For Quick Alerts
  ALLOW NOTIFICATIONS  
  For Daily Alerts

  ಸಂಭಾವನೆ ಹೆಚ್ಚಿಸಿಕೊಂಡ ರಶ್ಮಿಕಾ ಮಂದಣ್ಣ: ಈಗ ದುಪ್ಪಟ್ಟು!

  |

  ನಟಿ ರಶ್ಮಿಕಾ ಮಂದಣ್ಣ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ. ಒಂದರ ಹಿಂದೆ ಒಂದು ದೊಡ್ಡ ಅವಕಾಶಗಳು ಅವರನ್ನು ಅರಸಿ ಬರುತ್ತಿವೆ. ಸ್ಯಾಂಡಲ್‌ವುಡ್‌ನಿಂದ ಸಿನಿಮಾ ಜರ್ನಿ ಪ್ರಾರಂಭಿಸಿ, ತೆಲುಗು, ತಮಿಳು ಬಳಿಕ ಇದೀಗ ಬಾಲಿವುಡ್‌ಗೂ ಕಾಲಿಟ್ಟಿದ್ದಾರೆ.

  ಸಿನಿಮಾಗಳ ಅವಕಾಶ ಹೆಚ್ಚಾಗುತ್ತಿರುವ ಬೆನ್ನಲ್ಲೆ ರಶ್ಮಿಕಾ ಮಂದಣ್ಣರ ಸಂಭಾವನೆಯೂ ಏರುತ್ತಲೇ ಸಾಗುತ್ತಿದೆ. ಕೆಲವು ಲಕ್ಷಗಳ ಸಂಭಾವನೆಯಿಂದ ವೃತ್ತಿ ಜೀವನ ಆರಂಭಿಸಿದ ರಶ್ಮಿಕಾ ಇದೀಗ ದಕ್ಷಿಣ ಭಾರತದ ದುಬಾರಿ ನಟಿಯರಲ್ಲಿ ಒಬ್ಬರಾಗಿದ್ದಾರೆ.

  ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂ ಬ್ಯಾನ್!ರಶ್ಮಿಕಾ ಮಂದಣ್ಣ ನಟನೆಯ ಸೀತಾ ರಾಮಂ ಬ್ಯಾನ್!

  ನಟ-ನಟಿಯರ ಸಂಭಾವನೆ ದುಬಾರಿ ಆಗಿಬಿಟ್ಟಿದೆ ಎಂದು ನಿರ್ಮಾಪಕರು ದೂರುತ್ತಿರುವ ಸಮಯದಲ್ಲಿಯೇ ರಶ್ಮಿಕಾ ಮಂದಣ್ಣ ತಮ್ಮ ಸಂಭಾವನೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಸಿಕೊಂಡಿದ್ದಾರೆ. ಅದೂ ಒಮ್ಮೆಲೆ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ ಈ ನಟಿ.

  ರಶ್ಮಿಕಾರ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದೆ

  ರಶ್ಮಿಕಾರ ಫ್ಯಾನ್ ಫಾಲೋವಿಂಗ್ ಹೆಚ್ಚಾಗಿದೆ

  ಇತ್ತೀಚಿನ ದಿನಗಳಲ್ಲಿ ನಟಿ ರಶ್ಮಿಕಾ ಮಂದಣ್ಣಗೆ ಭಾರಿ ಹೆಸರು ಗಳಿಸಿಕೊಟ್ಟ ಸಿನಿಮಾ ಎಂದರೆ ಅದು 'ಪುಷ್ಪ'. ಆ ಸಿನಿಮಾದ ಬಳಿಕ ರಶ್ಮಿಕಾರ ಫ್ಯಾನ್ಸ್ ಫಾಲೋವಿಂಗ್ ಹೆಚ್ಚಾಗಿದೆ. ಇದೀಗ 'ಪುಷ್ಪ 2' ಸಿನಿಮಾದಲ್ಲಿಯೂ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದು ಈ ಸಿನಿಮಾಕ್ಕೆ ಅವರ ಸಂಭಾವನೆ ದುಪ್ಪಟ್ಟಾಗಿದೆ. 'ಪುಷ್ಪ' ಮೊದಲ ಭಾಗಕ್ಕೆ ಎರಡು ಕೋಟಿ ಪಡೆದಿದ್ದ ರಶ್ಮಿಕಾ ಇದೀಗ 'ಪುಷ್ಪ 2' ಸಿನಿಮಾಕ್ಕೆ ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ.

  ಪ್ರೀತಿ ಹುಟ್ಟಿದ್ದೂ ನಿಜ.. ಬ್ರೇಕ್ ಆಗಿದ್ದೂ ನಿಜ: 2 ವರ್ಷದಿಂದ ರಶ್ಮಿಕಾ ಸಿಂಗಲ್!ಪ್ರೀತಿ ಹುಟ್ಟಿದ್ದೂ ನಿಜ.. ಬ್ರೇಕ್ ಆಗಿದ್ದೂ ನಿಜ: 2 ವರ್ಷದಿಂದ ರಶ್ಮಿಕಾ ಸಿಂಗಲ್!

  'ಪುಷ್ಪ 2'ಕ್ಕೆ ಭಾರಿ ಸಂಭಾವನೆ

  'ಪುಷ್ಪ 2'ಕ್ಕೆ ಭಾರಿ ಸಂಭಾವನೆ

  'ಪುಷ್ಪ 2' ಸಿನಿಮಾಕ್ಕೆ ನಾಲ್ಕು ಕೋಟಿ ಪಡೆವ ಮೂಲಕ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟಿ ಎನಿಸಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ. ಪೂಜಾ ಹೆಗ್ಡೆ ಹೆಸರಲ್ಲಿದ್ದ ದಾಖಲೆಯನ್ನು ತಮ್ಮ ಹೆಸರಿನ ಮಾಡಿಕೊಂಡಿದ್ದಾರೆ ನಟಿ ರಶ್ಮಿಕಾ. ಕೆಲವು ದಿನಗಳ ಹಿಂದೆ ಬಿಡುಗಡೆ ಆದ ತಮಿಳಿನ 'ದಿ ಲಿಜೆಂಡ್' ಸಿನಿಮಾಕ್ಕೆ ಊರ್ವಶಿ ರೌಟೆಲ್ಲಾ 11 ಕೋಟಿ ಪಡೆದಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ ಆ ಲೆಕ್ಕಾಚಾರ ಬೇರೆ.

  ರಶ್ಮಿಕಾ ಕೈಲಿವೆ ಹಲವು ಸಿನಿಮಾಗಳು

  ರಶ್ಮಿಕಾ ಕೈಲಿವೆ ಹಲವು ಸಿನಿಮಾಗಳು

  ರಶ್ಮಿಕಾ ಮಂದಣ್ಣ ಕೈಲಿ ಈಗ ಹಲವಾರು ಸಿನಿಮಾಗಳಿವೆ. ರಶ್ಮಿಕಾ ನಟಿಸಿರುವ ಬಾಲಿವುಡ್‌ ಸಿನಿಮಾಗಳಾದ 'ಮಿಷನ್ ಮಜ್ನು' ಹಾಗೂ ಅಮಿತಾಬ್ ಬಚ್ಚನ್ ಜೊತೆ ನಟಿಸಿರುವ 'ಗುಡ್ ಬೈ' ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಎರಡೂ ಸಿನಿಮಾಗಳು ಶೀಘ್ರದಲ್ಲಿಯೇ ತೆರೆಗೆ ಅಪ್ಪಳಿಸಲಿವೆ. ತಮಿಳಿನಲ್ಲಿ ನಟ ವಿಜಯ್ ಜೊತೆಯಾಗಿ ಹೊಸ ಸಿನಿಮಾವೊಂದನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಮಲಯಾಂ ಚಿತ್ರರಂಗಕ್ಕೂ ರಶ್ಮಿಕಾ ಕಾಲಿಡುವ ಸಾಧ್ಯತೆ ಇದೆ. ಬಾಲಿವುಡ್‌ನಲ್ಲಿ ಸಹ ಹೊಸ ಸಿನಿಮಾ ಒಂದರ ಆಫರ್ ರಶ್ಮಿಕಾರನ್ನು ಅರಸಿ ಬಂದಿದೆಯಂತೆ.

  ಬಾಲಿವುಡ್‌ನಲ್ಲೇ ಸೆಟಲ್ ಆಗಲಿದ್ದಾರೆ ರಶ್ಮಿಕಾ

  ಬಾಲಿವುಡ್‌ನಲ್ಲೇ ಸೆಟಲ್ ಆಗಲಿದ್ದಾರೆ ರಶ್ಮಿಕಾ

  ಇದರ ಹೊರತಾಗಿ ರಶ್ಮಿಕಾ ಮಂದಣ್ಣ ತಮ್ಮ ಖಾಸಗಿ ಜೀವನದ ವಿಷಯವಾಗಿಯೂ ಇತ್ತೀಚೆಗೆ ಚರ್ಚೆಯಲ್ಲಿದ್ದರು. ವಿಜಯ್ ದೆವರಕೊಂಡ ಜೊತೆಗಿನ ರಶ್ಮಿಕಾರ ಸಂಬಂಧದ ಬಗ್ಗೆ ಸುದ್ದಿಗಳು ಮತ್ತೆ ಮುನ್ನೆಲೆಗೆ ಬಂದಿದ್ದವು. ಆದರೆ ರಶ್ಮಿಕಾ ಹಾಗೂ ವಿಜಯ್ ನಡುವೆ ಸದ್ಯಕ್ಕೆ ಆತ್ಮೀಯತೆ ಇಲ್ಲವೆಂದು ಅವರು ಪರಸ್ಪರ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ರಶ್ಮಿಕಾ ಪ್ರಸ್ತುತ ಸಿಂಗಲ್ ಆಗಿದ್ದು, ಬಾಲಿವುಡ್‌ನಲ್ಲಿಯೆ ಸೆಟಲ್ ಆಗುವ ಉದ್ದೇಶದಿಂದ ಅಲ್ಲಿಯೇ ಹೊಸ ಮನೆಯೊಂದನ್ನು ಮಾಡಿಕೊಂಡಿದ್ದಾರೆ.

  English summary
  Rashmika Mandanna hikes her remuneration for Pushpa 2 movie. Rashmika is now costliest south Indian actress.
  Monday, August 8, 2022, 10:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X