»   » ಪ್ರಿಯಕರನ ಬಗ್ಗೆ ಬಾಯ್ಬಿಟ್ಟ ನಟಿ ಪ್ರಿಯಾಮಣಿ

ಪ್ರಿಯಕರನ ಬಗ್ಗೆ ಬಾಯ್ಬಿಟ್ಟ ನಟಿ ಪ್ರಿಯಾಮಣಿ

By: ರವಿಕಿಶೋರ್
Subscribe to Filmibeat Kannada

ಸದ್ಯಕ್ಕೆ ಕನ್ನಡದ 'ಅಂಬರೀಷ' ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರಿಯಾಮಣಿ ಇದೇ ಮೊದಲ ಬಾರಿಗೆ ತಮ್ಮ ಬಾಯ್ ಫ್ರೆಂಡ್ ಬಗ್ಗೆ ಬಾಯ್ಬಿಟ್ಟಿದ್ದಾರೆ. ದಕ್ಷಿಣದ ಅಷ್ಟೂ ಭಾಷೆಯ ಚಿತ್ರಗಳಲ್ಲಿ ಒಂದು ಕೈ ನೋಡಿರುವ ಪ್ರಿಯಾಮಣಿ ತನ್ನ ವೈಯಕ್ತಿಕ ವಿಚಾರಗಳ ಬಗ್ಗೆ ಸದಾ ಮೌನ. ಆದರೆ ಇದೀಗ ತಾನು ಮದುವೆಯಾಗುತ್ತಿರುವ ಹುಡುಗನ ಬಗ್ಗೆ ವಿವರ ನೀಡಿದ್ದಾರೆ.

ಕಳೆದ ಎರಡು ವರ್ಷಗಳಿಂದ ಈ ಹುಡುಗನ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ. ಆದರೆ ಈ ರಹಸ್ಯ ಮಾತ್ರ ಎಲ್ಲೂ ಬಹಿರಂಗವಾಗದಂತೆ ಅವರು ಜಾಗ್ರತೆ ವಹಿಸಿದ್ದರು. ಇದೀಗ ಅವರೇ ಸುದ್ದಿಯನ್ನು ಲೀಕ್ ಮಾಡಿ ತನ್ನ ಬಾಯ್ ಫ್ರೆಂಡ್ ಬಗ್ಗೆ ಹೇಳಿದ್ದಾರೆ.

ಇಪ್ಪತ್ತೊಂಬ್ಬರ ಹರೆಯದ ಪ್ರಿಯಾಮಣಿ ಕಳೆದ ಎರಡು ವರ್ಷಗಳಿಂದ ಲವ್ ಮಾಡುತ್ತಿರುವ ಹುಡುಗ ಯಾರು ಎಂಬ ಬಗ್ಗೆ ಮಾತ್ರ ಹೇಳಿಲ್ಲ. ಸಮಯ ಬಂದಾಗ ಆ ಬಗ್ಗೆ ಹೇಳುತ್ತೇನೆ ಎಂದಿರುವ ಪ್ರಿಯಾ, ಆ ಹುಡುಗ ಸಿಕ್ಕಿರುವುದು ನನ್ನ ಅದೃಷ್ಟ.

ನನ್ನ ಫೀಲಿಂಗ್ಸ್ ತುಂಬಾ ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಬುದ್ಧಿವಂತ. ಆತ ಚಿತ್ರೋದ್ಯಮಕ್ಕೆ ಸಂಬಂಧಿಸಿದವನೇ? ಅಲ್ಲವೆ ಎಂಬ ಬಗ್ಗೆ ಸ್ಪಷ್ಟವಾದ ವಿವರಗಳನ್ನು ನೀಡಿದ್ದಾರೆ. ವಿವರಗಳು ಸ್ಲೈಡ್ ನಲ್ಲಿ...

ಪ್ರಿಯಕರನ ಬಗ್ಗೆ ಪ್ರಿಯಾಮಣಿ ಮಾತು

ತನ್ನ ಪ್ರಿಯಕರನ ಬಗ್ಗೆ ಪ್ರಿಯಾಮಣಿ ವಿವರಗಳನ್ನು ನೀಡುತ್ತಾ...ಅವರು ಚಿತ್ರೋದ್ಯಮಕ್ಕೆ ಸಂಬಂಧಿಸಿದವರಲ್ಲ. ಈಗಲೇ ತಾವು ಮದುವೆಯಾಗಬೇಕೆಂಬ ಉದ್ದೇಶವಿಲ್ಲ. ಮದುವೆಗೆ ಇನ್ನೂ ಸಾಕಷ್ಟು ಸಮಯವಿದೆ ಎಂದಿದ್ದಾರೆ.

ಇನ್ನು ಎರಡು ವರ್ಷಗಳ ಕಾಲ ಮದುವೆಯಿಲ್ಲ

ಸದ್ಯಕ್ಕೆ ನನ್ನ ದೃಷ್ಟಿ ವೃತ್ತಿಬದುಕಿನ ಮೇಲಿದೆ. ಇನ್ನು ಎರಡು ವರ್ಷಗಳ ಕಾಲ ಮದುವೆಯಾಗಲ್ಲ. ಆ ಬಳಿಕಷ್ಟೇ ಸಪ್ತಪದಿ ಎಂದು ಹೇಳಿದ್ದಾರೆ.

ಗ್ಲಾಮರ್ ಡಾಲ್ ಎನ್ನಿಸಿಕೊಳ್ಳುವ ಉದ್ದೇಶವಿಲ್ಲ

ವೃತ್ತಿ ಬದುಕಿನಲ್ಲಿ ಇನ್ನೂ ಮಾಡಬೇಕಾಗಿರುವ ಪಾತ್ರಗಳು ಸಾಕಷ್ಟಿವೆ. ಕೇವಲ ಗ್ಲಾಮರ್ ಡಾಲ್ ಎನ್ನಿಸಿಕೊಳ್ಳುವ ಉದ್ದೇಶ ತಮಗಿಲ್ಲ. ಎಲ್ಲ ರೀತಿಯ ಪಾತ್ರಗಳನ್ನೂ ಮಾಡುತ್ತಿದ್ದೇನೆ ಎಂದಿದ್ದಾರೆ ಪ್ರಿಯಾಮಣಿ.

ಸವಾಲೊಡ್ಡುವ ಪಾತ್ರಗಳಲ್ಲಿ ಹೆಚ್ಚು ಮಾಡ್ತೇನೆ

ಪಾತ್ರ ಅದು ಯಾವುದೇ ಆಗಿರಲಿ ಸವಾಲೊಡ್ಡುವ ಪಾತ್ರಗಳನ್ನೇ ಹೆಚ್ಚಾಗಿ ಮಾಡಬೇಕೆಂದಿದ್ದೇನೆ. ಅತ್ಯುತ್ತಮ ನಟಿ ಎಂದು ಗುರಿತಿಸಿಕೊಳ್ಳಬೇಕೆಂಬುದೇ ತಮ್ಮ ಗುರಿ ಎನ್ನುತ್ತಾರೆ.

ತೆಲುಗು, ತಮಿಳಿನಲ್ಲಿ ಸದ್ಯಕ್ಕೆ ಖಾಲಿ ಕೈ

ಸದ್ಯಕ್ಕೆ ಕನ್ನಡದಲ್ಲಿ ಅಭಿನಯಿಸುತ್ತಿದ್ದರೂ ತೆಲುಗು, ತಮಿಳಿನಲ್ಲಿ ಮಾತ್ರ ಪ್ರಿಯಾಮಣಿಗೆ ಅವಕಾಶಗಳಿಲ್ಲದಂತಾಗಿದೆ. ತಮಿಳಿನಲ್ಲಿ ಒಂದೇ ಒಂದು ಚಿತ್ರವೂ ಪ್ರಿಯಾ ಕೈಯಲಿಲ್ಲ. ಮಲಯಾಳಂನಲ್ಲಿ ಮಾತ್ರ ಒಂದೆರಡು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

English summary
Priyamani is set to break millions of her fans' hearts, as there is a special news from her side. Well, the one of the sexiest actress of South has found her dream boy and the actress herself has confirmed that she is dating someone.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada