»   » ಗೋಲ್ಡನ್ ಗರ್ಲ್ ರಮ್ಯಾ ಚಿತ್ರಗಳು ಕೃಷ್ಣಾರ್ಪಣಮಸ್ತು?

ಗೋಲ್ಡನ್ ಗರ್ಲ್ ರಮ್ಯಾ ಚಿತ್ರಗಳು ಕೃಷ್ಣಾರ್ಪಣಮಸ್ತು?

By: ಉದಯರವಿ
Subscribe to Filmibeat Kannada

ಈಗ ಗೊಲ್ಡನ್ ಗರ್ಲ್ ರಮ್ಯಾ ಮಂಡ್ಯ ಸಂಸದೆ. ಅವರು ಪಾರ್ಲಿಮೆಂಟ್ ಭವನಕ್ಕೆ ಅಡಿಯಿಟ್ಟಿದ್ದೇ ತಡ ಇತ್ತ ಗಾಂಧಿನಗರದಲ್ಲಿ ನಡುಕ ಶುರುವಾಗಿದೆ. ಲಕ್ಕಿ ಸ್ಟಾರ್ ರಮ್ಯಾ ಮೇಲೆ ಬಂಡವಾಳ ಹೂಡಿರುವ ನಿರ್ಮಾಪಕರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ತಾವು ಬಂಡವಾಳ ಹೂಡಿರುವ ಚಿತ್ರಗಳ ಪರಿಸ್ಥಿತಿ ಏನಪ್ಪಾ ಎಂಬುದೇ ಅವರ ಆತಂಕಕ್ಕೆ ಕಾರಣ. ಸದ್ಯಕ್ಕೆ ರಮ್ಯಾ ಅವರು ತಮ್ಮ ಗೆಲುವನ್ನು ಆಸ್ವಾದಿಸುತ್ತಿದ್ದಾರೆ. ಅವರು ಸ್ಯಾಂಡಲ್ ವುಡ್ ಮೇಲೆ ಗಮನಹರಿಸಲು ಸ್ವಲ್ಪ ಸಮಯಬೇಕಾಗುತ್ತದೆ. ಆ ಬಳಿಕವಷ್ಟೇ ನಿರ್ಮಾಪಕರು ನಿರಾಳ.

ರಮ್ಯಾ ಅವರ ಕೈಯಲ್ಲಿ ಸದ್ಯಕ್ಕೆ ನಾಲ್ಕು ಚಿತ್ರಗಳಿವೆ. ಕೆಲವು ನಿರ್ಮಾಣ ಹಂತದಲ್ಲಿದ್ದರೆ ಇನ್ನೂ ಕೆಲವು ಆಗಲೇ ಚಿತ್ರೀಕರಣ ಆರಂಭಿಸಿವೆ. ಒಂದು ಮೂಲದ ಪ್ರಕಾರ ರಮ್ಯಾ ಮೇಲೆ ಸ್ಯಾಂಡಲ್ ವುಡ್ ನಲ್ಲಿ ಅಂದಾಜು ರು.20 ಕೋಟಿ ಬಂಡವಾಳ ಹೂಡಿದ್ದಾರೆ ಎನ್ನಲಾಗಿದೆ.

ನೀರ್ ದೋಸೆ, ದಿಲ್ ಕಾ ರಾಜಾ, ಆರ್ಯನ್ ಚಿತ್ರಗಳು ನಿರ್ಮಾಣ ಹಂತದಲ್ಲಿವೆ. ನೀರ್ ದೋಸೆ ಚಿತ್ರೀಕರಣ ಶೇ.60ರಷ್ಟು ಮುಗಿದಿದೆ. ದಿಲ್ ಕಾ ರಾಜಾ ಚಿತ್ರೀಕರಣವೂ ಬಹುತೇಕ ಮುಗಿದಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಗಿನ 'ಆರ್ಯನ್' ಚಿತ್ರೀಕರಣ ಇನ್ನೂ ಬಹಳ ದೂರ ಇದೆ.

ಒಟ್ಟು ರು.20 ಕೋಟಿ ಬಂಡವಾಳ

ದಿಲ್ ಕಾ ರಾಜಾ ಚಿತ್ರದ ಬಜೆಟ್ ಐದು ಕೋಟಿ, ಆರ್ಯನ್ ಹಾಗೂ ಇನ್ನೂ ಹೆಸರಿಡದ ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರದ ಒಟ್ಟಾರೆ ಬಜೆಟ್ ರು.6 ಕೋಟಿ, ನೀರ್ ದೊಸೆ ಚಿತ್ರದ್ದು ರು.3 ಕೋಟಿ ಎನ್ನುತ್ತವೆ ಮೂಲಗಳು. ಒಟ್ಟಾರೆ ರಮ್ಯಾ ಅವರ ಮೇಲೆ ರು.20 ಕೋಟಿ ಬಂಡವಾಳ ಹೂಡಲಾಗಿದೆಯಂತೆ.

ರಮ್ಯಾ ಈ ಬಗ್ಗೆ ತುಟಿಪಿಟಕ್ ಎನ್ನುತ್ತಿಲ್ಲ

ರಮ್ಯಾ ಅವರು ಈ ಬಗ್ಗೆ ಇನ್ನೂ ಏನೂ ಹೇಳದಿರುವುದರಿಂದ ಗಾಂಧಿನಗರದಲ್ಲಿ ದಿನಕ್ಕೊಂದು ಸುದ್ದಿ ಸ್ಫೋಟವಾಗುತ್ತಿದೆ. ಅವರು ಆದಷ್ಟು ಶೀಘ್ರದಲ್ಲಿ ಈ ಬಗ್ಗೆ ತಿಳಿಸಿದರೆ ಎಲ್ಲವೂ ಸ್ಪಷ್ಟವಾಗುತ್ತದೆ. ರಮ್ಯಾ ಅವರು ಅಭಿನಯಿಸುತ್ತಿರುವ ಚಿತ್ರಗಳ ಮೇಲೆಂದು ಇಣುಕು ನೋಟ ಇಲ್ಲಿದೆ.

ಕೋಡಿ ರಾಮಕೃಷ್ಣ ನಿರ್ದೇಶನದ ಚಿತ್ರ

ಕೋಡಿ ರಾಮಕೃಷ್ಣ ಜೊತೆಗಿನ ಚಿತ್ರ ಕೋಡಿ ರಾಮಕೃಷ್ಣ ನಿರ್ದೇಶನದಲ್ಲಿ ಇನ್ನೂ ಶೀರ್ಷಿಕೆ ಇಡದ ಚಿತ್ರದಲ್ಲೂ ರಮ್ಯಾ ಅಭಿನಯಿಸಲಿದ್ದಾರೆ. ಆದರೆ ಈ ಚಿತ್ರಕ್ಕೆ ಇನ್ನೂ ಟೈಟಲ್ಲೇ ಇಟ್ಟಿಲ್ಲ ಎಂದರೆ ಇನ್ನು ಕುಲಾವಿ ಎಲ್ಲಿಂದ ಬಂತು? ಮುಂದಿನ ಕಥೆ ಏನಾಗಬಹುದು ಎಂಬ ಊಹೆ ನಿಮಗೇ ಬಿಟ್ಟಿದ್ದು.

ಭಾರಿ ನಿರೀಕ್ಷೆಯಲ್ಲಿ ದಿಲ್ ಕಾ ರಾಜಾ

ಭಾರಿ ನಿರೀಕ್ಷೆ ಮೂಡಿಸಿರುವ ದಿಲ್ ಕಾ ರಾಜಾ ಇನ್ನು ಡೈನಮಿಕ್ ಪ್ರಿನ್ಸ್ ಎಂದೇ ಖ್ಯಾತನಾಗಿರುವ ಪ್ರಜ್ವಲ್ ದೇವರಾಜ್ ಜೊತೆಗಿನ 'ದಿಲ್ ಕಾ ರಾಜಾ' ಚಿತ್ರದಲ್ಲೂ ರಮ್ಯಾ ಅಭಿನಯಿಸಿದ್ದಾರೆ. ಈ ಚಿತ್ರದ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. ಸೋಮನಾಥ್‌ ಪಾಟೀಲ್‌ ಆಕ್ಷನ್ ಕಟ್ ಹೇಳಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಈ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿರುವ ಕಾರಣ ಬಿಡುಗಡೆಯಂತೂ ಖಂಡಿತ ಆಗಿಯೇ ಆಗುತ್ತದೆ.

ಶೇ.60ರಷ್ಟು ಚಿತ್ರೀಕರಣ ಮುಗಿಸಿದ ನೀರ್ ದೋಸೆ

ನೀರ್ ದೋಸೆ ಕಥೆ ಏನಾಗುತ್ತದೋ ಏನೋ ರಮ್ಯಾ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ನೀರ್ ದೋಸೆ. 'ಸಿದ್ಲಿಂಗು' ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್ ಅವರ ಮತ್ತೊಂದು ಚಿತ್ರವಿದು. ರಮ್ಯಾ ಈ ಚಿತ್ರದಲ್ಲಿ ಅಭಿನಯಿಸುತ್ತಾರೋ ಇಲ್ಲವೋ ಎಂಬ ಬಗ್ಗೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದ್ದಂತಹ ಚಿತ್ರ. ಕಡೆಗೂ ಈ ಚಿತ್ರದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ರಮ್ಯಾ ಅಭಿನಯಿಸುವ ಮೂಲಕ ಎಲ್ಲಾ ವಿವಾದಗಳಿಗೆ ಅಂತ್ಯ ಹಾಡಿದರು. ಈಗ ರಮ್ಯಾ ಸಂಸದೆಯಾಗಿರುವ ಕಾರಣ ಮುಂದೇನಾಗುತ್ತದೋ ಏನೋ ಎಂಬ ಒಂದು ಸಣ್ಣ ಅಳುಕು ಇದ್ದೇ ಇದೆ.

ಆರ್ಯನ್ ಚಿತ್ರೀಕರಣ ಇನ್ನೂ ಬಹಳ ದೂರ

ಶಿವಣ್ಣ ಜೊತೆಗಿನ ಆರ್ಯನ್ ಕಥೆ ಏನಾಗಲಿದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ರಮ್ಯಾ ಅಭಿನಯಿಸಲಿರುವ ಮತ್ತೊಂದು ಪ್ರಾಜೆಕ್ಟ್ 'ಆರ್ಯನ್'. ಡಿ.ರಾಜೇಂದ್ರ ಬಾಬು ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ಶರತ್ ಬಾಬು, ಬುಲೆಟ್ ಪ್ರಕಾಶ್ ಮುಂತಾದವರಿದ್ದಾರೆ. ಈ ಚಿತ್ರದ ಮುಂದಿನ ಕಥೆ ಏನಾಗಲಿದೆ ಎಂಬ ಕುತೂಹಲ ಅತ್ತ ಶಿವಣ್ಣ ಇತ್ತ ರಮ್ಯಾ ಅಭಿಮಾನಿಗಳಲ್ಲಿ ಮನೆಮಾಡಿದೆ.

ಭೀಮೂಸ್ ಬ್ಯಾಂಗ್ ಬ್ಯಾಂಗ್ ಚಿತ್ರದ ಕಥೆ ಏನು?

ಡಬ್ಬದಲ್ಲೇ ಕೊಳೆಯುತ್ತಿರುವ ಚಿತ್ರ ಹಾಗೆಯೇ ಸುದೀರ್ಘ ಸಮಯದಿಂದ ಡಬ್ಬದಲ್ಲೇ ಕುಳಿತಿರುವ 'ಭೀಮೂಸ್ ಬ್ಯಾಂಗ್ ಬ್ಯಾಂಗ್' ಚಿತ್ರವೂ ಸದ್ಯಕ್ಕೆ ಬಿಡುಗಡೆಯಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಈ ಚಿತ್ರ ನಾನಾ ಆರ್ಥಿಕ ಸಂಕಷ್ಟಗಳಿಗೆ ಸಿಲುಕಿ ಡಬದಲ್ಲೇ ಕೊಳೆಯುತ್ತಿದೆ. ಎಸ್.ವಿ.ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರದ ನಾಯಕ ನಟ ಉಪೇಂದ್ರ.

English summary
Kannada actress Ramya, the Golden Girl has decided to bid goodbye to films after the elections. Now she has a MP of Mandya. At present Ramya had four projects in her hand. Approximately Rs 20 cr budget has been invested on her films.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada