For Quick Alerts
  ALLOW NOTIFICATIONS  
  For Daily Alerts

  ಶಾರುಖ್ ಖಾನ್ ಜೊತೆ ನಟಿಸಲಿದ್ದಾರೆ ಕನ್ನಡದ ನಟಿ

  By ಫಿಲ್ಮೀಬೀಟ್ ಡೆಸ್ಕ್‌
  |

  ನಟ ಶಾರುಖ್ ಖಾನ್, ತಮಿಳಿನ ಅಟ್ಲಿ ನಿರ್ದೇಶನದ ಹೊಸ ಸಿನಿಮಾದಲ್ಲಿ ನಟಿಸುತ್ತಿರುವುದು ಹಳೆಯ ಸುದ್ದಿ.

  ಈ ಸಿನಿಮಾಕ್ಕೆ ನಾಯಕಿಯಾಗಿ ನಯನತಾರಾ ಆಯ್ಕೆ ಆಗಿದ್ದಾರೆ. ನಯನತಾರಾಗೆ ಇದು ಮೊದಲ ಹಿಂದಿ ಸಿನಿಮಾ. ಮೊದಲ ಹಿಂದಿ ಸಿನಿಮಾದಲ್ಲಿಯೇ ಶಾರುಖ್ ಖಾನ್ ಜೊತೆ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ ನಯನತಾರಾ.

  ಇದೀಗ ಬರುತ್ತಿರುವ ಹೊಸ ವಿಷಯವೆಂದರೆ ಶಾರುಖ್-ಅಟ್ಲಿಯ ಸಿನಿಮಾದಲ್ಲಿ ಕನ್ನಡ ಮೂಲದ ನಟಿಯೊಬ್ಬರು ನಟಿಸಲಿದ್ದಾರೆ.

  ಹೌದು, ಕನ್ನಡತಿ ನಟಿ ಪ್ರಿಯಾಮಣಿ ಶಾರುಖ್-ಅಟ್ಲಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದಾರೆ. ಪ್ರಿಯಾಮಣಿಗೆ ಶಾರುಖ್ ಖಾನ್ ಜೊತೆ ನಟನೆ ಹೊಸದೇನೂ ಅಲ್ಲ. ಈ ಹಿಂದೆ ಶಾರುಖ್ ಖಾನ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ 'ಚೆನ್ನೈ ಎಕ್ಸ್‌ಪ್ರೆಸ್'ನಲ್ಲಿ ಶಾರುಖ್ ವಿಶೇಷ ಹಾಡೊಂದರಲ್ಲಿ ಹೆಜ್ಜೆ ಹಾಕಿದ್ದರು ಪ್ರಿಯಾಮಣಿ.

  ಸಿನಿಮಾದಲ್ಲಿ ಪ್ರಿಯಾಮಣಿ ಅವರದ್ದು ಬಹಳ ಪ್ರಮುಖ ಪಾತ್ರವಾಗಿದ್ದು ಇಡೀಯ ಸಿನಿಮಾವನ್ನು ಪ್ರಿಯಾಮಣಿಯ ಪಾತ್ರದ ದೃಷ್ಟಿಕೋನದಿಂದಲೇ ತೋರಿಸಲಾಗುತ್ತದೆ. ಸಿನಿಮಾಕ್ಕೆ ಪ್ರಿಯಾಮಣಿ ನರೇಟರ್ ಆಗಿದ್ದು, ಜೊತೆಗೆ ಅತ್ಯಂತ ಪ್ರಮುಖ ಪಾತ್ರವೂ ಅವರದ್ದಾಗಿದೆ ಎಂದು ಸಿನಿಮಾಕ್ಕೆ ಸಂಬಂಧಿಸಿದವರು ಪಿಂಕ್‌ವಿಲ್ಲಾಗೆ ಮಾಹಿತಿ ನೀಡಿದ್ದಾರೆ.

  ಶಾರುಖ್ ಖಾನ್ ಹಾಗೂ ನಯನತಾರಾ ಪುಣೆಯಲ್ಲಿ ಚಿತ್ರೀಕರಣದ ಮೊದಲ ಶೆಡ್ಯೂಲ್‌ ಪ್ರಾರಂಭಿಸಲಿದ್ದು, ಕೆಲವು ದಿನಗಳ ಬಳಿಕ ಪ್ರಿಯಾಮಣಿ ಸಹ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಮೂಲಗಳ ಪ್ರಕಾರ, ಅಟ್ಲಿ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಾರುಖ್ ಖಾನ್‌ರದ್ದು ದ್ವಿಪಾತ್ರವಾಗಿದ್ದು ಒಂದು ಪಾತ್ರಕ್ಕೆ ನಾಯಕಿ ನಯನತಾರಾ ಆದರೆ ಮತ್ತೊಂದು ಪಾತ್ರಕ್ಕೆ ನಾಯಕಿ ಪ್ರಿಯಾಮಣಿ ಎನ್ನಲಾಗುತ್ತಿದೆ.

  ನಯನತಾರಾ, ಪ್ರಿಯಾಮಣಿ ಮಾತ್ರವೇ ಅಲ್ಲದೆ ಇನ್ನೂ ಕೆಲವು ಬಹಳ ಪ್ರಮುಖ ನಟರು ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ದಕ್ಷಿಣ ಭಾರತದ ಹಾಗೂ ಬಾಲಿವುಡ್‌ನ ಎರಡೂ ಚಿತ್ರರಂಗಗಳ ನಟರು ಇರಲಿದ್ದಾರೆ. ಸಿನಿಮಾದ ಚಿತ್ರೀಕರಣ ಶೀಘ್ರದಲ್ಲಿಯೇ ಆರಂಭವಾಗುತ್ತಿದ್ದು ಏಳು ತಿಂಗಳ ಅವಧಿಯಲ್ಲಿ ಸಿನಿಮಾವನ್ನು ಮುಗಿಸುವ ಗುರಿಯನ್ನು ಅಟ್ಲಿ ಹಾಕಿಕೊಂಡಿದ್ದಾರೆ.

  ಶಾರುಖ್ ಖಾನ್ ಪ್ರಸ್ತುತ 'ಪಠಾಣ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶಿಸುತ್ತಿರುವ ಈ ಸಿನಿಮಾದಲ್ಲಿ ಶಾರುಖ್ ಜೊತೆ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಸಹ ನಟಿಸುತ್ತಿದ್ದಾರೆ. ಗೂಢಾಚಾರಿಯ ಕುರಿತಾದ ಕತೆ ಹೊಂದಿರುವ ಸಿನಿಮಾ ಇದಾಗಿದ್ದು, ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಹೃತಿಕ್ ರೋಷನ್ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಇನ್ನು ನಟಿ ಪ್ರಿಯಾಮಣಿ ಕೈಲಿ ಪ್ರಸ್ತುತ ಬರೋಬ್ಬರಿ 12 ಸಿನಿಮಾಗಳಿವೆ. ಪ್ರಿಯಾಮಣಿ ನಟಿಸಿದ್ದ 'ನಾರಪ್ಪ' ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ತೆಲುಗಿನ 'ವಿರಾಟಪರ್ವಂ', ತಮಿಳಿನ 'ತಲೈವಿ' ಬಿಡುಗಡೆ ಆಗಬೇಕಿದೆ. ಹಿಂದಿಯ 'ಮೈದಾನ್' ಸಹ ಬಿಡುಗಡೆಗೆ ರೆಡಿಯಾಗಿದೆ. ಇವುಗಳ ಜೊತೆಗೆ ತಮಿಳಿನ 'ಸೈನೈಡ್', ಕನ್ನಡದ 'ಖೈಮರಾ', 'ವ್ಯೂಹ', ಮಲಯಾಳಂನ 'ಪಪ್ಪಾ', 'ಸಿರಿ ವೆನ್ನೆಲ', 'ಅಂಗುಲಿಕ', 'ಸೈಲೆಂಟ್ ರೇಡಿಯೊ', 'ಕಾದಲ್ ಮುದಿಚು' ಸಿನಿಮಾಗಳಲ್ಲಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇವುಗಳೆಲ್ಲದರ ಜೊತೆಗೆ 'ದಿ ಫ್ಯಾಮಿಲಿ ಮ್ಯಾನ್ 3' ವೆಬ್ ಸರಣಿಯಲ್ಲಿಯೂ ಪ್ರಿಯಾಮಣಿ ನಟಿಸುತ್ತಿದ್ದಾರೆ.

  English summary
  Actress Priyamani to act in Sharukh Khan's new movie which is going to directed by Atlee.
  Saturday, September 4, 2021, 9:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X