»   » ರಿಯಲ್ ಸ್ಟಾರ್ ಉಪೇಂದ್ರ ಎಲ್ಲಿ ಕಳೆದು ಹೋದರು?

ರಿಯಲ್ ಸ್ಟಾರ್ ಉಪೇಂದ್ರ ಎಲ್ಲಿ ಕಳೆದು ಹೋದರು?

By: ಜೀವನರಸಿಕ
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ತಲೆ ಕೆಡಿಸಿಕೊಂಡಿದ್ದಾರೆ. ಯಾವ ವಿಷಯಕ್ಕೆ ಅಂತ ನೀವೂ ಯೋಚನೆ ಮಾಡ್ತಿರ್ತೀರ. ನೀವೇ ಗಮನಿಸಿದ ಹಾಗೆ ಕೆಲವು ತಿಂಗಳುಗಳಿಂದ ಈಚೆಗೆ ಉಪ್ಪಿ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ತಿಲ್ಲ. ಇಂಟರ್ ವ್ಯೂವ್ ಕೊಡಿ ಅಂದ್ರೆ ಬೇಡ ಅಂತಿದ್ದಾರೆ.

ಅಷ್ಟೇ ಯಾಕೆ ತೆಲುಗಿನ 'ಸನ್ ಆಫ್ ಸತ್ಯಮೂರ್ತಿ' ಚಿತ್ರದಲ್ಲಿ ಅಲ್ಲು ಅರ್ಜುನ್ ಜೊತೆ ಉಪ್ಪಿ ಮುಖ್ಯಪಾತ್ರ ಮಾಡಿದ್ದು, ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ರು.50 ಕೋಟಿ ಕ್ಲಬ್ ಸೇರಿದೆ. ಇದ್ರ ಬಗ್ಗೆ ಹಲವು ಮಾಧ್ಯಮದ ಮಂದಿ ಪ್ರಶ್ನೆ ಕೇಳಿದಾಗಲೂ ರಿಯಲ್ ಸ್ಟಾರ್ ಯಾವುದೇ ಉತ್ತರ ಕೊಟ್ಟಿಲ್ಲ. ['ಉಪ್ಪಿ-2' ಹೀರೋಯಿನ್ ಪ್ರಿಯಾಂಕಾ ಉಪೇಂದ್ರ]


Real Star Upendra is as busy as a bee

ಇಷ್ಟಕ್ಕೂ ರಿಯಲ್ ಸ್ಟಾರ್ ಯಾಕೆ ಹೀಗ್ಮಾಡ್ತಿದ್ದಾರೆ ಅಂದುಕೊಂಡ್ರಾ? ಹೌದು ಉಪ್ಪಿ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸೋಲು ಕಾಣ್ತಿವೆ. ಈಗ 'ಉಪ್ಪಿ-2' ಮಾತ್ರ ರಿಯಲ್ ಸ್ಟಾರ್ ಮುಂದಿದೆ. ಈ ಚಿತ್ರಕ್ಕಾಗಿ ರಾತ್ರಿ ಹಗಲು ಶೂಟಿಂಗ್ ಮತ್ತು ಎಡಿಟಿಂಗ್ ನಲ್ಲಿ ಕಾಲ ಕಳೀತಿದ್ದಾರೆ ಉಪ್ಪಿ.


ಶತಾಯಗತಾಯ ಸೆಪ್ಟೆಂಬರ್ 18ಕ್ಕೆ ತಮ್ಮ ಹುಟ್ಟುಹಬ್ಬಕ್ಕೆ ಸಿನಿಮಾ ತೆರೆಗೆ ತರೋಕೆ ಕೆಲಸ ಮಾಡ್ತಿರೋ ಉಪ್ಪಿ ಅಲ್ಲಿಯವರೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಳ್ಳೋದಿಲ್ಲ ಅಂತ ನಿರ್ಧಾರ ಮಾಡಿದ್ದಾರಂತೆ.


ಇನ್ನು ಉಪ್ಪಿ 2 ಸಿನಿಮಾದ ವಿಶೇಷಗಳು ಒಂದೆರಡಲ್ಲ. ಉಪೇಂದ್ರ ಪ್ರೊಡಕ್ಷನ್ ಹೌಸ್ ನ ಮೊದಲ ಸಿನಿಮಾ ಇದು. ಈ ಚಿತ್ರದ ಬಹಳಷ್ಟು ಭಾಗ ಹಿಮಾಲಯದಲ್ಲಿ ಚಿತ್ರೀಕರಣಗೊಂಡಿದೆ. ಉಪ್ಪಿ ಅರ್ಧಾಂಗಿ ಪ್ರಿಯಾಂಕಾ ಸಹ ಚಿತ್ರದಲ್ಲಿರುತ್ತಾರೆ ಎಂಬುದು ಇನ್ನೊಂದು ವಿಶೇಷ.

English summary
Real Star Upendra is now completely concentrating on his upcoming mega project 'Uppi 2'. The movie is making a huge buzz even from its pre production stage. The movie is set to release on 18th of September, 2015.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada