»   » ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಯ್ತು

ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ಟೈಟಲ್ ಫಿಕ್ಸ್ ಆಯ್ತು

Posted By:
Subscribe to Filmibeat Kannada
ಪುನೀತ್ ರಾಜ್ ಕುಮಾರ್ ಹೊಸ ಸಿನಿಮಾಗೆ ಟೈಟಲ್ ಏನು ? | Filmibeat Kannada

'ಅಂಜನೀಪುತ್ರ' ಸಿನಿಮಾದ ನಂತರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಸಿನಿಮಾ ಸೆಟ್ಟೇರಿದೆ. ನಿನ್ನೆ (ಸೋಮವಾರ) ಈ ಸಿನಿಮಾದ ಮುಹೂರ್ತ ಕಾರ್ಯಕ್ರಮ ನೆರವೇರಿದೆ. ರಾಕ್ ಲೈನ್ ವೆಂಕಟೇಶ್ ಬ್ಯಾನರ್ ನಲ್ಲಿ ಬರುತ್ತಿರುವ ಈ ಚಿತ್ರವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದಾರೆ.

ಅಂದಹಾಗೆ, ನಿನ್ನೆ ಸೆಟ್ಟೇರಿದ ಈ ಹೊಸ ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿರಲಿಲ್ಲ. ಆದರೆ ಈ ಚಿತ್ರಕ್ಕೆ ಈಗ 'ಪಂಜು' ಎನ್ನುವ ಟೈಟಲ್ ಫಿಕ್ಸ್ ಆಗಿದೆ ಎನ್ನುವ ಸುದ್ದಿ ಇದೆ. ಇದೊಂದು ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ. ಚಿತ್ರಕ್ಕೆ 'ಪಂಜು' ಎನ್ನುವ ಪಂಚಿಂಗ್ ಹೆಸರನ್ನು ಇಡಲಾಗಿದೆಯಂತೆ.

Puneeth Rajkumar new movie titled as Panju

ಅಂತೆ-ಕಂತೆಗೆಲ್ಲ ಬ್ರೇಕ್: ಸದ್ದಿಲ್ಲದೇ ಸೆಟ್ಟೇರಿತು ಪುನೀತ್ ಹೊಸ ಸಿನಿಮಾ

'ಪಂಜು' ಸಿನಿಮಾದ ಚಿತ್ರೀಕರಣ ಮಾರ್ಚ್ 8 ರಿಂದ ಶುರು ಆಗಲಿದೆ. ಇನ್ನೂ ಸಿನಿಮಾದ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಚಿತ್ರಕ್ಕೆ ಡಿ ಇಮ್ಮನ್ ಮ್ಯೂಸಿಕ್ ಮಾಡುತ್ತಿದ್ದಾರೆ. 'ರಣವಿಕ್ರಮ' ನಂತರ ಮತ್ತೆ ಪವನ್ ಒಡೆಯರ್ ಹಾಗೂ ಪುನೀತ್ ರಾಜ್ ಕುಮಾರ್ ಜೋಡಿ ಒಂದಾಗಿದ್ದು ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಜೊತೆಗೆ 'ಅಂಜನೀಪುತ್ರ' ನಂತರ ಅಪ್ಪು ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಗೊಂದಲ ನಿವಾರಣೆ ಆಗಿದೆ.

English summary
Kannada actor Puneeth Rajkumar new movie titled as Panju. the movie directed by pawan wodeyar and produced by rockline venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada