»   » 'ಪ್ರಿಯಾಂಕ' ಚಿತ್ರಕಥೆಗೆ ಸ್ಪೂರ್ಥಿಯಾಗಿರುವ ನೈಜ ಘಟನೆ ಯಾವುದು?

'ಪ್ರಿಯಾಂಕ' ಚಿತ್ರಕಥೆಗೆ ಸ್ಪೂರ್ಥಿಯಾಗಿರುವ ನೈಜ ಘಟನೆ ಯಾವುದು?

Posted By:
Subscribe to Filmibeat Kannada

'ಸುಪ್ರಭಾತ', 'ಅಮೃತವರ್ಷಿಣಿ', 'ಲಾಲಿ', 'ನಿಶ್ಯಬ್ಧ', 'ಹಾಲಿವುಡ್' ನಂತಹ ವಿಭಿನ್ನ ಕಥಾಹಂದರದ ಸಿನಿಮಾಗಳನ್ನ ನಿರ್ದೇಶಿಸಿರುವ ದಿನೇಶ್ ಬಾಬು ಇದೀಗ 'ಪ್ರಿಯಾಂಕ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಇಲ್ಲಿ 'ಪ್ರಿಯಾಂಕ' ಆಗಿ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಹಿಳಾ ಪ್ರಧಾನ ಚಿತ್ರವಾಗಿರುವ 'ಪ್ರಿಯಾಂಕ' ಚಿತ್ರಕಥೆ ನೈಜ ಘಟನೆಯನ್ನಾಧರಿಸಿರುವುದು ಅನ್ನೋದು ಇದೀಗ ಹೊರಬಿದ್ದಿರುವ ಮಾಹಿತಿ.

priyanka-kannada-movie

27 ವರ್ಷದ ಯುವಕ ಮತ್ತು 34 ವರ್ಷದ ವಿವಾಹಿತ ಮಹಿಳೆ ನಡುವಿನ ಪ್ರೇಮ ಕಥೆ 'ಪ್ರಿಯಾಂಕ'. ಪ್ರೀತಿಗಾಗಿ ಮಹಿಳೆಯ ಗಂಡನನ್ನೇ ಕೊಲೆ ಮಾಡಿ ಜೈಲಿಗೆ ಹೋಗುವ ಪ್ರೇಮಿಯ ಕಥೆ 'ಪ್ರಿಯಾಂಕ'. [ಪ್ರೀತಿ, ರಹಸ್ಯಗಳ ಸಸ್ಪೆನ್ಸ್ ಥ್ರಿಲ್ಲರ್ 'ಪ್ರಿಯಾಂಕ']

ಈ ಒನ್ ಲೈನ್ ಸ್ಟೋರಿ ಕೇಳುತ್ತಿದ್ದರೆ, ನಿಮಗೆ ದಿನನಿತ್ಯ ಸುದ್ದಿ ವಾಹಿನಿಗಳಲ್ಲಿ ಪ್ರಸಾರವಾಗುವ ಅನೇಕ ಕ್ರೈಂ ಸ್ಟೋರಿಗಳು ನೆನಪಿಗೆ ಬರಬಹುದು. ಇಂದಿಗೂ ಕೋರ್ಟ್ ನಲ್ಲಿರುವ ಅಂತಹ ಒಂದು 'ರಿಯಲ್' ಕ್ರೈಂ ಸ್ಟೋರಿಯೇ 'ಪ್ರಿಯಾಂಕ' ಚಿತ್ರದ ಕಥೆ ಅನ್ನುವ ಗುಟ್ಟು ಈಗ ರಟ್ಟಾಗಿದೆ.

ವಿವಾಹಿತ ಮಹಿಳೆ ಪ್ರಿಯಾಂಕ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದಾರೆ. ಲವ್ವರ್ ಬಾಯ್ ಆಗಿ ತೆಲುಗು ನಟ ತೇಜಸ್ ಚಿತ್ರದಲ್ಲಿ ನಟಿಸಿದ್ದಾರೆ. ಹಲವು ಕುತೂಹಲಗಳಿಗೆ ಕಾರಣವಾಗಿರುವ 'ಪ್ರಿಯಾಂಕ' ಬಿಡುಗಡೆ ಆಗುವುದಕ್ಕೆ ಇನ್ನೂ ಬೇಜಾನ್ ಟೈಮ್ ಇದೆ. (ಏಜೆನ್ಸೀಸ್)

English summary
According to the reports, Kannada Actress Priyanka Upendra starrer Kannada Movie 'Priyanka' is based on a real incident. The movie is directed by Dinesh Baboo.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada