»   » ಬಾಲಿವುಡ್ ಪ್ರಣಯ ಪಕ್ಷಿಗಳು ಕೈಕೈ ಹಿಡಿದು ಮತ್ತೆ ಹಾರಿದವು

ಬಾಲಿವುಡ್ ಪ್ರಣಯ ಪಕ್ಷಿಗಳು ಕೈಕೈ ಹಿಡಿದು ಮತ್ತೆ ಹಾರಿದವು

Posted By:
Subscribe to Filmibeat Kannada

ಬಾಲಿವುಡ್ ಚಿತ್ರ ಜಗತ್ತಿನ ಹಾಟ್ ಜೋಡಿಯೆಂದೇ ಬಿಂಬಿತವಾಗಿರುವ ಚಾಕೋಲೇಟ್ ಹೀರೋ ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಸದ್ಯ ಟ್ರೆಂಡಿಂಗ್ ನಲ್ಲಿರುವ ಸೆಲೆಬ್ರಿಟಿಗಳು.

ಸ್ಪೈನ್ ಮತ್ತು ಶ್ರೀಲಂಕಾದ ಸಮುದ್ರ ತೀರದಲ್ಲಿ ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥ ಮಾಡಿಕೊಂಡ ನಂತರ ಈ ಜೋಡಿ ಇನ್ನೊಂದು 'secret vacation' ಗೆ ತೆರಳಿದೆ ಎನ್ನುವುದು ಸದ್ಯದ ಹಾಟ್ ಸುದ್ದಿ.

ತಂದೆ ರಿಷಿ ಕಪೂರ್, ತಾಯಿ ನೀತು ಕಪೂರ್ ಎಷ್ಟೇ ಖಡಕ್ಕಾಗಿ 'ಬೇಟಾ.. ಚುಪ್ ಚಾಪ್ ಗರ್ ಮೆ ಬೈಟೋ' ಎಂದರೂ ಮಗನ ಪ್ರಣಯದ ಆಟ ಮುಂದುವರಿಯುತ್ತಲೇ ಇದೆ.

ಇವರಿಬ್ಬರ ಪ್ರಣಯದಾಟಕ್ಕೆ ಸಾಕ್ಷಿಯಾಗಲೋ ಏನೋ ಈ ಬಾರಿ ಇವರ ಜೊತೆ ಇನ್ನೊಬ್ಬರೂ ಹೋಗಿದ್ದಾರೆ ಎನ್ನುವುದು ಬಾಲಿವುಡ್ ನಿಂದ ತೇಲಿ ಬರುತ್ತಿರುವ ಸುದ್ದಿ.

ರಣಬೀರ್ ಕಪೂರ್ ಪ್ರಮುಖ ಭೂಮಿಕೆಯಲ್ಲಿರುವ ಇತ್ತೀಚೆಗೆ ಬಿಡುಗಡೆಯಾದ ಬೇಷರಮ್ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟೇನೂ ಸದ್ದು ಮಾಡಿಲ್ಲ.

ಚಿತ್ರದ ಪ್ರೊಮೊಷನ್, ಸಂದರ್ಶನ ಹೀಗೆ.. ಹಾಗೆ ಎಂದು ಶಾಣೆ ಬ್ಯೂಸಿಯಾಗಿದ್ದ ರಣಬೀರ್ ಕಪೂರ್ ಸ್ವಲ್ಪ ವಿಶ್ರಾಂತಿ ಬಯಸಿ ಪ್ರೇಯಸಿ ಕತ್ರಿನಾ ಕೈಫ್ ಜೊತೆ ದೂರದ ಊರಿಗೆ ವಿಮಾನ ಹತ್ತಿದ್ದಾರೆ.

ಆಯನ್ ಮುಖರ್ಜಿ

ಇವರಿಬ್ಬರ ಜೊತೆ ರಣಬೀರ್ ಆಪ್ತ ಸ್ನೇಹಿತ 'ಯೇ ಜವಾನಿ ಹಾಯ್ ದಿವಾನಿ' ಚಿತ್ರದ ನಿರ್ದೇಶಕ ಆಯನ್ ಮುಖರ್ಜಿ ಕೂಡಾ ತೆರಳಿದ್ದಾರೆ. ಶಿವಪೂಜೆಯ ಮಧ್ಯೆ ಕರಡಿ ಯಾತಕ್ಕೇ, ಈ ವಯ್ಯಾನಿಗೆ ಅಲ್ಲಿ ಏನು ಕೆಲಸ ಎಂದು ಬಾಲಿವುಡ್ಡಿನ ಕೆಲವು ಹಿತಶತ್ರುಗಳು ಮಾತನಾಡಿ ಕೊಳ್ಳುತ್ತಿದ್ದಾರಂತೆ.

ಈ ಬಾರಿ ಎಲ್ಲಿಗೆ

ಬಣ್ಣದ ಲೋಕದವರು ಎಷ್ಟೇ ಗುಟ್ಟಾಗಿ ನಡೆದು ಕೊಂಡರೂ ಅದು ಸುದ್ದಿ ಆಗಿಯೇ ಆಗುತ್ತೆ. ಅದಕ್ಕಾಗಿ ಅವರು ಮಾಧ್ಯಮದವರ ಮೇಲೆ ಬೇಜಾರು ಮಾಡಿಕೊಂಡರೆ ಹೇಗೆ. ಅಂದ ಹಾಗೆ ಈ ಮೂವರು ಸದ್ಯ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿ ಸುತ್ತಾಡುತ್ತಿದ್ದಾರೆ. ಸ್ಪೈನ್ ಬೀಚ್ ನಲ್ಲಿ ಸುತ್ತಾಡಿದ್ದ ರಣಬೀರ್ ಮತ್ತು ಕತ್ರಿನಾ ಬಿಕನಿ ಫೋಟೋಗಳು ಇಂಟರ್ನೆಟ್ಟಿನಲ್ಲಿ ಹರಿದಾಡಲು ಶುರುವಾದಾಗ ಕತ್ರಿನಾ, ರಣಬೀರ್, ರಿಷಿ ಕಪೂರ್ ಎಲ್ಲರೂ ಮಾಧ್ಯಮದವರನ್ನು ತರಾಟೆಗೆ ತೆಗೆದುಕೊಂಡಿದ್ದರು.

Secret Vacation

ರಣಬೀರ್ ಕಪೂರ್ ಈ vacation ಅನ್ನು ಗುಟ್ಟಾಗಿರಿಸಲು ಹರ ಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ರಣಬೀರ್ ಅಭಿಮಾನಿಯೊಬ್ಬ ಇವರಿಬ್ಬರು ಜೊತೆಗಿರುವ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾನೆ. ರಣಬೀರ್ ಇತ್ತೀಚೆಗಷ್ಟೇ ತಂದೆ ರಿಷಿ ಕಪೂರ್ ಜೊತೆ ಬೇಷರಮ್ ಚಿತ್ರದ ಪ್ರೊಮೊಗಾಗಿ ಅಮೆರಿಕಾಕ್ಕೆ ಹೋಗಿ ಬಂದಿದ್ದರು.

ಅಪಾರ್ಟ್ಮೆಂಟ್

ಇನ್ನೊಂದು ಸುದ್ದಿಯ ಪ್ರಕಾರ ನ್ಯೂಯಾರ್ಕಿನ ಪ್ರಸಿದ್ದ ಐಷಾರಾಮಿ ಬಿಗ್ ಆಪಲ್ ಅಪಾರ್ಟ್ಮೆಂನಲ್ಲಿ ರಣಬೀರ್ ಕಪೂರ್ ಮನೆಯೊಂದನ್ನು ಖರೀದಿಸಲಿದ್ದಾರೆ ಎನ್ನುವುದು. ಇದು ಅನಧಿಕೃತ ಸುದ್ದಿ, ಇದಕ್ಕೆ ಕಪೂರ್ ಖಾಂದಾನಿನ ಯಾರೊಬ್ಬರೂ ಅಧಿಕೃತ ಮುದ್ರೆ ಒತ್ತಿಲ್ಲ.

ವರ್ಕ್ ವೀಸಾ

ಬ್ರಿಟಿಷ್ ಹಾಂಕಾಗ್ ನಲ್ಲಿ ಜನಿಸಿರುವ ಕತ್ರಿನಾ ಕೈಫ್ ಸದ್ಯ ಭಾರತದಲ್ಲಿ ವರ್ಕ್ ವೀಸಾ ಮೇಲೆ ಇದ್ದಾರೆ. ದೇಶದ ಪ್ರತಿಷ್ಠಿತ ಕಲಾ ಕುಟುಂಬ ಕಪೂರ್ ಖಾಂದಾನಿನ ಸೊಸೆಯಾಗಲು ಕತ್ರಿನಾಗೆ ಸದ್ಯ approval ಬರಬೇಕಾಗಿರುವುದು ರಣಬೀರ್ ತಾಯಿ ನೀತೂ ಕಪೂರ್ ನಿಂದ ಎನ್ನುತ್ತದೆ ಬಾಲಿವುಡ್ ಚಿತ್ರ ಜಗತ್ತು.

English summary
Bollywood actor Ranbir Kapoor is reportedly on another 'secret' vacation with his lady love Katrina Kaif in New York. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada