For Quick Alerts
  ALLOW NOTIFICATIONS  
  For Daily Alerts

  ಒಂದೇ ವಾರಕ್ಕೆ ಸುಸ್ತಾದ ಸಮಂತಾ, ಬಿಗ್ ಬಾಸ್‌ ನಿರೂಪಣೆ ಮಾಡಲು ಮತ್ತೊಬ್ಬ ನಟಿ!

  |

  ತೆಲುಗು ಬಿಗ್ ಬಾಸ್‌ನಲ್ಲಿ ಮತ್ತೊಮ್ಮೆ ನಿರೂಪಕರು ಬದಲಾಗುವ ಸೂಚನೆ ಸಿಕ್ಕಿದೆ. ಖಾಯಂ ನಿರೂಪಕ ನಾಗಾರ್ಜುನ ಅವರ ಅಲಭ್ಯತೆಯಿಂದ ಎರಡು ವಾರಗಳ ಕಾಲ ಸಮಂತಾ ಅವರು ಕಾರ್ಯಕ್ರಮ ನಡೆಸಿಕೊಡುವುದಾಗಿ ಒಪ್ಪಿಗೆ ಸೂಚಿಸಿದ್ದರು.

  ಒಪ್ಪಂದಂತೆ ಮೊದಲ ವಾರ ಬಿಗ್ ಬಾಸ್ ಶೋ ಸಹ ನಡೆಸಿಕೊಟ್ಟರು. ಎರಡನೇ ವಾರ ಬಿಗ್ ಬಾಸ್ ನಿರೂಪಣೆ ಮಾಡಲು ಅಕ್ಕಿನೇನಿ ಸೊಸೆ ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೆ ಬಿಗ್ ಬಾಸ್ ಆಯೋಜಕರು ಹಿರಿಯ ನಟಿಯೊಬ್ಬರ ಬಳಿಕ ಶೋಗೆ ಸಂಬಂಧಿಸಿದಂತೆ ಮಾತುಕತೆ ಮಾಡಿದ್ದಾರಂತೆ. ಒಂದು ವೇಳೆ ಸಮಂತಾ ಬಿಗ್ ಬಾಸ್ ಹೋಸ್ಟ್ ಮಾಡಲ್ಲ ಅಂದ್ರೆ ಹಿರಿಯ ನಟಿಗೆ ಆ ಜವಾಬ್ದಾರಿ ಸಿಗಲಿದೆ. ಅಷ್ಟಕ್ಕೂ, ಯಾರು ಆ ನಟಿ? ಮುಂದೆ ಓದಿ...

  ಎರಡು ವಾರ ನಾಗಾರ್ಜುನ ಅಲಭ್ಯ

  ಎರಡು ವಾರ ನಾಗಾರ್ಜುನ ಅಲಭ್ಯ

  ಬಿಗ್ ಬಾಸ್ ಖಾಯಂ ನಿರೂಪಕ ನಾಗಾರ್ಜುನ ಎರಡು ವಾರಗಳ ಕಾಲ ಲಭ್ಯವಾಗಿರಲ್ಲ. 'ವೈಲ್ಡ್ ಡಾಗ್' ಚಿತ್ರದ ಶೂಟಿಂಗ್‌ಗಾಗಿ ಹಿಮಾಲಯಕ್ಕೆ ತೆರಳಿದ್ದಾರೆ. ಈ ಎರಡು ವಾರಗಳ ಬಿಗ್ ಬಾಸ್ ನಿರೂಪಣೆಯನ್ನು ಸಮಂತಾ ಅವರಿಗೆ ನೀಡಿ ಹೋಗಿದ್ದಾರೆ. ಪೂರ್ವ ಯೋಜನೆಯಂತೆ ಸಮಂತಾ ಮೊದಲ ವಾರ ಯಶಸ್ವಿಯಾಗಿ ಮುಗಿಸಿದ್ದಾರೆ. ಆದ್ರೆ, ಎರಡನೇ ವಾರಕ್ಕೆ ಮುಂದುವರಿಸ್ತಾರಾ ಎಂಬ ಅನುಮಾನ ಕಾಡಿದೆ.

  ಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತಬಿಗ್‌ಬಾಸ್ ನಿರೂಪಣೆ ಮಾಡಲು ಸಮಂತಾ ಪಡೆಯುತ್ತಿದ್ದಾರೆ ಭಾರಿ ದೊಡ್ಡ ಮೊತ್ತ

  ಸಮಂತಾಗೆ ಭಾಷೆ ಮೇಲೆ ಹಿಡಿತ ಕಷ್ಟ ಆಗ್ತಿದೆ

  ಸಮಂತಾಗೆ ಭಾಷೆ ಮೇಲೆ ಹಿಡಿತ ಕಷ್ಟ ಆಗ್ತಿದೆ

  ತೆಲುಗು ಭಾಷೆ ಮೇಲೆ ಪರಿಪೂರ್ಣವಾಗಿ ಹಿಡಿತ ಹೊಂದಿಲ್ಲದೇ ಹೋದರು ಸಮಂತಾ ಅಕ್ಕಿನೇನಿ ಮೊದಲ ವಾರ ಯಶಸ್ವಿಯಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ನಾಗಾರ್ಜುನ ಇಲ್ಲ ಎಂಬ ಕೊರತೆ ಎಲ್ಲೂ ಕಾಡದಂತೆ ಚೆನ್ನಾಗಿ ನಿಭಾಯಿಸಿದ್ದಾರೆ. ನಿರೀಕ್ಷೆ ಮೀರಿದಂತೆ ಬಿಗ್ ಬಾಸ್ ಹೋಸ್ಟ್ ಮಾಡಿದ್ದಾರೆ. ಆದರೆ, ಎರಡನೇ ವಾರ ಸಮಂತಾ ನಿರೂಪಣೆ ಮಾಡ್ತಾರಾ ಎನ್ನುವುದು ಇದುವರೆಗೂ ಖಚಿತವಾಗಿಲ್ಲ. ಒಂದು ವೇಳೆ ಸಮಂತಾ 'ನೋ' ಎಂದುಬಿಟ್ಟರೆ ಎಂಬ ಪ್ರಶ್ನೆಯೂ ಎದುರಾಗಿದೆ.

  ಸಮಂತಾ ಬಿಟ್ಟರೆ ಯಾರು?

  ಸಮಂತಾ ಬಿಟ್ಟರೆ ಯಾರು?

  ಎರಡನೇ ವಾರ ಬಿಗ್ ಬಾಸ್ ನಿರೂಪಣೆ ಮಾಡುವುದು ಕಷ್ಟವಾದರೆ ಸಮಂತಾ ಬದಲಿಗೆ ಮತ್ತೊಂದು ಆಯ್ಕೆ ಹುಡುಕಾಟದಲ್ಲಿ ಆಯೋಜಕರು ಇದ್ದಾರಂತೆ. ಈಗಾಗಲೇ ಹಿರಿಯ ನಟಿಯೊಬ್ಬರನ್ನು ಬಿಗ್ ಬಾಸ್ ಆಯೋಜಕರು ಸಂಪರ್ಕಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

  ಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಅನುಭವ ಬಿಚ್ಚಿಟ್ಟ ನಟಿ ಸಮಂತಾಮೊದಲ ಬಾರಿಗೆ 'ಬಿಗ್ ಬಾಸ್' ನಡೆಸಿಕೊಟ್ಟ ಅನುಭವ ಬಿಚ್ಚಿಟ್ಟ ನಟಿ ಸಮಂತಾ

  ರೋಜಾ ಹೆಗಲಿಗೆ ಜವಾಬ್ದಾರಿ!

  ರೋಜಾ ಹೆಗಲಿಗೆ ಜವಾಬ್ದಾರಿ!

  ಒಂದು ವೇಳೆ ಸಮಂತಾ ಅಕ್ಕಿನೇನಿ ಏನಾದರೂ ಕೈ ಕೊಟ್ಟರೆ ಪರ್ಯಾಯವಾಗಿ ಹಿರಿಯ ನಟಿ ರೋಜಾ ಅವರನ್ನು ಬಿಗ್ ಬಾಸ್‌ ವೇದಿಕೆಗೆ ಕರೆತರಲು ಸಿದ್ಧತೆ ನಡೆದಿದೆಯಂತೆ. ಈ ಕುರಿತು ಮಾತುಕತೆ ಸಹ ನಡೆದಿದೆ. ಟಿವಿ ಶೋಗೆ ತೀರ್ಪುಗಾರರಿಗೆ ಕೆಲಸ ಮಾಡಿರುವ ಅನುಭವ ಸಹ ರೋಜಾ ಅವರಿಗಿದೆ.

  English summary
  Telugu actress Samantha Akkineni will host Bigg boss again?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X