For Quick Alerts
  ALLOW NOTIFICATIONS  
  For Daily Alerts

  'WhatsApp' ನಲ್ಲಿ ರಜಿನಿ ಮೊದಲಾ...ರಾಜ್ ಮೊಮ್ಮಗ ಮೊದಲಾ.?

  By Harshitha
  |

  'ಕೋಳಿ ಮೊದಲಾ...ಮೊಟ್ಟೆ ಮೊದಲಾ..?' ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಇದುವರೆಗೂ ಯಾರೂ ಉತ್ತರ ಕೊಟ್ಟಿಲ್ಲ. ಸರಿಯಾದ ಉತ್ತರ ಸಿಗುವುದೂ ಇಲ್ಲ. ಆದ್ರೂ, ಚರ್ಚೆ ಮಾತ್ರ ನಿಲ್ಲುವುದೇ ಇಲ್ಲ.!

  ಸೇಮ್ ಟು ಸೇಮ್ ಅದೇ ರೀತಿಯಲ್ಲಿ ಈಗ 'WhatsApp' ನಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಅದು ಸೂಪರ್ ಸ್ಟಾರ್ ರಜಿನಿಕಾಂತ್ ಹಾಗೂ ವರನಟ ಡಾ.ರಾಜ್ ಕುಮಾರ್ ಮೊಮ್ಮಗ ವಿನಯ್ ರಾಜ್ ಕುಮಾರ್ ಬಗ್ಗೆ..!

  ಇಷ್ಟಕ್ಕೂ ಆ ಮ್ಯಾಟರ್ ಏನು ಅಂತ ತಿಳಿದುಕೊಳ್ಳುವ ಮುನ್ನ 'WhatsApp' ನಲ್ಲಿ ಇರುವ ಈ Emoji ಒಮ್ಮೆ ನೋಡಿ....

  ಬ್ಲಾಕ್ ಸೂಟ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟಿರುವ ಕ್ಲಾಸ್ ವ್ಯಕ್ತಿಯ ಈ Emoji ಸೂಪರ್ ಸ್ಟಾರ್ ರಜಿನಿಕಾಂತ್ ರವರ 'ಬಾಷಾ' ಸಿನಿಮಾದಿಂದ ಪ್ರೇರಿತವಾಗಿರುವುದಂತೆ.! 'ಕಬಾಲಿ' ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗುತ್ತಿರುವುದರಿಂದ ರಜಿನಿಕಾಂತ್ ರವರಿಗೆ ಸಲಾಂ ಹೊಡೆಯಲು 'WhatsApp' ನವರು ಈ Emoji ಸೇರಿಸಿದ್ದಾರಂತೆ.! ಹಾಗಂತ ನಾವು ಹೇಳುತ್ತಿಲ್ಲ. 'ತಲೈವಾ' ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ. ['ಕಬಾಲಿ' ಚಿತ್ರದ ವಿಲನ್ ಕನ್ನಡದ ಕಿಶೋರ್ ಜೊತೆ ಒಂದ್ ಸಂದರ್ಶನ]

  ಎಲ್ಲಾ 'ತಲೈವಾ' ಭಕ್ತರ ತಲೆ ಮೇಲೆ ಹೊಡೆಯುವಂತೆ ನಮ್ಮ ಕನ್ನಡ ನಾಡಿನ ಅಣ್ತಮ್ಮಂದಿರು 'WhatsApp' ನಲ್ಲಿ ಹೊಸ ವಾದ ಮಂಡಿಸುತ್ತಿದ್ದಾರೆ. ಆ ವಾದದ ಪೂರ್ವಾಪರ ಕೇಳುವ ಮುನ್ನ ಈ Emoji ನೋಡಿಬಿಡಿ....

  ನೀಲಿ ಪ್ಯಾಂಟು, ಕೆಂಪು ಶರ್ಟು ತೊಟ್ಟು ಓಡುತ್ತಿರುವ ಹುಡುಗನ Emoji ವಿನಯ್ ರಾಜ್ ಕುಮಾರ್ ರವರ 'ರನ್ ಆಂಟನಿ' ಚಿತ್ರದ ಸ್ಫೂರ್ತಿ ಅಂತೆ.! ರಜನಿ Emoji ಬರುವ ಮೊದಲೇ 'ರನ್ ಆಂಟನಿ' Emoji ಇತ್ತು ಎಂಬುದು ರಾಜವಂಶದ ಭಕ್ತರ ವಾದ.! [ಕ್ಷಣ-ಕ್ಷಣಕ್ಕೂ ಕುತೂಹಲ ಕೆರಳಿಸುವ 'ರನ್ ಆಂಟನಿ' ವಾಂಟೆಡ್ ಟ್ರೈಲರ್.!]

  ಈ ವಿಚಾರ ಕೇಳಿ ಹಲ್ಲು ಬಿಡ್ತೀರೋ, ತಲೆ ಚಚ್ಚಿಕೊಳ್ಳುತ್ತೀರೋ, ನಿಮಗೆ ಬಿಟ್ಟಿದ್ದು. 'WhatsApp' ನಲ್ಲಿ ಹರಿದಾಡುತ್ತಿರುವುದನ್ನ ನಿಮಗೆ ಹೇಳಿದ್ವಿ ಅಷ್ಟೆ.!

  ಇನ್ನೊಂದು ಸತ್ಯ ಹೇಳ್ಲಾ.? ಅಸಲಿಗೆ ಬ್ಲಾಕ್ ಸೂಟ್, ಬೂಟ್, ಕಣ್ಣಿಗೆ ಕೂಲಿಂಗ್ ಗ್ಲಾಸ್ ತೊಟ್ಟಿರುವ ವ್ಯಕ್ತಿಯ Emoji, ಬ್ರಿಟಿಷ್ ರೆಕಾರ್ಡ್ ಲೇಬಲ್ '2 Tone Records' ನ ಕ್ಯಾರೆಕ್ಟರ್ 'Walt Jabsco' ನಿಂದ ಸ್ಫೂರ್ತಿ ಪಡೆದಿರುವುದು. ರಜಿನಿಕಾಂತ್ ರಿಂದ ಅಲ್ಲ.!

  English summary
  Mistakenly identified Super Star Rajinikanth's 'Kabali' and Kannada Actor Vinay Rajkumar's 'Run Antony' emoji is becoming popular in Whatsapp.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X