»   » ದಾಖಲೆಯ ದಾಪುಗಾಲು ಹಾಕುವತ್ತ ಪುನೀತ್ 'ರಣವಿಕ್ರಮ'

ದಾಖಲೆಯ ದಾಪುಗಾಲು ಹಾಕುವತ್ತ ಪುನೀತ್ 'ರಣವಿಕ್ರಮ'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ರಣವಿಕ್ರಮ' ಚಿತ್ರಕ್ಕೆ ಅದ್ದೂರಿ ಓಪನ್ನಿಂಗ್ ಸಿಕ್ಕಿದೆ. ರಿಲೀಸ್ ಆದ ಎಲ್ಲಾ ಕಡೆ ತುಂಬಿದ ಚಿತ್ರಮಂದಿರಗಳ ಪ್ರದರ್ಶನ ಕಾಣುತ್ತಿದೆ. ಮೊದಲ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್ ನಲ್ಲಿ ದಾಖಲೆ ಬರೆದಿರುವ 'ರಣವಿಕ್ರಮ' ಒಂದೇ ವಾರದಲ್ಲಿ 12 ಕೋಟಿ ಕಮಾಯಿ ಮಾಡುವ ನಿರೀಕ್ಷೆ ಇದೆ.

ಕಳೆದ ಶುಕ್ರವಾರ ಕರ್ನಾಟಕದ ಮೂಲೆ ಮೂಲೆ ಸೇರಿದಂತೆ ದೆಹಲಿ, ಚೆನ್ನೈ, ಹೈದರಾಬಾದ್, ಮುಂಬೈ ಮತ್ತು ಪೂಣೆಯಲ್ಲಿ 'ರಣವಿಕ್ರಮ' ತೆರೆಕಂಡಿದೆ. ಸೋಜಿಗದ ಸಂಗತಿ ಅಂದ್ರೆ, ದೆಹಲಿಯಲ್ಲೂ 'ರಣವಿಕ್ರಮ'ನ ಪರಾಕ್ರಮ ನೋಡುವುದಕ್ಕೆ ಪ್ರೇಕ್ಷಕರು ಮುಗಿಬೀಳ್ತಿದ್ದಾರೆ.


puneeth-rajkumar-starrer-ranavikrama-expected-cross-rs-12-crore-in-first-week

ವರದಿಗಳ ಪ್ರಕಾರ ಇಲ್ಲಿಯವರೆಗೆ ಅಂದ್ರೆ, ಆರು ದಿನಗಳಲ್ಲಿ 'ರಣವಿಕ್ರಮ' ಕಲೆಕ್ಷನ್ ಮಾಡಿರುವುದು ಬರೋಬ್ಬರಿ 8 ಕೋಟಿ. ಅದು ಕರ್ನಾಟಕದಲ್ಲಿ ಮಾತ್ರ. ದಿನದಿಂದ ದಿನಕ್ಕೆ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಹೆಚ್ಚಾಗುತ್ತಿರುವುದರಿಂದ ಈ ಶುಕ್ರವಾರದ ಹೊತ್ತಿಗೆ 'ರಣವಿಕ್ರಮ' 12 ಕೋಟಿ ಕಲೆಕ್ಷನ್ ಮಾಡುವುದು ಗ್ಯಾರೆಂಟಿ ಅನ್ನುತ್ತಾರೆ ನಿರ್ಮಾಪಕ ಜಯಣ್ಣ. [ಬಾಕ್ಸ್ ಆಫೀಸಲ್ಲಿ ಹೊಸ ವಿಕ್ರಮ ಮೆರೆದ ರಣವಿಕ್ರಮ]


ಈ ಅಂದಾಜು ನಿಜವೇ ಆದ್ರೆ, ಗಾಂಧಿನಗರದಲ್ಲಿ 'ರಣವಿಕ್ರಮ' ಹೊಸ ಇತಿಹಾಸ ಸೃಷ್ಟಿಸುವುದು ಖಂಡಿತ. ಪೊಲೀಸ್ ಆಫೀಸರ್ ಲುಕ್ ನಲ್ಲಿ ಅಪ್ಪು 'ರಣವಿಕ್ರಮ'ನಾಗಿ ಅಬ್ಬರಿಸಿದ್ದಾರೆ. ಅಪ್ಪು ಜೊತೆ ಅದಾ ಶರ್ಮಾ, ಅಂಜಲಿ ಗ್ಲಾಮರ್ ರಂಗು ಮತ್ತಷ್ಟು ಕಳೆ ಕೊಟ್ಟಿದೆ. [ಚಿತ್ರ ವಿಮರ್ಶೆ: 'ರಣವಿಕ್ರಮ' ಪವನ್ ಇನ್ನೊಂದು ಗೂಗ್ಲಿ]


ಆಕ್ಷನ್, ರೋಮ್ಯಾನ್ಸ್, ಲವ್ ಇರುವ 'ರಣವಿಕ್ರಮ' ಅಪ್ಪು ಫ್ಯಾನ್ಸ್ ಜೊತೆಗೆ ಫ್ಯಾಮಿಲಿ ಪ್ರೇಕ್ಷಕರನ್ನೂ ಆಕರ್ಷಿಸುತ್ತಿದೆ. ಆ ಮೂಲಕ ಮೊದಲು 'ಗೂಗ್ಲಿ' ಬಿಟ್ಟ ಪವನ್ ಒಡೆಯರ್, 'ರಣವಿಕ್ರಮ' ಮೂಲಕ ಹ್ಯಾಟ್ರಿಕ್ ವಿಜಯ ಪತಾಕೆ ಹಾರಿಸುವಂತಾಗಿದೆ. (ಏಜೆನ್ಸೀಸ್)

English summary
Power Star Puneeth Rajkumar starrer 'Ranavikrama' is gathering positive response from the critics and audience. According to the reports, 'Ranavikrama' has collected Rs.8 crores (approx) till now in the Box Office and expected to collect Rs.12 crores in First Week.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada