Just In
Don't Miss!
- Sports
ಐಎಸ್ಎಲ್: ಈಸ್ಟ್ ಬೆಂಗಾಲ್ ಅಜೇಯ ನಡೆಗೆ ಬೆಸ್ಟ್ ಮುಂಬೈ ಸವಾಲು
- News
ಶಿವಮೊಗ್ಗದಲ್ಲಿ ಡೈನಾಮೈಟ್ ಸ್ಫೋಟ: ಕನಿಷ್ಠ 7 ಕಾರ್ಮಿಕರ ಸಾವಿನ ಶಂಕೆ
- Finance
ಬಜೆಟ್ 2021: ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಜನವರಿ 30ರಂದು ಸರ್ವ ಪಕ್ಷಗಳ ಸಭೆ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೂಪರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಶಿಫಾರಸ್ಸು ಮಾಡಿದ್ದು RSS?
2010-11ರ ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಆಯ್ಕೆ ಮಂಡಳಿ ಬುಧವಾರ ಪ್ರಕಟಿಸಿತ್ತು. ಅತ್ಯುತ್ತಮ ಚಲನಚಿತ್ರವಾಗಿ ಉಪೇಂದ್ರ ಅಭಿನಯದ ಸೂಪರ್ ಚಿತ್ರ ಆಯ್ಕೆಯಾಗಿತ್ತು. ಹೆಚ್ಚಾಗಿ ಕಮರ್ಷಿಯಲ್ ಎಲಿಮೆಂಟ್ ಇರುವ ಚಿತ್ರಗಳಿಗೆ ಆಯ್ಕೆ ಮಂಡಳಿ ಮಣೆ ಹಾಕುವುದಿಲ್ಲ. ಇದು ಮಂಡಳಿ ಪಾಲಿಸಿಕೊಂಡು ಬಂದಿರುವ ಅಘೋಷಿತ ಪಾಲಿಸಿ.
ಹಾಗಿದ್ದಾಗ ಸೂಪರ್ ಚಿತ್ರವನ್ನು ಆಯ್ಕೆ ಮಾಡಿದ್ದೇಕೆ? ಅದಕ್ಕೆ ಕಾರಣವಿಲ್ಲದಿಲ್ಲ. ಸೂಪರ್ ಚಿತ್ರ ಅಪ್ಪಟ ದೇಶಾಭಿಮಾನಿಯೊಬ್ಬ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ದಿನವಾದರೂ ಸಾಧ್ಯವಾಗದ ಕನಸನ್ನು ನನಸು ಮಾಡುವ ಕಥಾಹಂದರವಿರುವ ಚಿತ್ರ. ನಮ್ಮ ಭರತಖಂಡವನ್ನು ವಿಶ್ವದ ಅತ್ಯಂತ ಮುಂದುವರಿದ ರಾಷ್ಟ್ರವನ್ನಾಗಿ ಮಾಡುವ ಕಥೆ ಇರುವ ಚಿತ್ರ.
ಸಿಎಂ ಎಂದರೆ ಮುಖ್ಯಮಂತ್ರಿಯಲ್ಲ ಕಾಮನ್ ಮ್ಯಾನ್ ಎನ್ನುತ್ತಾನೆ ನಾಯಕ. ( ಉಪೇಂದ್ರ ) ಇಂದಿನ ರಾಜಕೀಯ ವ್ಯವಸ್ಥೆ, ಭ್ರಷ್ಟಾಚಾರ, ಗಣಿ ಲೂಟಿ ಹೀಗೆ ಪ್ರಚಲಿತ ವಿದ್ಯಮಾನಗಳನ್ನು ತಲೆಗೆ ಹೊಡೆದಂತೆ ಎಳೆಎಳೆಯಾಗಿ ವಿಭಿನ್ನ ರೀತಿಯಲ್ಲಿ ತೆರೆಗೆ ಬಂದು ಊಹಿಸಲೂ ಅಸಾಧ್ಯವಾದ ರೀತಿಯಲ್ಲಿ ಯಶಸ್ಸು ಕಂಡ ಚಿತ್ರ ಇದಾಗಿತ್ತು.
ದೇಶ, ದೇಶಾಭಿಮಾನ, ದೇಶಪ್ರೇಮದ ವಿಚಾರದ ಕಥೆಯ ಚಿತ್ರ ಇದಾಗಿರುವುದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೂಪರ್ ಚಿತ್ರವನ್ನು ಪ್ರಶಸ್ತಿಗೆ ಆಯ್ಕೆ ಮಾಡಲು ಶಿಫಾರಸು ಮಾಡಿತ್ತು ಎನ್ನುವುದು ಗಾಂಧಿನಗರದಲ್ಲಿ ಹಬ್ಬಿರುವ ಘಾಸಿಪ್! ಅದೆಷ್ಟು, ಸರಿಯೋ ಸುಳ್ಳೋ?