

ಆಗಿನಿಂದಲೂ ಪ್ರಭುದೇವ ಅವರು ಒಂಟಿಯಾಗಿಯೇ ಇದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ತೊಡಗಿಸಿಕೊಂಡು ತುಂಬಾ ಬಿಜಿಯಾದರು. ಇದೀಗ ಅವರ ಎರಡನೇ ಮದುವೆ ಬಗ್ಗೆ ಗುಸುಗುಸು ಸುದ್ದಿ ಕೇಳಿಬಂದಿದೆ. ಒಂದು ಹಂತದಲ್ಲಿ ತೀರಾ ಬೇಸತ್ತು ಸ್ತ್ರೀಯರ ಮೇಲೆ ವಿರಕ್ತಿ ಬೆಳೆಸಿಕೊಂಡಿದ್ದರು.

ಏತನ್ಮಧ್ಯೆ ಮುಂಬೈನ ಡಾನ್ಸರ್ ಒಬ್ಬರ ಪರಿಚಯವಾಗಿದ್ದು ಶೀಘ್ರದಲ್ಲೇ ಅವರು ಮದುವೆಯೂ ಆಗಲಿದ್ದಾರಂತೆ. ಅವರು ಯಾರು ಏನು ಎಂಬುದು ಸದ್ಯಕ್ಕೆ ಬಹಿರಂಗವಾಗಿಲ್ಲ. ಅಜಯ್ ದೇವಗನ್ ಮುಖ್ಯಭೂಮಿಕೆಯಲ್ಲಿರುವ ಹಿಂದಿ ಚಿತ್ರ 'ಆಕ್ಷನ್ ಜಾಕ್ಸನ್'ನಲ್ಲಿ ಪ್ರಭುದೇವ ಬಿಜಿಯಾಗಿದ್ದಾರೆ.

English summary
Film Nagar buzz is that, Bollywood director and choreographer Prabhu Deva love with bollywood choreographer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada