»   » ಜಸ್ಟ್ ಮಾತ್ ಮಾತಲ್ಲಿ ನಿರ್ಮಾಪಕ ಆಕ್ಷನ್ ಕಟ್!

ಜಸ್ಟ್ ಮಾತ್ ಮಾತಲ್ಲಿ ನಿರ್ಮಾಪಕ ಆಕ್ಷನ್ ಕಟ್!

Posted By:
Subscribe to Filmibeat Kannada
Shankre Gowda
ಚಿತ್ರೋದ್ಯಮವೆಂಬ ಬಣ್ಣದ ಲೋಕದಲ್ಲಿ ನಿರಂತರವಾಗಿ ಬದಲಾವಣೆ ಸಹಜವಾದರೂ ಕೆಲವೊಮ್ಮೆ ಆಶ್ಚರ್ಯಕರ ಸಂಗತಿ ಹೊರಬೀಳುತ್ತದೆ. ಈಗೊಂದು ಅಂತಹ ವಿಷಯ ಗಾಂಧಿನಗರದ ಗಲ್ಲಿಯಿಂದ ಹೊರಬಿದ್ದಿದೆ. ಅದು, ಸದ್ಯ ನಿರ್ಮಾಪಕರ ಸೀಟಿನಲ್ಲಿ ಕುಳಿತಿರುವ ಶಂಕರೇಗೌಡ ಸದ್ಯದಲ್ಲೇ ನಿರ್ದೇಶಕ ಆಗಲಿದ್ದಾರೆ ಎನ್ನುವ ಮಾಹಿತಿ.

ಹೌದು, ಬಂದಿರುವ ವರ್ತಮಾನದ ಪ್ರಕಾರ, ಬರುವ ತಿಂಗಳು, ಅಂದರೆ 15 ಆಗಸ್ಟ್ 2012 ರಂದು ಅವರು ತಮ್ಮ ನಿರ್ದೇಶನದ ಹೊಸ ಚಿತ್ರವನ್ನು ಘೋಷಿಸಲಿದ್ದಾರೆ. ಇತ್ತೀಚಿಗಷ್ಟೇ ಅವರ ನಿರ್ಮಾಣದ, ಚಿರಂಜೀವಿ ಸರ್ಜಾ-ನಿಕೇಶಾ ಪಟೇಲ್ ಜೋಡಿ ಹಾಗೂ ಸುದೀಪ್-ಸಮೀರಾ ರೆಡ್ಡಿ ಪ್ರಮುಖ ಪಾತ್ರದಲ್ಲಿರುವ 'ವರದನಾಯಕ' ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಚಿತ್ರ ಸದ್ಯದಲ್ಲೇ ತೆರೆಕಾಣಲಿದೆ.

ಶಂಕರೇಗೌಡ್ರು ಹಾಗೂ ಸುದೀಪ್ ಜೋಡಿ ಸ್ಯಾಂಡಲ್ ವುಡ್ ನಲ್ಲಿ ಬಹಳ ಪ್ರಖ್ಯಾತಿ ಹೊಂದಿದೆ. ಅದಕ್ಕೆ ಸರಿಯಾದ ಕಾರಣವೂ ಇದೆ. ಈ ಮೊದಲು ಸುದೀಪ್ ನಾಯಕತ್ವದ 'ಜಸ್ಟ್ ಮಾತ್ ಮಾತಲ್ಲಿ' ಹಾಗೂ ಸಿಂಗಂ ರೀಮೇಕ್ 'ಕೆಂಪೇಗೌಡ' ಚಿತ್ರಗಳನ್ನು ನಿರ್ಮಿಸಿದ್ದವರು ಈ ಶಂಕರೇಗೌಡ. ಅದರಲ್ಲಿ ಜಸ್ಟ್ ಮಾತ್ ಮಾತಲ್ಲಿ ಸೋತು ಅವರಿಗೆ ನಷ್ಟ ಉಂಡಮಾಡಿದ್ದರೆ ಕೆಂಪೇಗೌಡ ಚಿತ್ರ ಗೆದ್ದು ಲಾಭ ತಂದುಕೊಟ್ಟಿತ್ತು.

ಜಸ್ಟ್ ಮಾತ್ ಮಾತಲ್ಲಿ ಚಿತ್ರ ತಮಿಳಿಗೆ ಡಬ್ ಆಗಿ ಸದ್ಯವೇ ಬಿಡುಗಡೆಯಾಗಲಿದೆ. ಈಗಷ್ಟೇ ಚಿತ್ರೀಕರಣ ಮುಗಿಸಿರುವ ವರದನಾಯಕದಲ್ಲಿ ಕೂಡ ಸುದೀಪ್ ಇದ್ದಾರೆ. ಇನ್ನು, ಸದ್ಯಲ್ಲೇ ಅವರು ನಿರ್ದೇಶಿಸಲಿರುವ ಚಿತ್ರದಲ್ಲಿಯೂ ಸುದೀಪ್ ನಟಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಒಟ್ಟಿನಲ್ಲಿ, ಇಷ್ಟು ದಿನ ನಿರ್ಮಾಪಕರಾಗಿದ್ದ ಶಂಕರೇಗೌಡ, ಕೆಲವೇ ದಿನಗಳಲ್ಲಿ ನಿರ್ದೇಶಕನ ಸೀಟ್ ಅಲಂಕರಿಸಲಿದ್ದಾರೆ.

ಚಿತ್ರದಲ್ಲಿ ದೊಡ್ಡ ದೊಡ್ಡ ಸ್ಟಾರ್ ಗಳು ನಟಿಸಲಿದ್ದಾರೆ ಎಂದಿದ್ದಾರೆ ಶಂಕರೇ ಗೌಡ. ಆದರೆ ಆ ಸ್ಟಾರ್ ಗಳು ಯಾರು, ಸುದೀಪ್ ಅದರಲ್ಲೂ ಇರುತ್ತಾರಾ, ನಾಯಕಿ ಯಾರು, ಕಥೆ ಏನು ಎಂಬುದೆಲ್ಲವೂ ಸದ್ಯಕ್ಕೆ ಸಸ್ಪೆನ್ಸ್! ಉತ್ತರಕ್ಕೆ ಆಗಸ್ಟ್ 15ರವರೆಗೆ ಕಾಯಲೇಬೇಕು. (ಒನ್ ಇಂಡಿಯಾ ಕನ್ನಡ)

English summary
Producer Shankre Gowda to direct a Kannada movie on August 15th 2012 with big stars acting in it. Before this, with a few failures like ‘Yajna, Just Math Mathalli’ and gained a solid ground from Kichcha Sudeep in ‘Singam’ remake ‘Kempe Gowda’. His Recent film ‘Varadanayaka', Telugu ‘Lakshyam’ remake finished.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada