For Quick Alerts
  ALLOW NOTIFICATIONS  
  For Daily Alerts

  BIG NEWS: ಕನ್ನಡದ ಕೋಟ್ಯಧಿಪತಿಯಲ್ಲಿ ಮತ್ತೆ ಪುನೀತ್, ಇಲ್ಲಿದೆ ಫೋಟೋಶೂಟ್

  |
  ಮತ್ತೆ ಕಿರುತೆರೆಗೆ ಕಮ್ ಬ್ಯಾಕ್ ಮಾಡಿದ ಪುನೀತ್ ರಾಜ್ ಕುಮಾರ್ | ಇಲ್ಲಿದೆ ಸಿಹಿ ಸುದ್ದಿ | FILMIBEAT KANNADA

  ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಕನ್ನಡದ ಕೋಟ್ಯಧಿಪತಿ ಮತ್ತೆ ಬರ್ತಿದೆ. ಈಗಾಗಲೇ ಮೂರು ಆವೃತ್ತಿ ಮುಗಿಸಿರುವ ಗೇಮ್ ಶೋ ಈಗ ನಾಲ್ಕನೇ ಆವೃತ್ತಿಗೆ ಸಜ್ಜಾಗಿದೆ. ಮೊದಲೆರಡು ಆವೃತ್ತಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಶೋ ನಿರೂಪಣೆ ಮಾಡಿಕೊಟ್ಟಿದ್ದರು. ಕಳೆದ ಸೀಸನ್ ನಲ್ಲಿ ರಮೇಶ್ ಅರವಿಂದ್ ಆಂಕರಿಂಗ್ ಮಾಡಿದ್ದರು.

  ಇದೀಗ, ಹೊಸ ಆವೃತ್ತಿಯಲ್ಲಿ ಮತ್ತೆ ಬದಲಾವಣೆಯ ಸೂತ್ರದೊಂದಿಗೆ ಬರ್ತಿದೆ ಕೋಟ್ಯಧಿಪತಿ. ನಾಲ್ಕನೇ ಸೀಸನ್ ನಲ್ಲಿ ಮತ್ತೆ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡ್ತಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಆದ್ರೆ, ಅಪ್ಪು ಕಡೆಯಿಂದ ಆಗಲಿ ಅಥವಾ ಕೋಟ್ಯಧಿಪತಿ ಶೋ ಕಡೆಯಿಂದಾಗಲಿ ಖಚಿತವಾಗಿರಲಿಲ್ಲ.

  'ಕನ್ನಡದ ಕೋಟ್ಯಾಧಿಪತಿ' ಕಾರ್ಯಕ್ರಮಕ್ಕೆ ಸಿಕ್ಕ ಹೊಸ ಸಾರಥಿ ಇವರು!

  ಈಗ ಪುನೀತ್ ರಾಜ್ ಕುಮಾರ್ ನಿರೂಪಣೆ ಮಾಡೋದು ಬಹುತೇಕ ಖಚಿತವಾಗಿದೆ. ಈಗಾಗಲೇ ಕೋಟ್ಯಧಿಪತಿಗಾಗಿ ಅಪ್ಪು ಫೋಟೋಶೂಟ್ ಕೂಡ ಮಾಡಿಸಿದ್ದು, ಫೋಟೋ ಈಗ ವೈರಲ್ ಆಗಿದೆ. ಹಾಗಿದ್ರೆ, ಕನ್ನಡ ಕೋಟ್ಯಧಿಪತಿ ನಾಲ್ಕನೇ ಸೀಸನ್ ಯಾವಾಗ? ಮುಂದೆ ಓದಿ....

  ಕಿರುತೆರೆಗೆ ಅಪ್ಪು ಕಂಬ್ಯಾಕ್

  ಕಿರುತೆರೆಗೆ ಅಪ್ಪು ಕಂಬ್ಯಾಕ್

  ಸಂತೋಷ್ ಆನಂದ್ ರಾಮ್ ನಿರ್ದೇಶನದ 'ಯುವರತ್ನ' ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಿರುವ ಪುನೀತ್ ರಾಜ್ ಕುಮಾರ್ ಈಗ ಕಿರುತೆರೆಗೆ ಕಂಬ್ಯಾಕ್ ಮಾಡುತ್ತಿದ್ದಾರೆ. ಅದು ತಮ್ಮ ನೆಚ್ಚಿನ ಕಾರ್ಯಕ್ರಮ ಕೋಟ್ಯಧಿಪತಿ ಮೂಲಕ ವಾಪಸ್ ಆಗ್ತಿರುವುದು ಅಭಿಮಾನಿಗಳಿಗೆ ಫುಲ್ ಖುಷಿ ನೀಡಿದೆ.

  ಫೋಟೋಶೂಟ್ ಆಗಿದೆ

  ಫೋಟೋಶೂಟ್ ಆಗಿದೆ

  ಈಗಾಗಲೇ ಕನ್ನಡದ ಕೋಟ್ಯಧಿಪತಿ ನಾಲ್ಕನೇ ಆವೃತ್ತಿಗಾಗಿ ಪುನೀತ್ ಅವರ ಫೋಟೋಶೂಟ್ ಕೂಡ ಮುಗಿದಿದೆ. ಟಿವಿ ಶೋಗಾಗಿ ಅಪ್ಪು ಭರ್ಜರಿ ಫೋಟೋಶೂಟ್ ಮಾಡಿದ್ದು, ಅದರ ಝಲಕ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ, ಸ್ಪಷ್ಟ ಚಿತ್ರ ಬಹಿರಂಗವಾಗಿಲ್ಲ. ಬ್ಲರ್ ಆಗಿರುವ ಅಪ್ಪು ಫೋಟೋ ಸಿಕ್ಕಿದೆ.

  'ಕನ್ನಡದ ಕೋಟ್ಯಧಿಪತಿ'ಯಲ್ಲಿ 1 ಕೋಟಿ ಗೆದ್ದಿದ್ದು ಇವರೊಬ್ಬರೇ.!

  ಯಾವಾಗ ಕೋಟ್ಯಧಿಪತಿ ಆರಂಭ

  ಯಾವಾಗ ಕೋಟ್ಯಧಿಪತಿ ಆರಂಭ

  ಸದ್ಯಕ್ಕೆ ಪುನೀತ್ ಅವರ ಫೋಟೋಶೂಟ್ ಮಾತ್ರ ಆಗಿದೆ. ಕಾರ್ಯಕ್ರಮ ಯಾವಾಗ ಆರಂಭ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಸದ್ಯದ ತಯಾರಿ ನೋಡುತ್ತಿದ್ದರೇ, ಆದಷ್ಟೂ ಬೇಗ ಆರಂಭವಾಗಲಿದೆ ಎಂಬುದಂತೂ ಪಕ್ಕಾ.

  ಫ್ಯಾಮಿಲಿ ಪವರ್ ಮಾಡಿದ್ದ ಅಪ್ಪು

  ಫ್ಯಾಮಿಲಿ ಪವರ್ ಮಾಡಿದ್ದ ಅಪ್ಪು

  ಕೊನೆಯದಾಗಿ ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಫ್ಯಾಮಿಲಿ ಪವರ್' ಎಂಬ ಗೇಮ್ ಶೋ ನಿರೂಪಣೆ ಮಾಡಿದ್ದರು ಪುನೀತ್ ರಾಜ್ ಕುಮಾರ್. ನಂತರ ಮತ್ಯಾವ ಕಾರ್ಯಕ್ರಮದಲ್ಲಿ ಅಪ್ಪು ಕಾಣಿಸಿಕೊಂಡಿಲ್ಲ. ಇದೀಗ, ತುಂಬಾ ವರ್ಷದ ನಂತರ ಕೋಟ್ಯಧಿಪತಿ ಸೆಟ್ ಗೆ ಪವರ್ ಸ್ಟಾರ್ ಎಂಟ್ರಿಯಾಗ್ತಿರುವುದು ನಿಜಕ್ಕೂ ವಿಶೇಷ.

  English summary
  Kannada actor Puneeth rajkumar back on with Kannadada Kotyadhipati season 4. recently puneeth finished stylish photoshoot for this programme.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X