Just In
Don't Miss!
- Automobiles
ದಂಡ ಪಾವತಿಸಿರುವ ಬಗ್ಗೆ ವೀಡಿಯೊ ಶೇರ್ ಮಾಡಿದ ನಟ
- News
ಪರಿಸರಕ್ಕೆ ಪೂರಕವಾದ ಆಟಿಕೆಗಳನ್ನು ತಯಾರಿಸಲು ಮೋದಿ ಮನವಿ
- Sports
ಭಾರತ vs ಇಂಗ್ಲೆಂಡ್: ಭಾರತ ತಂಡದಿಂದ ಜಸ್ಪ್ರೀತ್ ಬೂಮ್ರಾ ಹೊರಕ್ಕೆ
- Finance
ಸ್ಯಾಮ್ಸಂಗ್ ಗ್ಯಾಲಕ್ಸಿ ಎಂ 31 ಸ್ಮಾರ್ಟ್ಫೋನ್ ಬೆಲೆ ಕಡಿಮೆಯಾಗಿದೆ!
- Lifestyle
ಮಾರ್ಚ್ ೨೦೨೧: ಇಲ್ಲಿದೆ ಶುಭ ಸಮಾರಂಭಕ್ಕೆ ಉತ್ತಮ ದಿನಾಂಕಗಳು
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
RRR ಚಿತ್ರಕ್ಕೆ ಕರ್ನಾಟಕದಿಂದ ಮೆಗಾ ಆಫರ್: ರಿಲೀಸ್ ಮುನ್ನವೇ ಭಾರಿ ಬಿಸಿನೆಸ್?
ಬಾಹುಬಲಿ ಯಶಸ್ಸಿನ ಬಳಿಕ ರಾಜಮೌಳಿ ನಿರ್ದೇಶನ ಮಾಡ್ತಿರುವ ಆರ್‌ಆರ್‌ಆರ್ ಚಿತ್ರಕ್ಕೆ ಭಾರಿ ಬೇಡಿಕೆ ಬಂದಿದೆ. ರಿಲೀಸ್‌ಗೂ ಮುನ್ನವೇ ಚಿತ್ರದ ವಿತರಣೆ ಹಕ್ಕು ಖರೀದಿ ಮಾಡಲು ವಿತರಕರು ಮುಗಿ ಬಿದ್ದಿದ್ದಾರೆ. ಅದರಲ್ಲೂ ಸೌತ್ ಇಂಡಸ್ಟ್ರಿಯ ವಿತರಣೆ ಹಕ್ಕಿಗೆ ಭಾರಿ ಬೇಡಿಕೆ ಬಂದಿದೆ.
ಬಾಲಿವುಡ್ ವೆಬ್‌ಸೈಟ್ ಪಿಂಕ್‌ವಿಲ್ಲ ವರದಿ ಮಾಡಿರುವಂತೆ ಸೌತ್ ಇಂಡಸ್ಟ್ರಿಯಿಂದ 350 ಕೋಟಿ ನೀಡಲು ವಿತರಕರು ಆಫರ್ ಮಾಡಿದ್ದಾರಂತೆ. ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಹಾಗೂ ಕರ್ನಾಟಕದಲ್ಲಿ ಆರ್‌ಆರ್‌ಆರ್ ಚಿತ್ರಕ್ಕೆ ಹೆಚ್ಚು ಡಿಮ್ಯಾಂಡ್ ಇದ್ದು ಬರಿ ಕನ್ನಡ ವರ್ಷನ್ ಚಿತ್ರಕ್ಕೆ ದೊಡ್ಡ ಮೊತ್ತದ ಆಫರ್ ಸಿಕ್ಕಿದೆಯಂತೆ. ಮುಂದೆ ಓದಿ....
ಎಸ್ಎಸ್ ರಾಜಮೌಳಿ ನಿರ್ಧಾರಕ್ಕೆ ಬೇಸರಗೊಂಡ ನಿರ್ಮಾಪಕ ಬೋನಿ ಕಪೂರ್

ಕರ್ನಾಟಕದ ವಿತರಣೆ ಹಕ್ಕು?
ಆರ್‌ಆರ್‌ಆರ್ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಆರ್‌ಆರ್‌ಆರ್ ಚಿತ್ರದ ಕರ್ನಾಟಕ ವಿತರಣೆ ಹಕ್ಕು ದೊಡ್ಡ ಬೆಲೆ ಸೇಲ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯದ ಮಾಹಿತಿ ಪ್ರಕಾರ, ಸುಮಾರು 45 ಕೋಟಿ ನೀಡಿ ಕರ್ನಾಟಕ ವಿತರಣೆ ಹಕ್ಕು ಪಡೆಯಲು ಖ್ಯಾತ ವಿತರಕರೊಬ್ಬರು ನಿರ್ಧರಿಸಿದ್ದಾರೆ ಎಂಬ ವರದಿಯಾಗಿದೆ. ಆಂಧ್ರಪ್ರದೇಶ 165 ಕೋಟಿ, ತೆಲಂಗಾಣ 75 ಕೋಟಿ, ತಮಿಳುನಾಡು 48 ಕೋಟಿ, ಕೇರಳ 15 ಕೋಟಿಗೆ ಮಾತುಕತೆ ನಡೆಯುತ್ತಿದೆಯಂತೆ.

ಹಿಂದಿಯಲ್ಲಿ 100 ಕೋಟಿ?
ಬಾಹುಬಲಿ ಸರಣಿ ಬಳಿಕ ರಾಜಮೌಳಿಗೆ ಬಾಲಿವುಡ್‌ನಲ್ಲಿ ಮಾರ್ಕೆಟ್ ಹೆಚ್ಚಾಗಿದೆ. ನೇರವಾಗಿ ಸಿನಿಮಾ ಮಾಡದೇ ಹೋದರೂ ರಾಜಮೌಳಿ ನಿರ್ದೇಶಿಸುವ ಚಿತ್ರದ ಹಿಂದಿ ಡಬ್‌ಗೆ ಬೇಡಿಕೆ ಹೆಚ್ಚಿದೆಯಂತೆ. ವರದಿಗಳ ಪ್ರಕಾರ, ಆರ್‌ಆರ್‌ಆರ್ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಹಾಗೂ ವಿತರಣೆ ಹಕ್ಕು ಪಡೆಯಲು 100 ಕೋಟಿ ಡೀಲ್ ಆಗಿದೆಯಂತೆ. ಅನಿಲ್ ತಡಾನಿ (ಎಎ ಫಿಲಂಸ್) ಈಗಾಗಲೇ ಆರ್‌ಆರ್‌ಆರ್ ಚಿತ್ರದ ವಿತರಣೆ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆಯಂತೆ.
RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

ಹೊರದೇಶಗಳಿಂದಲೂ ಬೇಡಿಕೆ
ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಒಬ್ಬರೇ ವಿತರಣೆ ಮಾಡಲು ತೀರ್ಮಾನಿಸಿದ್ದಾರೆ. ಬಾಲಿವುಡ್‌ನಲ್ಲಿ ಅನಿಲ್ ತಡಾನಿ ವಿತರಿಸುವ ಸಾಧ್ಯತೆ ಹೆಚ್ಚಿದೆ. ಹೊರದೇಶಗಳಿಂದಲೂ ಆರ್‌ಆರ್‌ಆರ್ ಚಿತ್ರಕ್ಕೆ ಭಾರಿ ಬೇಡಿಕೆಯಿದ್ದು, ಸುಮಾರು 70 ಕೋಟಿ ಡೀಲ್ ಆಗಿದೆಯಂತೆ.

500 ಕೋಟಿ ಪ್ರಿ-ಬಿಸಿನೆಸ್?
ಆರ್‌ಆರ್‌ಆರ್ ಚಿತ್ರದ ವಿತರಣೆಯಿಂದಲೇ 500 ಕೋಟಿ ಪ್ರಿ-ಬಿಸಿನೆಸ್ ಆಗುವ ಲೆಕ್ಕಾಚಾರ ಈಗ ಹೊರಬಿದ್ದಿದೆ. ಸಿನಿಮಾ ರಿಲೀಸ್‌ಗೂ ಮೊದಲೇ 500 ಕೋಟಿ ಗಳಿಸುತ್ತಿದೆ. ಇದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆಯಾಗಲಿದೆ. ಈ ಚಿತ್ರದ ಒಟ್ಟು ಬಜೆಟ್ 350-400 ಕೋಟಿ ಎನ್ನಲಾಗಿದೆ.