»   » ಬ್ರೇಕಿಂಗ್ ನ್ಯೂಸ್ ; ತಾಯ್ನಾಡಿಗೆ ಮರಳಿದ ರಮ್ಯಾ

ಬ್ರೇಕಿಂಗ್ ನ್ಯೂಸ್ ; ತಾಯ್ನಾಡಿಗೆ ಮರಳಿದ ರಮ್ಯಾ

Posted By: ಹರಾ
Subscribe to Filmibeat Kannada

ಲಕ್ಕಿ ಸ್ಟಾರ್ ರಮ್ಯಾ ಅಭಿಮಾನಿಗಳಿಗೆ ಇಲ್ಲಿದೆ ಬ್ರೇಕಿಂಗ್ ನ್ಯೂಸ್. ಕಳೆದ ಒಂದು ವರ್ಷದಿಂದ ವಿದೇಶದಲ್ಲಿ ನೆಲೆಸಿದ್ದ ನಟಿ ರಮ್ಯಾ ಬೆಂಗಳೂರಿಗೆ ವಾಪಸ್ ಆಗಿದ್ದಾರೆ.!

ಇದು ಮತ್ತೊಮ್ಮೆ 'ಏಪ್ರಿಲ್ ಫೂಲ್' ವಿಶೇಷ ಲೇಖನ ಅಂದುಕೊಳ್ಳಬೇಡಿ. ರಮ್ಯಾ ಆಪ್ತ ವಲಯ ಹೇಳಿಕೊಂಡಿರುವ ಪ್ರಕಾರ ತಾಯ್ನಾಡಿಗೆ ಮಂಡ್ಯದ ಯುವರಾಣಿ ಸದ್ದಿಲ್ಲದೇ ಮರಳಿದ್ದಾರೆ. ರಮ್ಯಾ ಬೆಂಗಳೂರಲ್ಲಿ ಲ್ಯಾಂಡ್ ಆಗಿ ಎರಡು ದಿನಗಳಾಗಿವೆ. [ಸದ್ದಿಲ್ಲದಂತೆ ಬೆಂಗಳೂರಿಗೆ ವಾಪಸ್ಸಾದ ನಟಿ ರಮ್ಯಾ]

Ramya aka Divya Spandana returns back to Bangalore?

ಹೌದು, ಬುಧವಾರ ರಾತ್ರಿ ಸಿಲಿಕಾನ್ ಸಿಟಿಗೆ ಸ್ಯಾಂಡಲ್ ವುಡ್ ಕ್ವೀನ್ ಕಾಲಿಟ್ಟಿದ್ದಾರೆ ಅನ್ನುತ್ತಿವೆ ಮೂಲಗಳು. ಏರ್ ಪೋರ್ಟ್ ನಿಂದ ಲ್ಯಾಂಡ್ ಆದ ತಕ್ಷಣ ತಮ್ಮ ನೆಚ್ಚಿನ ತಾಜ್ ವೆಸ್ಟ್ ಎಂಡ್ ಗೆ ರಮ್ಯಾ ತೆರಳಿದ್ದಾರೆ.[ಲಂಡನ್ ನಲ್ಲಿ ಲಕ್ಕಿ ಸ್ಟಾರ್ ರಮ್ಯಾ ಮಾಡ್ತಿರೋದು ಇದನ್ನಾ?]

ಕೇವಲ ಆಪ್ತರಷ್ಟೇ ರಮ್ಯಾ ಮೇಡಂ ಅವರನ್ನ ಬರಮಾಡಿಕೊಂಡಿದ್ದಾರೆ. ಮೀಡಿಯಾದಿಂದ ಕೊಂಚ ದೂರ ಇರಲು ಬಯಸಿರುವ ರಮ್ಯಾ ಹೊರಗೆಲ್ಲೂ ಕಾಣಿಸಿಕೊಳ್ಳುವುದಕ್ಕೆ ಇಚ್ಛಿಸುತ್ತಿಲ್ಲವಂತೆ. ಇದೇ ಕಾರಣಕ್ಕೆ ಈಗೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನುವ ಮಾಹಿತಿ ಕೂಡ ಲಭ್ಯವಾಗಿಲ್ಲ. [ಏಪ್ರಿಲ್ ನಲ್ಲಿ ರಮ್ಯಾ ಪ್ರತ್ಯಕ್ಷ, ಟ್ವಿಟ್ಟರ್ ನಲ್ಲಿ ಬ್ರೇಕಿಂಗ್!]

ಆಡಿದ ಮಾತಿನಂತೆ ಏಪ್ರಿಲ್ ನಲ್ಲಿ ವಾಪಸ್ಸಾಗಿರುವ ರಮ್ಯಾ ಎಷ್ಟು ದಿನ ಇಲ್ಲಿ ಇರುತ್ತಾರೆ ಅನ್ನೋದಿನ್ನೂ ಗುಟ್ಟಾಗಿದೆ. ಇತ್ತ ಸ್ಯಾಂಡಲ್ ವುಡ್ ನಲ್ಲಿ ರಮ್ಯಾ ಕಾಲ್ ಶೀಟ್ ಗಾಗಿ ಕಾಯುತ್ತಿರುವ ನಿರ್ಮಾಪಕರಿಗೆ ರಮ್ಯಾ ಕೃಪಾಕಟಾಕ್ಷ ಸಿಗಲಿದ್ಯಾ ಅನ್ನೋದು ಸದ್ಯಕ್ಕೆ ಮಿಲಿಯನ್ ಡಾಲರ್ ಪ್ರಶ್ನೆ.

English summary
According to the sources, Sandalwood Queen Ramya aka Divya Spandana has returned back to Bengaluru two days ago. But the Actress has chosen to stay away from the limelight.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada