For Quick Alerts
  ALLOW NOTIFICATIONS  
  For Daily Alerts

  ಉಪೇಂದ್ರ ಜೊತೆ ರಾಧಿಕಾನಾ ಇಲ್ಲ ಪ್ರಿಯಾಮಣಿನಾ?

  By Harshitha
  |

  'ಉಪ್ಪಿ-2' ಚಿತ್ರದ ನಂತರ ರಿಯಲ್ ಸ್ಟಾರ್ ಉಪೇಂದ್ರ 'ಕಲ್ಪನಾ-2' ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಕಲ್ಪನಾ-2', 'ಕಲ್ಪನಾ' ಚಿತ್ರದ ಮುಂದುವರಿದ ಭಾಗವಾಗಿದ್ದು, ತೆಲುಗಿನ 'ಕಾಂಚನಾ-2' ಚಿತ್ರದ ರೀಮೇಕ್.

  'ಕಲ್ಪನಾ-2' ಚಿತ್ರಕ್ಕೆ ಉಪೇಂದ್ರ ಜೈ ಅಂದಿದ್ರೂ, ನಾಯಕಿ ಇನ್ನೂ ಫಿಕ್ಸ್ ಆಗಿಲ್ಲ. 'ಕಲ್ಪನಾ-2' ಚಿತ್ರದಲ್ಲಿ ಉಪೇಂದ್ರ ಜೊತೆ ರಾಧಿಕಾ ಪಂಡಿತ್ ನಾಯಕಿಯಾಗಿ ಆಯ್ಕೆ ಆಗಲಿದ್ದಾರೆ ಅಂತ ಹೇಳಲಾಗಿತ್ತು.

  ಆದ್ರೆ, ರಾಧಿಕಾ ಪಂಡಿತ್ ಗೆ ಡೇಟ್ಸ್ ಪ್ರಾಬ್ಲಂ ಇದೆ. ಹೀಗಾಗಿ 'ಕಲ್ಪನಾ-2' ಚಿತ್ರತಂಡ ನಟಿ ಪ್ರಿಯಾಮಣಿ ಜೊತೆ ಮಾತುಕತೆ ನಡೆಸಿದ್ಯಂತೆ. ತೆಲುಗಿನಲ್ಲಿ 'ಕಾಂಚನಾ' ಚಿತ್ರ ವೀಕ್ಷಿಸಿರುವ ಪ್ರಿಯಾಮಣಿ, 'ಕಲ್ಪನಾ-2' ಚಿತ್ರದ ಬಗ್ಗೆ ಆಸಕ್ತಿ ತೋರಿಸಿದ್ದಾರಂತೆ. [ಉಪ್ಪಿ ಬೇಕಾ, ಯಶ್ ಸಾಕಾ.? ರಾಧಿಕಾ ಪಂಡಿತ್ ತಲೆಯಲ್ಲಿ ಹುಳ]

  ಸ್ಯಾಂಡಲ್ ವುಡ್ ಜೊತೆಗೆ ಕಾಲಿವುಡ್ ನಲ್ಲೂ ಬಿಜಿಯಾಗಿರುವ ನಟಿ ಪ್ರಿಯಾಮಣಿ 'ಕಲ್ಪನಾ-2' ಚಿತ್ರಕ್ಕೆ ಸೈ ಅನ್ನುತ್ತಾರಾ...ಗೊತ್ತಿಲ್ಲ. ಡೇಟ್ಸ್ ಹೊಂದಾಣಿಕೆ ಮಾಡಿಕೊಂಡು ರಾಧಿಕಾ ಪಂಡಿತ್ 'ಕಲ್ಪನಾ-2'ಗೆ ಜೈ ಅನ್ನುತ್ತಾರಾ ಅನ್ನೋದನ್ನ ಕಾದು ನೋಡ್ಬೇಕು.

  English summary
  According to the grapevine, The makers of 'Kalpana-2' have approached Actress Priyamani to pair opposite Upendra in 'Kalpana-2'.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X