»   » ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

ಪುನೀತ್ 'ಮನೆ'ಯಿಂದ ಹೊರಬಿತ್ತು 'ಬಿಗ್' ಸಿನಿಮಾ ಸುದ್ದಿ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರದಿಂದ ಚಿತ್ರಕ್ಕೆ ಹೊಸತನ ಬಯಸುವ ನಟ. ನಟನೆ, ಗಾಯನ ಜೊತೆಗೆ ನಿರ್ಮಾಣದಲ್ಲಿ ತೊಡಗಿಕೊಂಡಿರುವ ಅಪ್ಪು ಈಗ ಮತ್ತೊಂದು ನಿರ್ಧಾರ ತೆಗೆದುಕೊಂಡಿದ್ದಾರೆ.

ಹೌದು, ಪುನೀತ್ ರಾಜ್ ಕುಮಾರ್ ಕಣ್ಣು ಈಗ ನಿರ್ಮಾಣದತ್ತ ಬಿದ್ದಿದೆ. ಪುನೀತ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯನ್ನ ಸ್ಥಾಪಿಸಿದ್ದು, ಈ ಬ್ಯಾನರ್ ನಲ್ಲಿ ತಮ್ಮ ಚೊಚ್ಚಲ ಚಿತ್ರವನ್ನ ತಯಾರು ಮಾಡುತ್ತಿದ್ದಾರೆ. ಹೀಗಿರುವಾಗ, ತಮ್ಮ ಬ್ಯಾನರ್ ನಲ್ಲಿ ಮತ್ತೊಂದು ಚಿತ್ರವನ್ನ ನಿರ್ಮಾಣ ಮಾಡುವ ಯೋಚನೆ ಮಾಡಿದ್ದು, ಈ ಚಿತ್ರದಲ್ಲಿ ತಾವೇ ನಾಯಕರಾಗಿ ಅಭಿನಯಿಸಲಿದ್ದಾರಂತೆ.

ಯಾವುದು ಆ ಚಿತ್ರ? ಯಾರು ಈ ಚಿತ್ರಕ್ಕೆ ನಿರ್ದೇಶಕ? ಯಾವಾಗ ಶುರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಎರಡನೇ ಚಿತ್ರಕ್ಕೆ ಪುನೀತ್ ನಾಯಕ

ಪವರ್ ಸ್ಟಾರ್ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಲ್ಲಿ ತಯಾರು ಮಾಡಲಿರುವ ಎರಡನೇ ಚಿತ್ರದಲ್ಲಿ ತಾವೇ ನಾಯಕರಾಗಿ ಅಭಿನಯಿಸುತ್ತಿದ್ದಾರೆ.

ಪುನೀತ್ ನಿರ್ಮಾಣದ 'ಕವಲು ದಾರಿ' ಕುರಿತ ಲೇಟೆಸ್ಟ್ ಸುದ್ದಿ ಇದು..

ಶಶಾಂಕ್ ನಿರ್ದೇಶನ

ಪುನೀತ್ ನಟಿಸಿ, ನಿರ್ಮಾಣ ಮಾಡಲಿರುವ ಚಿತ್ರಕ್ಕೆ ಸ್ಟಾರ್ ನಿರ್ದೇಶಕ ಶಶಾಂಕ್ ಆಕ್ಷನ್ ಕಟ್ ಹೇಳಲಿದ್ದಾರೆ.

ಮುಂದಿನ ವರ್ಷ ಆರಂಭ

ಸದ್ಯ, ಪುನೀತ್ ರಾಜ್ ಕುಮಾರ್ 'ಅಂಜನಿಪುತ್ರ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ತಮಿಳು ನಿರ್ದೇಶಕ ವೆಟ್ರಿಮಾರನ್ ನಿರ್ದೇಶನದ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಅದಾದ ನಂತರ ಶಶಾಂಕ್ ಮತ್ತು ಪುನೀತ್ ಒಟ್ಟಿಗೆ ಸಿನಿಮಾ ಮಾಡಲಿದ್ದಾರೆ.

ಚೊಚ್ಚಲ ಕಾಂಬಿನೇಷನ್

'ಮೊಗ್ಗಿನ ಮನಸ್ಸು', 'ಕೃಷ್ಣನ್ ಲವ್ ಸ್ಟೋರಿ', 'ಕಷ್ಣಲೀಲಾ'. 'ಮುಂಗಾರು ಮಳೆ-2', 'ಬಚ್ಚನ್', ಅಂತಹ ಚಿತ್ರಗಳನ್ನ ನಿರ್ದೇಶನ ಮಾಡಿರುವ ಶಶಾಂಕ್, ಇದೇ ಮೊದಲ ಬಾರಿಗೆ ಪುನೀತ್ ಜೊತೆ ಸಿನಿಮಾ ಮಾಡುತ್ತಿದ್ದಾರೆ.

'ಕವಲುದಾರಿ'ಗೆ ಅಪ್ಪು ನಿರ್ಮಾಣ

'ಗೋಧಿಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ನಿರ್ದೇಶಕ ಹೇಮಂತ್ ರಾವ್ ಆಕ್ಷನ್ ಕಟ್ ಹೇಳುತ್ತಿರುವ 'ಕವಲುದಾರಿ' ಚಿತ್ರವನ್ನ ಪುನೀತ್ ರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ.

ಹೇಮಂತ್ ರಾವ್-ಪುನೀತ್ ಕಾಂಬಿನೇಷನ್ ಚಿತ್ರಕ್ಕೆ ಹೊಸ ಟೈಟಲ್!

English summary
Power Star Puneeth Rajkumar Act and Produce his Next Movie With Director Shashank.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada