»   » ಬಾಲಿವುಡ್ 'ಖಳನಾಯಕ್' ಕನ್ನಡಕ್ಕೆ ಬರ್ತಾರ.?

ಬಾಲಿವುಡ್ 'ಖಳನಾಯಕ್' ಕನ್ನಡಕ್ಕೆ ಬರ್ತಾರ.?

Posted By:
Subscribe to Filmibeat Kannada
ಸಂಜಯ್ ದತ್ ಕನ್ನಡಕ್ಕೆ ಬರ್ತಾರಾ ? | Will Sanjay dutt act in this Kannada movie ? | Filmibeat Kannada

ಸ್ಯಾಂಡಲ್ ವುಡ್ ಇಂಡಸ್ಟ್ರಿಗೆ ಹಲವು ಬಾಲಿವುಡ್ ನಟ-ನಟಿಯರು ಬಂದು ಹೋಗಿದ್ದಾರೆ. ಈಗ ಕೇಳಿ ಬರುತ್ತಿರುವ ಹೆಸರು ಬಿ-ಟೌನ್ ಖಳನಾಯಕ್ ಸಂಜಯ್ ದತ್. ಹೌದು, ಗಾಂಧಿನಗರದಲ್ಲಿ ಹರಿದಾಡುತ್ತಿರುವ ಲೇಟೆಸ್ಟ್ ಸುದ್ದಿ ಏನಪ್ಪಾ ಅಂದ್ರೆ, ಸಂಜಯ್ ದತ್ ಕನ್ನಡ ಸಿನಿಮಾದಲ್ಲಿ ಅಭಿನಯಿಸಲಿದ್ದಾರಂತೆ.

ಹೌದು, ವಿನೋದ್‌ ಪ್ರಭಾಕರ್‌ ಅಭಿನಯದ 'ಮುಧೋಳ' ಚಿತ್ರದಲ್ಲಿ ಸಂಜಯ್‌ ದತ್‌ ವಿಲನ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಈಗ ಸ್ಯಾಂಡಲ್ ವುಡ್ ಅಂಗಳದಲ್ಲಿ ಗಿರಿಗಿಟ್ಲೆ ಹೊಡಿತಿದೆ. ಆದ್ರೆ, ಇದು ಅಧಿಕೃತವಾಗಿ ಖಚಿತವಾಗಿಲ್ಲ.

Sanjay dutt Debut to Kannada

ಅಂದ್ಹಾಗೆ, ಈ ಚಿತ್ರವನ್ನ 'ಬಿಗ್‌ ಬಾಸ್‌' ಖ್ಯಾತಿಯ ಮೋಹನ್‌ ನಿರ್ದೇಶನ ಮಾಡುತ್ತಿದ್ದಾರೆ. ತಮ್ಮ ಚಿತ್ರಕ್ಕೆ ಸಂಜಯ್ ದತ್ ಅವರನ್ನ ಕರೆ ತರಬೇಕೆಂಬ ಆಶಯ ಮೋಹನ್‌ ಅವರದ್ದಂತೆ. ಆದ್ರೆ, ಸಂಜಯ್ ದತ್ ಅವರನ್ನ ಸಂಪರ್ಕಿಸಿದ್ದಾರಾ? ಒಂದು ವೇಳೆ ಅಪ್ರೋಚ್ ಮಾಡಿದರು ಗ್ರೀನ್ ಸಿಗ್ನಲ್ ಕೊಡ್ತಾರ ಎಂಬುದು ಕುತೂಹಲ ಮೂಡಿಸಿದೆ.

ಸದ್ಯ, ಸಂಜಯ್‌ ದತ್ ಅಭಿನಯದ 'ಭೂಮಿ' ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು, ಬಾಲಿವುಡ್ ನಲ್ಲಿ ಮತ್ತೆ ಅಬ್ಬರಿಸಲು ಸಜ್ಜಾಗಿದ್ದಾರೆ.

English summary
There is a strong buzz around Gandhi Nagar, Bollywood Actor Sanjay Dutt Entry to Sandalwood? ಬಾಲಿವುಡ್ ನಟ ಸಂಜಯ್ ದತ್ ಸ್ಯಾಂಡಲ್ ವುಡ್ ಚಿತ್ರದಲ್ಲಿ ಅಭಿನಯಿಸಲಿದ್ದಾರಂತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada