»   » ಸುಶ್ ಜೊತೆ ಸುಲ್ತಾನ್ ಆಫ್ ಸ್ವಿಂಗ್ ಮದ್ವೆ?

ಸುಶ್ ಜೊತೆ ಸುಲ್ತಾನ್ ಆಫ್ ಸ್ವಿಂಗ್ ಮದ್ವೆ?

Posted By:
Subscribe to Filmibeat Kannada
Rumours : Sushmita set to marry Wasim Akram ?
ಮಾಜಿ ಭುವನ ಸುಂದರಿ ಸುಶ್ಮಿತಾ ಮದುವೆಯಾಗದಿದ್ದರೂ ಎರಡು ಮಕ್ಕಳು ತಾಯಿಯಾಗಿ ಎಲ್ಲರ ಮೆಚ್ಚುಗೆಗೆ ಪಾತ್ರವಾದವರು. ಯಾರೋ ಹೆತ್ತ ಮಕ್ಕಳನ್ನು ಹೊತ್ತು ತಂದು ತಾಯಿ ಸ್ಥಾನ ನೀಡಿದ ಸುಷ್ಮಿತಾ ಕಂಡು ಎಲ್ಲರೂ ವಾಹ್ ಎಂದಿದ್ದರು. ಸುಶ್ ಬೆನ್ನ ಹಿಂದೆ ಸುಮಾರು 7 ಪ್ರೇಮ ವೈಫಲ್ಯ ಇದೆ ಎಂಬುದನ್ನು ಎಲ್ಲರೂ ತಕ್ಷಣಕ್ಕೆ ಮರೆತಿದ್ದರು.

ಆದರೆ, ಈಗ ಸುಶ್ಮಿತಾ ಲವ್ ಅಫೇರ್ ಮತ್ತೆ ಓಪನ್ ಆಗಿದೆ. ಸುಲ್ತಾನ್ ಆಫ್ ಸ್ವಿಂಗ್ ಎಂದು ಕರೆಯಲ್ಪಡುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ನಾಯಕ ವಾಸಿಂ ಅಕ್ರಮ್ ಅವರ ಜೊತೆ ಸುಶ್ಮಿತಾ ಸೇನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಇಂಟರ್ ನೆಟ್ ಲೋಕದಲ್ಲಿ ದಟ್ಟವಾಗಿ ಹರಡಿದೆ.

ಸುಶ್ಮಿತಾ ಸೇನ್ ಸದ್ಯದಲ್ಲೇ ತನ್ನ ಆತ್ಮಚರಿತ್ರೆ The butterfly ಬಿಡುಗಡೆಗೊಳಿಸಲು ಸಜ್ಜಾಗಿದ್ದಾರೆ. ಬೆಂಗಾಳಿ ಬೆಡಗಿ ಬಗ್ಗೆ ಹಬ್ಬಿರುವ ಗಾಸಿಪ್ ಸುದ್ದಿಯನ್ನು ಆಕೆ ವಕ್ತಾರರು ಅಲ್ಲಗೆಳೆದಿದ್ದಾರೆ. ಅದರೆ, ಸುಶ್ ಹಾಗೂ ಅಕ್ರಮ್ ಮದುವೆಯಾದ ಮೇಲೆ ದುಬೈನಲ್ಲಿ ನೆಲೆಸಲಿದ್ದಾರೆ ಎಂಬ ಸುದ್ದಿ ಬಗ್ಗೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.

ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಪರಿಚಿತರಾದ ವಾಸಿಂ ಅಕ್ರಮ್ ಹಾಗೂ ಸುಶ್ಮಿತಾ ಸೇನ್ ನಂತರ ತಮ್ಮ ಗೆಳೆತನವನ್ನು ಪ್ರೇಮಕ್ಕೆ ತಿರುಗಿಸಿಕೊಂಡಿದ್ದರು ಎನ್ನಲಾಗಿದೆ.

ಸುಶ್ಮಿತಾ ಸೇನ್ ಇಬ್ಬರು ಮಕ್ಕಳು ರಿನೀ ಹಾಗೂ ಆಲಿಶಾರನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ವಿಕ್ರಮ್ ಭಟ್, ಮುದಾಸರ್ ಅಜೀಜ್, ನಟ ರಣದೀಪ್ ಹೀಡಾ, ಉದ್ಯಮಿ ಇಮ್ತಿಯಾಜ್ ಖಾತ್ರಿ ಸೇರಿದಂತೆ ಸುಮಾರು 7 ಪ್ರೇಮ ವೈಫಲ್ಯಗಳನ್ನು ಸುಶ್ಮಿತಾ ಕಂಡಿದ್ದಾರೆ.

ಕಳೆದ ವರ್ಷ ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಟ್ಟಿದ್ದ ಸುಶ್, ಮುಂದಿನ ವರ್ಷ ಮದುವೆ ಬಗ್ಗೆ ಯೋಚಿಸಬಹುದು, ಮಕ್ಕಳು ದೊಡ್ಡವರಾಗುತ್ತಿದ್ದಾರೆ. ನಾನು ತುಂಬಾ ದಿನದಿಂದ ನಿಮ್ಮನ್ನು ಕಾಯಿಸುತ್ತಿದ್ದೇನೆ ಎಂದಿದ್ದರು.

ಮಧುಮೇಹದಿಂದ ಬಳಲುತ್ತಿರುವ ವಾಸಿಂ ಅಕ್ರಮ್ ಕ್ರಿಕೆಟ್ ತೊರೆದ ಮೇಲೆ ಕಾಮೆಂಟೇಟರ್ ಆಗಿದ್ದಾರಲ್ಲದೆ, ಐಪಿಎಲ್ ನಲ್ಲಿ ಶಾರುಖ್ ಖಾನ್ ಒಡೆತನದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಕೋಚ್ ಆಗಿದ್ದಾರೆ. ಸದ್ಯ ಕರಾಚಿಯಲ್ಲಿ ಆಸ್ಟ್ರೇಲಿಯನ್ ಮಾಡೆಲ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದಾರೆ ಎಂಬ ಸುದ್ದಿಯಿದೆ. ಸುಶ್ ಮದುವೆಯಾದರೆ ಒಳ್ಳೆಯದು ಇಲ್ಲದಿದ್ದರೆ ಪ್ರೇಮ ವೈಫಲ್ಯ ಪಟ್ಟಿಗೆ ಇನ್ನೊಂದು ಹೆಸರು ಸೇರುತ್ತದೆ.

English summary
The internet was abuzz about former Pakistani cricketer Wasim Akram set to marry Former Miss Universe Sushmita Sen and settle in Dubai, but Sushmita's spokesperson denied this as baseless.
Please Wait while comments are loading...