Don't Miss!
- News
ವಂಚನೆ ಪ್ರಕರಣ: ಮತ್ತೋರ್ವ ನಟಿಯನ್ನು ಮದುವೆಯಾಗಲು ಬಯಸಿದ್ದ ಸುಕೇಶ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Technology
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ಯಾಮರಾ ಮುಂದೆ ಬೆತ್ತಲೆ ಪೋಸ್ ಕೊಡಲು ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಬಲು ದೊಡ್ಡದು!
ಬಾಲಿವುಡ್‌ನ ಹೈಪರ್ ಆಕ್ಟಿವ್ ಹೀರೊ ರಣ್‌ವೀರ್ ಸಿಂಗ್. ತನ್ನ ವಿಶಿಷ್ಟ ಕಾಸ್ಟ್ಯೂಮ್‌ನಿಂದಲೇ ಹಲ್‌ಚಲ್ ಎಬ್ಬಿಸುತ್ತಿದ್ದ ನಟನೀತ. ಆದರೆ, ಕೆಲವು ದಿನಗಳಿಂದ ಚಿತ್ರ-ವಿಚಿತ್ರ ವಸ್ತ್ರಗಳಗೆ ಬಿಚ್ಚಿಟ್ಟು ಬೆತ್ತಲಾಗಿ ಫೋಸ್ ಕೊಟ್ಟಿದ್ದ ಅದೇ ನಟನನ್ನು ಕಂಡು ಕೆಲವರು ಹೌಹಾರಿದ್ದಾರೆ. ಈ ಫೋಟೊಗಳು ವಿವಾದಕ್ಕೂ ಎಡೆ ಮಾಡಿಕೊಟ್ಟಿವೆ.
ಸೋಶಿಯಲ್ ಮೀಡಿಯಾದಲ್ಲಿ ರಣ್‌ವೀರ್ ಸಿಂಗ್ ವಿವಾದಾತ್ಮಕ ಬೆತ್ತಲೆ ಫೋಟೊಗಳು ಸಂಚಲನ ಸೃಷ್ಟಿಸಿವೆ. ಈ ಫೋಟೊಗಳು ಕೆಲವರಿಗೆ ಕಿರಿಕಿರಿ ಎನಿಸಿಲ್ಲ. ಅದೇ ಮತ್ತೆ ಕೆಲವರಿಗೆ ಇದೇ ಫೋಟೊಗಳು ಕಷ್ಟ ಎನಿಸಿವೆ. ಹಲವು ಈ ಬೋಲ್ಡ್ ಪೋಸ್‌ಗಾಗಿ ರಣ್‌ವೀರ್ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ. ಕೆಲವರು ದೂರು ದಾಖಲಿಸಿದ್ದು, ಎಫ್‌ಐಆರ್ ಕೂಡ ದಾಖಲಾಗಿದೆ.
ಪುರುಷರ
ಬೆತ್ತಲೆ
ಫೋಟೊವನ್ನು
ಮಹಿಳೆಯರು
ನೋಡಲು
ಇಷ್ಟ
ಪಡುತ್ತಾರಾ?
ಸಮೀಕ್ಷೆಗೆ
ಇಳಿದ
RGV!
ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದೇನೋ ಸರಿ. ಆದರೆ, ಈ ಫೋಸ್ ನೀಡಲು ರಣ್‌ವೀರ್ ಸಿಂಗ್ ಎಷ್ಟು ಹಣ ಪಡೆದಿರಬಹುದು? ಪೇಪರ್ ಮ್ಯಾಗಜೀನ್ ರಣ್‌ವೀರ್ ಸಿಂಗ್‌ಗೆ ಎಷ್ಟು ಸಂಭಾವನೆ ನೀಡಿರಬಹುದು? ಎಂಬ ಚರ್ಚೆಯಂತೂ ಹುಟ್ಟುಕೊಂಡಿತ್ತು. ಸೋಶಿಯಲ್ ಮೀಡಿಯಾದಲ್ಲಿ ಬಾಲಿವುಡ್ ದುಬಾರಿ ಮೊತ್ತವನ್ನೇ ಪಡೆದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಬಾಲಿವುಡ್
ನಟ
ರಣ್‌ವೀರ್
ಸಿಂಗ್
ವಿರುದ್ಧ
ಎಫ್‌ಐಆರ್
ದಾಖಲು

ದುಬಾರಿ ಸಂಭಾವನೆ
ರಣ್‌ವೀರ್ ಸಿಂಗ್ ಒಂದು ಸಿನಿಮಾಗೆ ಪಡೆಯುವ ಸಂಭಾವನೆಗಿಂತ ಮೂರು ಪಟ್ಟು ಹೆಚ್ಚು ಪಡೆದಿದ್ದಾರೆ ಎಂಬ ಬಗ್ಗೆ ಸುದ್ದಿಯಾಗಿದೆ. ರಣ್‌ವೀರ್ ಸಿಂಗ್ ಕಡಿಮೆ ಮೊತ್ತಕ್ಕಂತೂ ಇಷ್ಟು ದೊಡ್ಡ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವೇ ಇಲ್ಲ ಅಂತ ಬಾಲಿವುಡ್ ಮಾತಾಡಿಕೊಳ್ಳುತ್ತಿದೆ. ತನ್ನ ವೃತ್ತಿ ಬದುಕನ್ನೇ ಮುಂದಿಟ್ಟು ಇಂತಹ ಬೋಲ್ಡ್ ಫೋಟೊಶೂಟ್‌ನಲ್ಲಿ ನಟಿಸುವುದಕ್ಕೆ ದೊಡ್ಡ ಮೊತ್ತವನ್ನೇ ಸಂಭಾವನೆಯಾಗಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.
|
ಫೋಟೊಶೂಟ್‌ಗೆ ಪಡೆದಿದ್ದೆಷ್ಟು?
ಕಳೆದೆರಡು ದಿನಗಳಿಂದ ರಣ್‌ವೀರ್ ಸಿಂಗ್ ಪಡೆದ ಸಂಭಾವನೆ ಬಗ್ಗೆ ಒಂದು ಟ್ವೀಟ್ ಓಡಾಡುತ್ತಿತ್ತು. ಓವರ್‌ಸೀಸ್ ಸೆನ್ಸಾರ್ ಬೋರ್ಡ್‌ನ ಸದಸ್ಯ ಉಮೈರ್ ಸಂಧು ರಣ್‌ವೀರ್ ಸಿಂಗ್ ಪಡೆದಿರಬಹುದಾದ ಸಂಭಾವನೆ ಬಗ್ಗೆ ಟ್ವೀಟ್ ಮಾಡಿದ್ದರು. " ಶಾಕಿಂಗ್ ರಣ್‌ವೀರ್ ಸಿಂಗ್ ಬೆತ್ತಲೆ ಫೋಟೊಶೂಟ್‌ಗೆ ಸುಮಾರು 55 ಕೋಟಿ ಸಂಭಾವನೆ ಪಡೆದಿದ್ದಾರೆ." ಎಂದು ಟ್ವೀಟ್ ಮಾಡಿದ್ದರು. ಅದೇ ಟ್ವೀಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿದೆ.

ಒಂದು ಸಿನಿಮಾಗೆ ಪಡೆಯುವ ಹಣವೆಷ್ಟು?
ರಣ್‌ವೀರ್ ಸಿಂಗ್ ಬಾಲಿವುಡ್‌ನ ಮೋಸ್ಟ್ ಸಕ್ಸಸ್‌ಫುಲ್ ನಟ. ಈ ಹಿಂದೆ ಬಿಡುಗಡೆಯಾದ ಎರಡು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿದ್ದು ಬಿಟ್ಟರೆ, ರಣ್‌ವೀರ್ ಸಿಂಗ್ ತನ್ನ ಕರಿಯರ್‌ನಲ್ಲಿ ದೊಡ್ಡ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಬಾಲಿವುಡ್ ಮೂಲಗಳ ಪ್ರಕಾರ, ರಣ್‌ವೀರ್ ಸಿಂಗ್ ಒಂದು ಸಿನಿಮಾ ಸುಮಾರು 20 ಕೋಟಿಯಷ್ಟು ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಹೀಗಾಗಿ ಒಂದು ಫೋಟೊಶೂಟ್‌ಗೆ ಸಿನಿಮಾಗಿಂತ ಮೂರು ಹೆಚ್ಚು ಪಡೆಯಲು ಸಾಧ್ಯವೇ ಎಂಬ ಚರ್ಚೆ ಕೂಡ ನಡೆಯುತ್ತಿದೆ.

ಬೆತ್ತಲೆ ಪೋಟೊಶೂಟ್ ಉದ್ದೇಶವೇನು?
ಪೇಪರ್ ಮ್ಯಾಗಜೀನ್ ಸಂಸ್ಥೆ ಈ ಬೋಲ್ಡ್ ಫೋಟೊಶೂಟ್‌ಗೆ ಮುಂದಾಗಿತ್ತು. ಅಮೆರಿಕದ ನಟ ಬರ್ಟ್ ರೇನಾಲ್ಡ್ ಅವರಿಗೆ ಗೌರವ ಸೂಚಿಸುವ ಸಲುವಾಗಿ ರಣ್‌ವೀರ್ ಜೊತೆ ಈ ಫೋಟೊಶೂಟ್ ಮಾಡಲಾಗಿತ್ತು. ಅಮೆರಿಕದ ನಟ ಹೀಗೆ ಮ್ಯಾಗಜೀನ್‌ಗಾಗಿ ಫೋಸ್ ನೀಡಿದ್ದರು. ಅದೇ ಈಗ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ನಟನ ವಿರುದ್ಧ ಎಫ್‌ಐಆರ್ ದಾಖಲಾಗುವಂತೆ ಮಾಡಿದೆ. ಆದರೆ ಮತ್ತೆ ಕೆಲವರು ರಣ್‌ವೀರ್ ಸಿಂಗ್ ಬೆಂಬಲಕ್ಕೆ ನಿಂತಿರುವುದೂ ಕೂಡ ಚರ್ಚೆಯಾಗುತ್ತಿದೆ.