For Quick Alerts
  ALLOW NOTIFICATIONS  
  For Daily Alerts

  ಸಿನಿಮಾ ಬಿಟ್ಟು ಕ್ಲಿನಿಕ್ ಶುರು ಮಾಡ್ತಾರಾ ನಟಿ ಸಾಯಿ ಪಲ್ಲವಿ?

  |

  'ವಿರಾಟ ಪರ್ವಂ' ಹಾಗೂ 'ಗಾರ್ಗಿ' ಸಿನಿಮಾ ಸೋಲಿನ ನಂತ್ರ ಸಾಯಿ ಪಲ್ಲವಿ ಸಿನಿಕರಿಯರ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಈ ನಡುವೆ ರೌಡಿ ಬೇಬಿ ಚಿತ್ರರಂಗದಿಂದಲೇ ದೂರಾಗುತ್ತಾರೆ ಅನ್ನುವ ಗಾಸಿಪ್‌ ಕೂಡ ಸದ್ದು ಮಾಡ್ತಿದೆ.

  ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಸ್ಟಾರ್ ಆದರೂ ಒಂದೆರಡು ಸಿನಿಮಾ ಫ್ಲಾಪ್ ಆದರೆ ಕಥೆ ಬದಲಾಗಿ ಬಿಡುತ್ತೆ. ಸದ್ಯ ಪಿಂಪಲ್ ಬ್ಯೂಟಿ ಸಾಯಿ ಪಲ್ಲವಿ ವಿಚಾರದಲ್ಲೂ ಹೀಗೆ ಆಗ್ತಿದೆ. ಗ್ಲಾಮರಸ್ ರೋಲ್‌ಗಳನ್ನು ಪಕ್ಕಕ್ಕಿಟ್ಟು ಚೆನ್ನೈ ಚೆಲುವೆ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸ್ತಿದ್ದಾರೆ. ಆದರೆ ಅಂದಕೊಂಡ ರೀತಿಯಲ್ಲಿ ಸಕ್ಸಸ್ ಮಾತ್ರ ಸಿಗುತ್ತಿಲ್ಲ. 'ವಿರಾಟ ಪರ್ವಂ' ಹಾಗೂ 'ಗಾರ್ಗಿ' ಸಿನಿಮಾಗಳ ಸೋಲಿನ ನಂತರ ಸಿನಿಮಾ ನಿರ್ಮಾಪಕರು ನಟಿಗೆ ಒಂದು ಸಲಹೆ ನೀಡಿದ್ದಾರಂತೆ. ಆದರೆ ಅದಕ್ಕೆ ಆಕೆ ಒಪ್ಪಲಿಲ್ಲವಂತೆ.

  ಸಾಯಿ ಪಲ್ಲವಿ 'ಗಾರ್ಗಿ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಿನಿಮಾ ಸೂಪರ್ ಆದರೂ ಸೋತಿದ್ದೇಕೆ?ಸಾಯಿ ಪಲ್ಲವಿ 'ಗಾರ್ಗಿ' ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು? ಸಿನಿಮಾ ಸೂಪರ್ ಆದರೂ ಸೋತಿದ್ದೇಕೆ?

  ಸಾಯಿ ಪಲ್ಲವಿ ಕನ್ನಡ ಸಿನಿರಸಿಕರಿಗೂ ಚಿರಪರಿಚಿತ. ಇತ್ತೀಚೆಗೆ ಬಂದ ಈಕೆಯ ಪ್ಯಾನ್‌ ಇಂಡಿಯಾ ಸಿನಿಮಾ 'ಗಾರ್ಗಿ' ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿತ್ತು. ಸ್ವತಃ ಸಾಯಿ ಪಲ್ಲವಿ ಕನ್ನಡ ಕಲಿತು ತಮ್ಮ ಪಾತ್ರಕ್ಕೆ ಡಬ್ ಮಾಡಿದ್ದರು. ಆದರೆ ಸಿನಿಮಾ ಪ್ರೇಕ್ಷಕರ ಮನಗೆಲ್ಲಲಿಲ್ಲ. ಕಮರ್ಷಿಯಲ್ ಸಿನಿಮಾಗಳನ್ನು ಬಿಟ್ಟು ಪ್ರಯೋಗ ಮಾಡುತ್ತಿರುವುದೇ ಸೋಲಿಗೆ ಕಾರಣ ಅನ್ನಲಾಗ್ತಿದೆ. ಚೆನ್ನೈ ಚೆಲುವೆ ಒಳ್ಳೆ ಡ್ಯಾನ್ಸರ್. ಆಕೆಯ ಡ್ಯಾನ್ಸ್‌ಗೆ ದೊಡ್ಡ ಅಭಿಮಾನಿ ಬಳಗವಿದೆ. ಆದರೆ ಅದನ್ನೆಲ್ಲಾ ಬಿಟ್ಟು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸ್ತಿದ್ದಾರೆ.

   ಸಾಯಿ ಪಲ್ಲವಿಗೆ ನಿರ್ಮಾಪಕರ ಸಲಹೆ ನಿಜಾನಾ?

  ಸಾಯಿ ಪಲ್ಲವಿಗೆ ನಿರ್ಮಾಪಕರ ಸಲಹೆ ನಿಜಾನಾ?

  ನಟಿ ಸಾಯಿ ಪಲ್ಲವಿಗೆ ಕಮರ್ಷಿಯಲ್ ಸಿನಿಮಾ ಮಾಡುವಂತೆ ಕೆಲ ನಿರ್ಮಾಪಕರು ಸಲಹೆ ನೀಡಿದ್ದಾರಂತೆ. ಸಂದೇಶಾತ್ಮಕ, ಮಹಿಳಾ ಪ್ರಧಾನ ಸಿನಿಮಾಗಳನ್ನು ಪಕ್ಕಕ್ಕಿಟ್ಟು ಗ್ಲಾಮರ್‌ಗೆ ಪ್ರಾಮುಖ್ಯತೆ ಇರುವ ಬಿಂದಾಸ್ ಪಾತ್ರಗಳನ್ನು ಮಾಡುವಂತೆ ಹೇಳಿದ್ದಾರೆ ಅನ್ನುವ ಮಾತುಗಳು ಕೇಳಿಬರ್ತಿದೆ.

  ಲವ್ ಲೆಟರ್ ಬರೆದು ಅಮ್ಮ, ಅಪ್ಪನ ಕೈಯಲ್ಲಿ ಒದೆ ತಿಂದಿದ್ದ ಸಾಯಿ ಪಲ್ಲವಿ!ಲವ್ ಲೆಟರ್ ಬರೆದು ಅಮ್ಮ, ಅಪ್ಪನ ಕೈಯಲ್ಲಿ ಒದೆ ತಿಂದಿದ್ದ ಸಾಯಿ ಪಲ್ಲವಿ!

   ಕ್ಲಿನಿಕ್ ಶುರು ಮಾಡ್ತೀನಿ ಅಂದ್ರಾ ಪಲ್ಲವಿ?

  ಕ್ಲಿನಿಕ್ ಶುರು ಮಾಡ್ತೀನಿ ಅಂದ್ರಾ ಪಲ್ಲವಿ?

  ನಿರ್ಮಾಪಕರ ಸಲಹೆಯನ್ನು ತಿರಸ್ಕರಿಸಿರುವ ಸಾಯಿ ಪಲ್ಲವಿ, ನನಗೆ ಅವಕಾಶಗಳು ಸಿಗದೇ ಇದ್ದರೆ ಕ್ಲಿನಿಕ್‌ ಇಟ್ಟುಕೊಳ್ಳುತ್ತೀನಿ. ಅಥವಾ ಬೇರೆ ಕೆಲಸ ನೋಡಿಕೊಳ್ಳುತ್ತೀನಿ. ನನ್ನ ಪ್ರತಿಭೆ ನಂಬಿಕೊಂಡು ಚಿತ್ರರಂಗಕ್ಕೆ ಬಂದಿದ್ದೀನಿ. ಯಾವುದೇ ಕಾರಣಕ್ಕೂ ಗ್ಲಾಮರ್‌ ಪ್ರದರ್ಶನಕ್ಕೆ ಒಪ್ಪುವುದಿಲ್ಲ ಎಂದು ನಿರ್ಮಾಪಕರಿಗೆ ಖಾರವಾಗಿಯೇ ಹೇಳಿದ್ದಾರೆ ಅನ್ನಲಾಗ್ತಿದೆ. ಅಂದಹಾಗೆ ಸಾಯಿ ಪಲ್ಲವಿ ಎಂಬಿಬಿಎಸ್ ಪದವಿ ಸಹ ಪಡೆದಿದ್ದಾರೆ.

   ಕರಿಯರ್ ಮುಗ್ದೇ ಹೋಯ್ತಾ?

  ಕರಿಯರ್ ಮುಗ್ದೇ ಹೋಯ್ತಾ?

  ಎರಡು ಸಿನಿಮಾಗಳು ಸೋಲುಂಡ ತಕ್ಷಣ ಸಾಯಿ ಪಲ್ಲವಿ ಸಿನಿ ಕರಿಯರ್‌ ಮುಗಿದೇ ಹೋಯ್ತು ಅನ್ನುವಂತೆ ಕೆಲವರು ಮಾತನಾಡುತ್ತಿದ್ದಾರೆ. ಇನ್ನು ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ರೌಡಿ ಬೇಬಿ ನೀಡಿದ ವಿವಾದಾತ್ಮಕ ಹೇಳಿಕೆಯೇ ಆಕೆಯ ಸಿನಿಮಾಗಳ ಸೋಲಿಗೆ ಕಾರಣ ಅನ್ನುವವರು ಇದ್ದಾರೆ.

   ಸಾಯಿ ಪಲ್ಲವಿ ಮುಂದಿನ ನಡೆ?

  ಸಾಯಿ ಪಲ್ಲವಿ ಮುಂದಿನ ನಡೆ?

  ಸದ್ಯ ಸಾಯಿ ಪಲ್ಲವಿ ಕೈಯಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಇಲ್ಲ. ಕನ್ನಡದಲ್ಲೂ ರೌಡಿ ಬೇಬಿ ನಟಿಸುವ ಭರವಸೆ ನೀಡಿದ್ದಾರೆ. ಮುಂದೆ ಮತ್ತೆ ಪಾತ್ರಗಳ ವಿಚಾರದಲ್ಲಿ ಪ್ರಯೋಗ ಮಾಡುತ್ತಾರಾ ಅಥವಾ ಕಮರ್ಷಿಯಲ್ ಸಿನಿಮಾಗಳಿಗೆ ಜೈ ಅಂತಾರೆ ಅನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.

  English summary
  Rumour Is That South Actress Sai Pallavi Will Say Good Bye To The Movies, Know More.
  Wednesday, August 3, 2022, 10:47
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X