»   » ಹಲವರ ಜೊತೆ ದೈಹಿಕ ಸಂಪರ್ಕ ನಿಜ ಎಂದ ನಟ

ಹಲವರ ಜೊತೆ ದೈಹಿಕ ಸಂಪರ್ಕ ನಿಜ ಎಂದ ನಟ

By: ಉದಯರವಿ
Subscribe to Filmibeat Kannada
Ranveer Singh
"ನಾನೇನು ಸತ್ಯ ಹರಿಶ್ಚಂದ್ರನೂ ಅಲ್ಲ ಶ್ರೀರಾಮಚಂದ್ರನು ಅಲ್ಲ. ಹಲವು ಮಹಿಳೆಯರೊಂದಿಗೆ ನಾನು ಪಲ್ಲಂಗ ಹಂಚಿಕೊಂಡಿದ್ದೇನೆ" ಎಂದು ತಮ್ಮ ಖಾಸ್ ಬಾತನ್ನು ಬಿಚ್ಚಿಟ್ಟಿದ್ದಾನೆ ಬಾಲಿವುಡ್ ನ ನಿಂಬೆಹುಳಿ ಹೀರೋ ರಣವೀರ್ ಸಿಂಗ್.

"ಇದುವರೆಗೂ ನನ್ನ ಜೀವನದಲ್ಲಿ ಬಹಳಷ್ಟು ಮಹಿಳೆಯರು ಬಂದು ಹೋಗಿದ್ದಾರೆ. ಸಾಕಷ್ಟು ಮಹಿಳೆಯರ ಜೊತೆ ಹಾಸಿಯಲ್ಲಿ ಒಂದಾಗಿದ್ದೇನೆ. ಅವರೊಂದಿಗೆಲ್ಲಾ ಒಂದೊಂದು ರಾತ್ರಿಯನ್ನು ಕಳೆದಿದ್ದೇನೆ. ಮದುವೆ ಬಗ್ಗೆ ನನಗೆ ಅಂತಹ ನಂಬಿಕೆ ಏನು ಇಲ್ಲ" ಎಂದಿದ್ದಾನೆ ಪ್ಲೇಬಾಯ್.

ಒಂದು ವೇಳೆ ಶಾಸ್ತ್ರ, ಸಂಪ್ರದಾಯದ ಪ್ರಕಾರ ವಿಧಿವತ್ತಾಗಿ ಮದುವೆಯಾದರೆ ಮಕ್ಕಳಂತೂ ಗ್ಯಾರಂಟಿ ಮಾಡುತ್ತೇನೆ. ಮದುವೆಯಾಗುವುದೇ ಮಕ್ಕಳು ಮಾಡೋದಕ್ಕೆ. ಮಕ್ಕಳನ್ನು ಮಾತ್ರ ತಬ್ಬಲಿ ಮಾಡಬಾರದು ಎಂದು ಏನೇನೋ ಬಡಬಡಿಸಿದ್ದಾನೆ ಪುಣ್ಯಾತ್ಮ.

ಅಭಿನಯಿಸಿದ್ದು ಕೇವಲ ಬೆರಳೆಣಿಕೆಯಷ್ಟೇ ಚಿತ್ರಗಳಾದರೂ ಈತನ ಹೆಸರಂತೂ ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡಿತು. ಅದರಲ್ಲಿ ಮುಖ್ಯವಾಗಿ 'ಬ್ಯಾಂಡ್ ಬಾಜಾ ಬಾರಾತ್' ಚಿತ್ರರ ಅನುಷ್ಕಾ ಶರ್ಮಾ ಜೊತೆ ಗಾಸಿಪ್ ಗಳು ಜೋರಾಗಿದ್ದವು.

ಇಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದದ್ದು ಆಗಾಗ ಬಾಲಿವುಡ್ ನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಬಳಿಕ ಅದು ತಣ್ಣಗಾಗುತ್ತಿದ್ದಂತೆ ರಣವೀರ್ ಹೆಸರು ಸೋನಾಕ್ಷಿ ಸಿನ್ಹಾ ಜೊತೆ ಕೇಳಿಬಂತು. ಸದ್ಯಕ್ಕೆ ರಾಮ್ ಲೀಲಾ ಚಿತ್ರದಲ್ಲಿ ಅಭಿನಯಿಸುತ್ತಿರುವ ದೀಪಿಕಾ ಪಡುಕೋಣೆ ಜೊತೆಗೂ ಗುಸುಗುಸು ಹರಿದಾಡುತ್ತಿದೆ.

ಒಮ್ಮೆ ದೀಪಿಕಾ ದುಬೈನಲ್ಲಿದ್ದರು. ಆಗ ರಣವೀರ್ ಆಕೆಯನ್ನೂ ಅಲ್ಲಿಗೂ ಹುಡುಕಿಕೊಂಡು ಹೋಗಿದ್ದ. ಇವರಿಬ್ಬರ ನಡುವೆ ಏನಾಯಿತೋ ಏನು ಕಥೆನೋ. ಒಟ್ಟಿನಲ್ಲಿ ಇಬ್ಬರೂ ತುಂಬ ಹತ್ತಿರವಾಗಿದ್ದಾರೆ. ಅಂದಹಾಗೆ ಸೋನಂ ಕಪೂರ್ ಹಾಗೂ ರಿಯಾ ಕಪೂರ್ (ಅನಿಲ್ ಕಪೂರ್ ಮಕ್ಕಳು) ಅವರ ಸೋದರ ಸಂಬಂಧಿ ಈ ರಣವೀರ್ ಸಿಂಗ್.

English summary
Bollywood actor Ranveer Singh recently confessed that he has bedded many women in his life. He deliberately admits that he has had many sexual interactions with women in his life till date.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada