»   » ದರ್ಶನ್ ಮಾಡಬೇಕಿದ್ದ ಚಿತ್ರಕ್ಕೀಗ ಪುನೀತ್ ನಾಯಕ!

ದರ್ಶನ್ ಮಾಡಬೇಕಿದ್ದ ಚಿತ್ರಕ್ಕೀಗ ಪುನೀತ್ ನಾಯಕ!

By: BK
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಡಬೇಕಿದ್ದ ಚಿತ್ರವೊಂದಕ್ಕೆ ಈಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಲಿದ್ದಾರಂತೆ. ಹೀಗಂತ ಸುದ್ದಿಯೊಂದು ಗಾಂಧಿನಗರದಲ್ಲಿ ಗಿರಿಗಿಟ್ಲೆ ಹೊಡಿತಿದೆ.

Puneeth Rajkumar hero For Kannada Remake of 'Poojai'

ಹೌದು, ತಮಿಳಿನಲ್ಲಿ ವಿಶಾಲ್ ಅಭಿನಯಿಸಿ ಸೂಪರ್ ಹಿಟ್ ಆದ 'ಪೂಜೈ' ಸಿನಿಮಾವನ್ನ ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ, ಅದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದ್ರೀಗ ಈ ಚಿತ್ರವನ್ನ ದರ್ಶನ್ ಬದಲು ಪುನೀತ್ ಮಾಡಲಿದ್ದಾರೆ ಎಂಬ ಸುದ್ದಿಗಳು ಸ್ಯಾಂಡಲ್ ವುಡ್ ನಲ್ಲಿ ಕೇಳಿಬರುತ್ತಿವೆ.

Puneeth Rajkumar hero For Kannada Remake of 'Poojai'

'ಪೂಜೈ' ಚಿತ್ರದ ಕನ್ನಡ ರಿಮೇಕ್ ರೈಟ್ಸ್ ನ್ನ ಕಾಮಿಡಿ ನಟ ಬುಲೆಟ್ ಪ್ರಕಾಶ್ ಅವರು ಪಡೆದುಕೊಂಡಿದ್ದರು. ಹೀಗಾಗಿ, ತನ್ನ 'ಕುಚಿಕು' ಗೆಳಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಲೂಸ್ ಮಾದ ಯೋಗೇಶ್ ಜುಗಲ್ ಬಂದಿಯಲ್ಲಿ ಈ ಚಿತ್ರವನ್ನ ಮಾಡುವುದಕ್ಕೆ ಎಲ್ಲ ತಯಾರಿ ಮಾಡಿಕೊಂಡಿದ್ದರು.

Puneeth Rajkumar hero For Kannada Remake of 'Poojai'

ಇನ್ನೇನು 'ಪೂಜೈ' ಸಿನಿಮಾ ಕನ್ನಡದಲ್ಲಿ ಸೆಟ್ಟೇರುತ್ತೆ ಎನ್ನುವಷ್ಟರಲ್ಲಿ ಬುಲೆಟ್ ಪ್ರಕಾಶ್ ಹಾಗೂ ದರ್ಶನ್ ಸಹೋದರ ದಿನಕರ್ ಗಲಾಟೆಯಿಂದ ಈ ಪಾಜೆಕ್ಟ್ ಸ್ಟಾಪ್ ಆಗಿತ್ತು. ಈಗ ಬುಲೆಟ್ ಪ್ರಕಾಶ್ ಈ ಚಿತ್ರದ ರಿಮೇಕ್ ರೈಟ್ಸ್ ನ ನಿರ್ಮಾಪಕ ಎನ್.ಕುಮಾರ್ ಅವರಿಗೆ ಮಾರಾಟ ಮಾಡಿದ್ದಾರಂತೆ. ಹೀಗಾಗಿ, ನಿರ್ಮಾಪಕ ಎನ್ ಕುಮಾರ್ ಈ ಪ್ರಾಜೆಕ್ಟ್ ಅಪ್ಪುಗೆ ಮಾಡುವ ಪ್ಲಾನ್ ನಲ್ಲಿದ್ದು, ನಿರ್ದೇಶಕ ಹರ್ಷ ಡೈರೆಕ್ಟ್ ಮಾಡುವ ಸಾಧ್ಯತೆಯಿದೆಯಂತೆ.

Puneeth Rajkumar hero For Kannada Remake of 'Poojai'

ಮೂಲಗಳ ಪ್ರಕಾರ ಪುನೀತ್ ರಾಜ್ ಕುಮಾರ್ 'ಪೂಜೈ' ರಿಮೇಕ್ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಇನ್ನೊಂದೆಡೆ ಪವರ್ ಸ್ಟಾರ್ ನಾಲ್ಕೈದು ಸಿನಿಮಾಗಳಲ್ಲಿ ಬ್ಯುಸಿ ಇರುವುದರಿಂದ ಸದ್ಯದಲ್ಲೇ ಈ ಸಿನಿಮಾ ಆಗುವುದಿಲ್ಲ ಅಂತಿದ್ದಾರೆ ಪುನೀತ್ ಆಪ್ತರು.

Puneeth Rajkumar hero For Kannada Remake of 'Poojai'

ಆದರೆ, ನಿರ್ಮಾಪಕ ಎನ್ ಕುಮಾರ್ ಈ ಸಿನಿಮಾವನ್ನ ಪುನೀತ್ ರಾಜ್ ಕುಮಾರ್ ಜೊತೆ ಮಾಡ್ತಾರಾ? ಅಥವಾ ದರ್ಶನ್ ಜೊತೆಗೆ ಮಾಡ್ತಾರಾ ಎನ್ನುವುದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.

English summary
After Hearing the Rumours, Puneeth Rajkumar will play lead role in Kannada remake of poojai. But, Puneeth Rajkumar is yet give an official confirmation to star in the Kannada remake of poojai. before this rumoors, challenging star darshan to star in kannada remake of poojai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada