Don't Miss!
- Automobiles
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- Sports
Border-Gavaskar Trophy: ಭಾರತ ವಿರುದ್ಧ ಮೊದಲ ಪಂದ್ಯದಲ್ಲಿ ಈ ವೇಗಿ ಬೌಲಿಂಗ್ ಮಾಡಲ್ಲ; ಪ್ಯಾಟ್ ಕಮ್ಮಿನ್ಸ್
- News
Namma Metro: ನೆಲಮಂಗಲದ BIEC ವರೆಗೂ ಗ್ರೀನ್ ಲೈನ್ ವಿಸ್ತರಣೆ- ಆಸ್ತಿ ಖರೀದಿದಾರರಿಗೆ ಸ್ಪರ್ಗ ಸೃಷ್ಟಿ, ಯಾರ್ಯಾರಿಗೆ ಲಾಭ?
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಐಟಂ ಸಾಂಗ್‌ನಲ್ಲಿ ರಶ್ಮಿಕಾ ಮಂದಣ್ಣ! ಪಡೆಯುತ್ತಿದ್ದಾರೆ ದುಬಾರಿ ಸಂಭಾವನೆ
ನಟಿ ರಶ್ಮಿಕಾ ಮಂದಣ್ಣ ಚತುರ್ಭಾಷಾ ತಾರೆಯಾಗಿ ಬಹು ಬೇಡಿಕೆಯಲ್ಲಿದ್ದಾರೆ. ಕನ್ನಡದಿಂದ ಚಿತ್ರರಂಗ ಪ್ರವೇಶಿಸಿದ ರಶ್ಮಿಕಾ ಮಂದಣ್ಣ ಇದೀಗ ತೆಲುಗು, ಬಾಲಿವುಡ್, ತಮಿಳು ಚಿತ್ರರಂಗಗಳಲ್ಲಿ ಮಿಂಚುತ್ತಿದ್ದಾರೆ.
ನಾಯಕಿಯಾಗಿ ದೊಡ್ಡ ದೊಡ್ಡ ಸ್ಟಾರ್ ನಟರೊಟ್ಟಿಗೆ ರಶ್ಮಿಕಾ ತೆರೆ ಹಂಚಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿ, ಪುನೀತ್ ರಾಜ್‌ಕುಮಾರ್, ದರ್ಶನ್, ಗಣೇಶ್ ಅವರೊಟ್ಟಿಗೆ ನಟಿಸಿದ್ದ ರಶ್ಮಿಕಾ ತೆಲುಗಿನಲ್ಲಿ ವಿಜಯ್ ದೇವರಕೊಂಡ, ಅಲ್ಲು ಅರ್ಜುನ್, ಮಹೇಶ್ ಬಾಬು ಅಂಥಹಾ ಸ್ಟಾರ್‌ಗಳೊಟ್ಟಿಗೆ ನಟಿಸಿದರು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್, ತಮಿಳಿನಲ್ಲಿ ಸೂಪರ್ ಸ್ಟಾರ್ ವಿಜಯ್ ಜೊತೆ ನಟಿಸುತ್ತಿದ್ದಾರೆ.
ರಕ್ಷಿತ್
ಮಾತ್ರವಲ್ಲ
ತೆಲುಗಿನ
ನಾಗಶೌರ್ಯ
ಜತೆ
ಕೂಡ
ರಶ್ಮಿಕಾ
ಕಿರಿಕ್
ಮಾಡಿದ್ದಳು;
ಕಿಡಿಕಾರಿದ
ತೋಟಾ
ಪ್ರಸಾದ್!
ನಾಯಕಿಯಾಗಿ ಬಹಳ ಒಳ್ಳೆಯ ಡಿಮ್ಯಾಂಡ್ ಇರುವ ಸಮಯದಲ್ಲಿಯೇ ರಶ್ಮಿಕಾ ಮಂದಣ್ಣ ಇದೀಗ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ. ಮುಂಚೆಯೆಲ್ಲ, ನಾಯಕಿಯಾಗಿ ಬೇಡಿಕೆ ಕಡಿಮೆ ಆದ ನಟಿಯರು ಐಟಂ ಡ್ಯಾನ್ಸ್ ಮಾಡಲು ಒಪ್ಪುತ್ತಿದ್ದರು. ಕರಿಯರ್‌ನ ಅಂಚಿನಲ್ಲಿರುವವರು ಆದರೆ ರಶ್ಮಿಕಾ ತುಸು ಬೇಗನೇ ಐಟಂ ಡ್ಯಾನ್ಸ್ ಮಾಡಲು ಒಪ್ಪಿದ್ದಾರೆ. ವೃತ್ತಿಯ ಪೀಕ್‌ನಲ್ಲಿರುವಾಗಲೇ ಐಟಂ ಹಾಡಿಗೆ ಕುಣಿಯಲು ರಶ್ಮಿಕಾ ಒಪ್ಪಿರುವುದಕ್ಕೆ ದುಬಾರಿ ಸಂಭಾವನೆ ಕಾರಣ ಎನ್ನಲಾಗುತ್ತಿದೆ.

ಐಟಂ ಹಾಡಿನಲ್ಲಿ ರಶ್ಮಿಕಾ ಮಂದಣ್ಣ
ಮಹೇಶ್ ಬಾಬು ನಟಿಸುತ್ತಿರುವ ಮುಂದಿನ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಐಟಂ ಹಾಡೊಂದರಲ್ಲಿ ಹೆಜ್ಜೆ ಹಾಕಲಿದ್ದಾರೆ. ಮಹೇಶ್ ಬಾಬು ನಟನೆಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ರಶ್ಮಿಕಾ ಮಂದಣ್ಣ ಈಗ ಐಟಂ ಹಾಡಿಗೆ ಮಹೇಶ್ ಬಾಬು ಜೊತೆ ಹೆಜ್ಜೆ ಹಾಕಲಿದ್ದಾರೆ. ಆದರೆ ಐದು ನಿಮಿಷದ ಈ ಹಾಡಿಗೆ ರಶ್ಮಿಕಾ ಮಂದಣ್ಣಗೆ ಭಾರಿ ಸಂಭಾವನೆಯನ್ನೇ ನೀಡಲಾಗುತ್ತಿದೆಯಂತೆ. ಅದೇ ಕಾರಣಕ್ಕೆ ರಶ್ಮಿಕಾ ಐಟಂ ಹಾಡಿಗೆ ಕುಣಿಯಲು ಒಪ್ಪಿದ್ದಾರೆ ಎನ್ನಲಾಗುತ್ತಿದೆ.

ಭರ್ಜರಿ ಸಂಭಾವನೆ ಪಡೆಯುತ್ತಿರುವ ರಶ್ಮಿಕಾ
ರಶ್ಮಿಕಾ ಮಂದಣ್ಣ, ಐಟಂ ಹಾಡಿಗೆ ಹೆಜ್ಜೆ ಹಾಕಲು ಬರೋಬ್ಬರಿ ಐದು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಂದೆರಡು ದಿನದ ರಿಹರ್ಸಲ್ ಹಾಗೂ ಒಂದೆರಡು ದಿನದ ಚಿತ್ರೀಕರಣಕ್ಕೆ ರಶ್ಮಿಕಾ ಇಷ್ಟೋಂದು ದುಬಾರಿ ಮೊತ್ತವನ್ನು ಪಡೆಯುತ್ತಿದ್ದಾರೆ. ದುಬಾರಿ ಸಂಭಾವನೆ ಕಾರಣದಿಂದಲೇ ರಶ್ಮಿಕಾ, ಐಟಂ ಹಾಡಿನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಮಾತುಗಳು ಸಹ ಕೇಳಿ ಬರುತ್ತಿವೆ.

ಹಲವು ನಟಿಯರು ಐಟಂ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ
ನಾಯಕಿಯಾಗಿ ನಟಿಸುತ್ತಿರುವಾಗಲೇ ಐಟಂ ಹಾಡಿಗೆ ಕುಣಿದವರಲ್ಲಿ ರಶ್ಮಿಕಾ ಮೊದಲಿಗರೇನೂ ಅಲ್ಲ. ನಾಯಕ ನಟಿಯರು ಐಟಂ ಹಾಡುಗಳಿಗೆ ಸೊಂಟ ಕುಣಿಸುವುದು ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದೆ. ಬಾಲಿವುಡ್‌ನಲ್ಲಿದ್ದ ಈ ಸಂಪ್ರದಾಯ ಕೆಲ ವರ್ಷಗಳಿಂದ ದಕ್ಷಿಣ ಚಿತ್ರರಂಗದಲ್ಲಿಯೂ ಕಾಣಿಸಿಕೊಂಡಿದೆ. ನಟಿ ತಮನ್ನಾ, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್, ಪೂಜಾ ಹೆಗ್ಡೆ ಇನ್ನೂ ಹಲವರು ಐಟಂ ಹಾಡುಗಳಿಗೆ ಸೊಂಟ ಕುಣಿಸಿದ್ದಾರೆ. ನಟಿ ಸಮಂತಾ, 'ಪುಷ್ಪ' ಸಿನಿಮಾದಲ್ಲಿ ಮಾಡಿದ್ದ ಐಟಂ ಹಾಡು ಭಾರಿ ಹಿಟ್ ಆಗಿತ್ತು. ಆ ಹಾಡಿಗೆ ಸಮಂತಾ ಪಡೆದಿದ್ದ ಸಂಭಾವನೆಯೂ ಭಾರಿ ಸದ್ದು ಮಾಡಿತ್ತು.

ರಶ್ಮಿಕಾ ಕೈಯಲ್ಲಿವೆ ಹಲವು ಸಿನಿಮಾಗಳು
ಇನ್ನು ರಶ್ಮಿಕಾ ಮಂದಣ್ಣರ ಸಿನಿಮಾಗಳ ಸಂಗತಿಗೆ ಮರಳುವುದಾದರೆ ಸಾಲು-ಸಾಲು ಹಿಟ್ ನೀಡಿದ್ದ ನಟಿಯ ಕಳೆದೆರಡು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿವೆ. ತೆಲುಗಿನ 'ಆಡುವಾಳ್ಳು ಮೀಕು ಜೋಹಾರ್ಲು' ಹಾಗೂ ರಶ್ಮಿಕಾರ ಮೊದಲ ಹಿಂದಿ ಸಿನಿಮಾ 'ಗುಡ್ ಬೈ' ಹಿಟ್ ಆಗುವಲ್ಲಿ ವಿಫಲವಾಗಿವೆ. ಹಾಗಿದ್ದಾಗಿಯೂ ಹಲವು ಸಿನಿಮಾಗಳಲ್ಲಿ ರಶ್ಮಿಕಾ ಬ್ಯುಸಿಯಾಗಿದ್ದಾರೆ. ವಿಜಯ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ 'ಮಿಷನ್ ಮಜ್ನು' ಸಿನಿಮಾದಲ್ಲಿ ನಟಿಸಿದ್ದಾರೆ. ಈಗ ರಣ್ಬೀರ್ ಕಪೂರ್ ಜೊತೆ 'ಅನಿಮಲ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ 'ಪುಷ್ಪ 2' ಸಿನಿಮಾದಲ್ಲಿಯೂ ನಟಿಸುತ್ತಿದ್ದಾರೆ.