»   » 'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೀರೋ!

'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಹೀರೋ!

Posted By:
Subscribe to Filmibeat Kannada
'ಆಪ್ತಮಿತ್ರ 2' ಚಿತ್ರಕ್ಕೆ ಕ್ರೇಜಿ ಸ್ಟಾರ್ ಹೀರೋ! | Filmibeat Kannada

ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಪೈಕಿ 'ಆಪ್ತಮಿತ್ರ' ಕೂಡ ಒಂದು. 'ಆಪ್ತಮಿತ್ರ' ಸಿನಿಮಾ ಒಂದು ವರ್ಷಕ್ಕೂ ಹೆಚ್ಚು ಕಾಲ ಚಿತ್ರಮಂದಿರದಲ್ಲಿ ಇದ್ದು ದೊಡ್ಡ ಗಳಿಕೆ ಮಾಡಿದ ಸಿನಿಮಾ. ಡಾ.ವಿಷ್ಣುವರ್ಧನ್ ಸಿನಿ ಕೆರಿಯರ್ ನಲ್ಲಿ ಬಂದ ಒಂದು ಮೈಲಿಗಲ್ಲು ಸಿನಿಮಾ.

ಅಂದಹಾಗೆ, ಈಗ ಯಾಕೆ ಮತ್ತೆ 'ಆಪ್ತಮಿತ್ರ' ಸಿನಿಮಾ ಬಗ್ಗೆ ಹೇಳುತ್ತಿದ್ದೀವಿ ಎಂಬ ಕುತೂಹಲ ನಿಮಗೆ ಬರಬಹುದು. ಯಾಕಾಂದ್ರೆ ಈಗ 13 ವರ್ಷಗಳ ಬಳಿಕ ಮತ್ತೆ ಕನ್ನಡದಲ್ಲಿ 'ಆಪ್ತಮಿತ್ರ' ರೀತಿಯೇ 'ಆಪ್ತಮಿತ್ರ 2' ಸಿನಿಮಾ ಬರಲಿದೆಯಂತೆ. 'ಆಪ್ತಮಿತ್ರ' ನಂತರ 'ಆಪ್ತರಕ್ಷಕ' ಸಿನಿಮಾ ಬಂದ್ದಿತ್ತು. ಆದರೆ ಈ ಚಿತ್ರದ ನಂತರ ಇದೀಗ 'ಆಪ್ತಮಿತ್ರ 2' ಎಂಬ ಹೆಸರಿನಲ್ಲಿ ಹೊಸ ಸಿನಿಮಾ ಶುರುವಾಗುತ್ತಿದೆ.

ಅಷ್ಟೆ ಅಲ್ಲದೆ ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ ಈ ಸಿನಿಮಾಗೆ ನಾಯಕ ಎನ್ನುವ ಸುದ್ದಿ ಕೂಡ ಇದೀಗ ಹರಿದಾಡಿದೆ. ಮುಂದೆ ಓದಿ...

ಪಿ.ವಾಸು ನಿರ್ದೇಶನ

'ಆಪ್ತಮಿತ್ರ' ಚಿತ್ರವನ್ನು ನಿರ್ದೇಶಕ ಮಾಡಿದ್ದ ಪಿ.ವಾಸು ಅವರೇ ಈಗ 'ಆಪ್ತಮಿತ್ರ 2' ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರಂತೆ. 'ಶಿವಲಿಂಗ' ನಂತರ 'ಆಪ್ತಮಿತ್ರ 2' ಸಿನಿಮಾವನ್ನು ವಾಸು ಕೈಗೆತ್ತಿಕೊಂಡಿದ್ದಾರೆ.

ರವಿಚಂದ್ರನ್ ನಾಯಕ

'ಆಪ್ತಮಿತ್ರ' ಸಿನಿಮಾದಲ್ಲಿ ವಿಷ್ಣುವರ್ಧನ್ ನಾಯಕನಾಗಿದ್ದರು. ಆದರೆ 'ಆಪ್ತಮಿತ್ರ 2' ಚಿತ್ರಕ್ಕೆ ನಟ ರವಿಚಂದ್ರನ್ ನಾಯಕ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ. ವಿಷ್ಣುವರ್ಧನ್ ಅವರ ಜಾಗಕ್ಕೆ ಸರಿಯಾದ ವ್ಯಕ್ತಿ ರವಿಚಂದ್ರನ್ ಎಂದು ಪಿ.ವಾಸು ಅವರನ್ನು ಆಯ್ಕೆ ಮಾಡಿದ್ದಾರಂತೆ.

'ದೃಶ್ಯ' ಜೋಡಿ

ಈ ಹಿಂದೆ ರವಿಚಂದ್ರನ್ ಮತ್ತು ಪಿ.ವಾಸು 'ದೃಶ್ಯ' ಸಿನಿಮಾ ಮಾಡಿದ್ದರು. ಮಲೆಯಾಳಂ ಭಾಷೆಯ 'ದೃಶ್ಯಂ' ಸಿನಿಮಾದ ರಿಮೇಕ್ ಇದಾಗಿದ್ದು, ನೂರು ದಿನ ಸಿನಿಮಾ ಓಡಿತ್ತು. ಈಗ ಅದೇ ಜೋಡಿ ಮತ್ತೆ ಸಿನಿಮಾ ಮಾಡುವ ತಯಾರಿ ನಡೆಸಿದೆಯಂತೆ.

ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರ

'ಆಪ್ತಮಿತ್ರ 2' ಸಿನಿಮಾದಲ್ಲಿ ರವಿಚಂದ್ರನ್ ಇನ್ವೆಸ್ಟಿಗೇಷನ್ ಆಫೀಸರ್ ಪಾತ್ರದಲ್ಲಿ ನಟಿಸಲಿದ್ದಾರೆ. ರವಿಚಂದ್ರನ್ ಅವರಿಗೂ ಸಿನಿಮಾದ ಕಥೆ ಮತ್ತು ಪಾತ್ರ ಇಷ್ಟವಾಗಿದೆಯಂತೆ. ಆದರೆ ಇನ್ನೂ ಫೈನಲ್ ಮಾತುಕತೆ ಬಾಕಿ ಇದೆಯಂತೆ.

'ಅರನ್ಮನೈ' ರಿಮೇಕ್ ಚಿತ್ರ

'ಆಪ್ತಮಿತ್ರ 2' ಸಿನಿಮಾ ತಮಿಳಿನ ಹಾರರ್ ಚಿತ್ರ 'ಅರನ್ಮನೈ' ಸಿನಿಮಾ ರಿಮೇಕ್ ಆಗಿದೆ. 2014ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರವನ್ನು ನಟಿ ಖುಷ್ಬು ಅವರ ಪತಿ ಸುಂದರ್.ಸಿ ನಟಿಸಿ ನಿರ್ದೇಶನ ಮಾಡಿದ್ದರು.

'ಆಪ್ತಮಿತ್ರ' 'ಆಪ್ತರಕ್ಷಕ' ಚಿತ್ರಗಳ ನಂತರ ಇದೀಗ 'ಆಪ್ತಮಿತ್ರ 2' ಸಿನಿಮಾ ಶುರು!

3 ನಾಯಕಿಯರು

'ಆಪ್ತಮಿತ್ರ 2' ಸಿನಿಮಾದಲ್ಲಿ ಮೂರು ನಾಯಕಿಯರಿದ್ದಾರೆ. ನಿರ್ಮಾಪಕ ರಮೇಶ್ ಯಾದವ್ 'ಆಪ್ತಮಿತ್ರ 2' ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ. ಇದು ಅವರ ನಿರ್ಮಾಣದ 21ನೇ ಸಿನಿಮಾವಾಗಿದೆ.

ಈ ವರ್ಷ ಪ್ರಾರಂಭ

ಕಳೆದ ನವೆಂಬರ್ ನಲ್ಲಿಯೇ 'ಆಪ್ತಮಿತ್ರ 2' ಸಿನಿಮಾ ಶುರುವಾಗುತ್ತದೆ ಎಂಬ ಸುದ್ದಿ ಇತ್ತು. ಆದರೆ ಈ ಸಿನಿಮಾ ಈ ವರ್ಷದ ಕೊನೆಯಲ್ಲಿ ಸೆಟ್ಟೇರಲಿದೆಯಂತೆ.

English summary
According to the source kannada actor crazy star Ravichandran will planing a lead role in 'Apthamitra 2' movie. The movie will directed by P.Vasu and it is a remake of tamil movie Aranmanai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada