For Quick Alerts
  ALLOW NOTIFICATIONS  
  For Daily Alerts

  ಚಿಯಾನ್ ವಿಕ್ರಮ್‌ ಪುತ್ರನ ಜೊತೆ ರೋಜಾ ಪುತ್ರಿ ಹೆಸರು ತಳುಕು: ಫ್ಯಾನ್ಸ್ ಫುಲ್‌ ಖುಷ್

  |

  ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿದ್ದ ರೋಜಾ ಇಂದಿಗೂ ಅಭಿಮಾನಿಗಳಿಗೆ ಅಚ್ಚು ಮೆಚ್ಚು. "ಕಲಾವಿದ', ಸುಂದರಕಾಂಡ, ಗಡಿ ಬಿಡಿ ಗಂಡ ಚಿತ್ರಗಳಲ್ಲಿ ನಟಿಸಿ ಕನ್ನಡ ಸಿನಿಪ್ರಿಯರ ಮನಸೋರೆಗೊಂಡಿದ್ದ ರೋಜಾ, ಕರ್ನಾಟಕ ರತ್ನ ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಅವರ ಮೌರ್ಯ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ನಟಿಸಿದ್ದರು.

  ರೋಜಾ ತೆಲುಗು, ತಮಿಳು, ಕನ್ನಡ, ಮಲಯಾಳಂ ಚಿತ್ರರಂಗದ ಬಹುತೇಕ ನಟ ದಿಗ್ಗಜರ ಜೊತೆ ನಟಿಸಿ ಸೈ ಎನಿಸಿಕೊಂಡವರು. ಚಿತ್ರರಂಗ ಅಷ್ಟೇ ಅಲ್ಲದೇ ರೋಜಾ ಕಿರುತೆರೆಯಲ್ಲೂ ಕೆಲಸ ಮಾಡಿ ಈಗ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಆದರೆ ನಟನೆಯಿಂದ ರೋಜಾ ಅಂತರ ಕಾಯ್ದುಕೊಂಡಿರುವುದು ಅಭಿಮಾನಿಗಳಿಗೆ ಬೇಸರ ಸಂಗತಿಯಾಗಿದ್ದು, ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ತೆರೆ ಮೇಲೆ ಕಾಣುವ ಇಂಗಿತವನ್ನು ವ್ಯಕ್ತಪಡಿಸಿದ್ದರು.

  ಹೀಗಿರುವಾಗ ಟಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ಹರಿದಾಡುತ್ತಿದ್ದು, ಇದರಿಂದ ರೋಜಾ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ರೋಜಾ ಪುತ್ರಿ ಮಲ್ಲಿಕಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಟಾಪ್‌ ನಟನ ಮಗನೊಂದಿಗೆ ಸ್ಕ್ರೀನ್ ಶೇರ್‌ ಮಾಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ರೋಜಾ ಪುತ್ರಿ ಮಲ್ಲಿಕಾ ಈಗಾಗಲೇ ಸೋಶಿಯಲ್ ಮೀಡಿಯಾದ ಮೂಲಕ ಎಲ್ಲಿರಿಗೂ ಚಿರಪರಿಚಿತರಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿ ತಮ್ಮ ಗ್ಲ್ಯಾಮರಸ್ ಫೋಟೋಗಳನ್ನು ಹಂಚಿಕೊಳ್ಳುತ್ತಿರುವ ಮಲಿಕಾ ತಮ್ಮದೇ ಅಭಿಮಾನಿಗಳನ್ನು ಹೊಂದಿದ್ದಾರೆ.

  ನಟಿ ರೋಜಾ ಆಗಾಗ ತಮ್ಮ ಮಗಳ ಬಗ್ಗೆ ಉತ್ತಮ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಚಂದದ ಬೆಡಗಿಯಾಗಿರುವ ಮಲಿಕಾ ಬುದ್ಧಿವಂತಿಕೆಯಲ್ಲೂ ಚತುರೆ. ಅತ್ಯುತ್ತಮ ವಿದ್ಯಾರ್ಥಿಯಾಗಿರುವ ಮಲಿಕಾ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಬಡ ವಿದ್ಯಾರ್ಥಿಗಳಿಗೂ ಸಹ ಸಹಾಯ ಮಾಡುತ್ತಿದ್ದಾರೆ. ಈಗಾಗಲೇ ಮಲಿಕಾ ಅವರನ್ನು ಅನೇಕ ಪ್ರಶಸ್ತಿಗಳು ಅರಸಿ ಬಂದಿದೆ. ಮಲಿಕಾ ತಮ್ಮ ಉತ್ತಮ ಗುಣಗಳಿಂದ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ. ಜೊತೆಗೆ ತಮ್ಮಿಷ್ಟದ ನಟನೆ ಹಾಗೂ ಮಾಡೆಲಿಂಗ್ ಬಗ್ಗೆಯೂ ಗಮನ ಹರಿಸುತ್ತಿರುವ ಮಲಿಕಾ ಅವರ ಫೋಟೋ ಜನಪ್ರಿಯ ಮ್ಯಾಗಜಿನ್ ಇನ್ಪುಯನ್ಸರ್ ಮುಖಪುಟದಲ್ಲಿ ಬಿತ್ತರವಾಗಿದೆ. ಈ ಮೂಲಕ ಚಿತ್ರರಂಗಕ್ಕೆ ಕಾಲಿಡುವ ಮೊದಲೇ ಮಲಿಕಾ ಖ್ಯಾತಿ ಗಳಿಸಿದ್ದಾರೆ.

  ರೋಜಾ ಪುತ್ರಿ ಮಲಿಕಾ ತೆಲುಗು ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುವುದು ಬಹುತೇಕ ಖಚಿತವಾಗಿದ್ದು, ತೆಲುಗು ಚಿತ್ರರಂಗದ ಜನಪ್ರಿಯ ನಟ ಚಿಯಾನ್ ವಿಕ್ರಮ್ ಅವರ ಮಗನೊಂದಿಗೆ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಚಿಯಾನ್ ವಿಕ್ರಮ್ ಅವರ ಪುತ್ರ ಧ್ರುವ ವಿಕ್ರಮ್‌ ಈಗಾಗಲೇ ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಸದ್ಯ ಚಿಯಾನ್ ವಿಕ್ರಮ್ ತಮ್ಮ ಪುತ್ರನನ್ನು ತೆಲುಗು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ. ಟಾಲಿವುಡ್ ಚಿತ್ರದಲ್ಲಿ ಧ್ರುವ ವಿಕ್ರಮ್‌ ನಾಯಕನಾಗುವುದಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಚಿಯಾನ್ ವಿಕ್ರಮ್ ಕೂಡ ಅನೇಕ ನಿರ್ಮಾಪಕರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

  ಧ್ರುವ ವಿಕ್ರಮ ನಟಿಸುತ್ತಿರುವ ಚಿತ್ರಕ್ಕೆ ನಾಯಕಿ ಹುಡುಕಾಟ ನಡೆಯುತ್ತಿದ್ದು, ರೋಜಾ ಪುತ್ರಿ ಮಲಿಕಾ ಧ್ರುವ ವಿಕ್ರಮ್‌ಗೆ ಜೋಡಿಯಾಗುವ ಸಾಧ್ಯತೆಗಳು ದಟ್ಟವಾಗಿದೆ. ಸದ್ಯ ಟಾಲಿವುಡ್ ನಲ್ಲಿ ಇದೇ ವಿಚಾರ ಹರಿದಾಡುತ್ತಿದ್ದು, ಈ ಬಗ್ಗೆ ಚಿತ್ರತಂಡವೇ ಅಧಿಕೃತವಾಗಿ ಮಾಹಿತಿ ಹೊರಹಾಕಬೇಕಿದೆ. ಚಿಯಾನ್ ವಿಕ್ರಮ್ ಅವರ ಪುತ್ರ ಜೊತೆ ರೋಜಾ ಪುತ್ರಿ ನಟಿಸುತ್ತಾರೆ ಎನ್ನುವ ಸುದ್ದಿ ಹೊರ ಬೀಳುತ್ತಿದ್ದಂತೆ ಅಭಿಮಾನಿಗಳು ಖುಷಿಯಾಗಿದ್ದು, ಧ್ರುವ ವಿಕ್ರಮ್‌ ಹಾಗೂ ಮಲಿಕಾ ಬೆಳ್ಳಿ ತೆರೆಗೆ ಉತ್ತಮ ಜೋಡಿ ಎಂದಿದ್ದಾರೆ.

  English summary
  Senior Actress Roja's daughter Anshu Malika will debut with Chiyaan Vikram's son Dhruv vikram, Know more about the news.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X