Don't Miss!
- Automobiles
ಭಾರತದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಂಡ ಮಾರುತಿ ಜಿಮ್ನಿ: ಪ್ರತಿಸ್ಪರ್ಧಿಗಳಿಗೆ ಶುರುವಾಗಿದೆ ನಡುಕ
- Technology
2023ರಲ್ಲಿ ಈ ಸ್ಮಾರ್ಟ್ಫೋನ್ ಸೌಂಡ್ ಮಾಡೋದು ಪಕ್ಕಾ! ಏನೆಲ್ಲಾ ನಿರೀಕ್ಷೆ?
- News
Sankey Flyover: ಮೇಲ್ಸೇತುವೆ ಬೇಡ ಎಂದು ಸಿಎಂ ಬೊಮ್ಮಾಯಿಗೆ ಪತ್ರ ಬರೆದ 2000ಕ್ಕೂ ಹೆಚ್ಚು ಮಕ್ಕಳು
- Lifestyle
ಗರ್ಭಧಾರಣೆಗೆ ಪ್ರಯತ್ನಿಸುತ್ತಿರುವವರು ಮೆಡಿಟೇರಿಯನ್ ಡಯಟ್ ಪಾಲಿಸಿದರೆ ಒಳ್ಳೆಯದು, ಏಕೆ?
- Sports
ಭಾರತ vs ನ್ಯೂಜಿಲೆಂಡ್ 2ನೇ ಏಕದಿನ ಪಂದ್ಯ: ಪಿಚ್ ರಿಪೋರ್ಟ್, ಸಂಭಾವ್ಯ ಆಡುವ ಬಳಗ, ನೇರಪ್ರಸಾರದ ಮಾಹಿತಿ
- Finance
Swiggy layoffs: ಸ್ವಿಗ್ಗಿಯಲ್ಲಿ 600 ಉದ್ಯೋಗಿಗಳ ವಜಾ, ಕಾರಣವೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗಾಯಕಿ ಸಂಗೀತಾ ಜೊತೆ ಶೈನ್ ಶೆಟ್ಟಿ ಹೊಸ ಜೀವನ, ಭಾನುವಾರ ಬಿಗ್ ಸರ್ಪ್ರೈಸ್!
ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಯುವ ಗಾಯಕಿ ಜೊತೆ ಶೈನ್ ಹೊಸ ಜೀವನ ಆರಂಭಿಸಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ. ಈ ಸುದ್ದಿಗೆ ಪುಷ್ಠಿ ನೀಡುವಂತೆ ಶೈನ್ ಶೆಟ್ಟಿ ಮತ್ತು ಸಂಗೀತಾ ರಾಜೀವ್ ಇಬ್ಬರು ಪೋಸ್ಟ್‌ಗಳನ್ನು ಹಾಕಿದ್ದಾರೆ.
ಈ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿರುವ ಈ ಜೋಡಿ ''ಭಾನುವಾರ ನಿಮ್ಮಲ್ಲರಿಗೂ ದೊಡ್ಡ ಸರ್ಪ್ರೈಸ್ ಕಾದಿದೆ, ಕಾಯ್ತೀರಿ'' ಎಂದು ಪುನಃ ಪೋಸ್ಟ್ ಹಾಕಿದ್ದಾರೆ. ಆದ್ರೆ, ಇದು ಮದುವೆ ಸುದ್ದಿನಾ, ನಿಶ್ಚಿತಾರ್ಥ ಸುದ್ದಿನಾ ಅಥವಾ ಬೇರೆ ಏನೋ ಸುದ್ದಿನಾ ಎನ್ನುವುದು ಅಧಿಕೃತವಾಗಿಲ್ಲ. ಆದ್ರೆ, ನೆಟ್ಟಿಗರು ಮಾತ್ರ ಇದು ಮದುವೆ ಘೋಷಣೆ ಎಂದು ನಿರೀಕ್ಷಿಸುತ್ತಿದ್ದಾರೆ. ಅಷ್ಟಕ್ಕೂ, ಸಂಗೀತಾ ರಾಜೀವ್ ಯಾರು? ಅವರು ಹಾಕಿದ ಪೋಸ್ಟ್ ಗಳಲ್ಲಿ ಏನಿದೆ? ಮುಂದೆ ಓದಿ....

ನಾಲ್ಕು ದಿನಗಳ ಹಿಂದೆ ಶೈನ್ ಹಾಕಿದ್ದ ಪೋಸ್ಟ್
ನಾಲ್ಕು ದಿನಗಳ ಹಿಂದೆ ಶೈನ್ ಶೆಟ್ಟಿ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಕಾಫಿ ಶಾಪ್‌ನಲ್ಲಿ ಕುಳಿತುಕೊಂಡಿರುವ ಶೈನ್ ಶೆಟ್ಟಿಯ ಕೈಯನ್ನು ಹುಡುಗಿಯೊಬ್ಬಳು ಹಿಡಿದುಕೊಳ್ಳುತ್ತಾರೆ. ಆದ್ರೆ, ಆ ಹುಡುಗಿ ಯಾರು ಎನ್ನುವುದು ಗೊತ್ತಾಗಿಲ್ಲ. ಈ ವಿಡಿಯೋ ''ಹಳೆ ಪುಸ್ತಕ,,,ಹೊಸ ನವಿಲುಗರಿ..ಸಂಥಿಂಗ್ ಸ್ಪೆಷಲ್,,,,ಕಾಯಿರಿ'' ಎಂದು ಕ್ಯಾಪ್ಷನ್ ಹಾಕಿದ್ದರು..
ಮತ್ತೆ
'ಗಲ್ಲಿ
ಕಿಚನ್'
ಫುಡ್
ಟ್ರಕ್
ಪ್ರಾರಂಭಿಸಿದ
'ಬಿಗ್
ಬಾಸ್'
ವಿನ್ನರ್
ಶೈನ್
ಶೆಟ್ಟಿ

ಸಂಗೀತಾ ರಾಜೀವ್ ಪೋಸ್ಟ್ ?
ಒಂದು ದಿನದ ಹಿಂದೆ ಗಾಯಕಿ ಸಂಗೀತಾ ರಾಜೀವ್ ಸಹ ಫೋಟೋವೊಂದನ್ನು ಹಂಚಿಕೊಂಡಿದ್ದರು. ತಮ್ಮ ಹುಡುಗನೊಬ್ಬನ ಕೈಯಲ್ಲಿ ತಮ್ಮ ಕೈಯಿಟ್ಟಿರುವ ಫೋಟೋ ಶೇರ್ ಮಾಡಿದ್ದರು. ''ಅದೇ ಗಾನ....ನಗೆ ಬಾನ ಎದೆಯಲ್ಲಿ ನಾಟಿದೆ...''ಎಂದು ಕ್ಯಾಪ್ಷನ್ ಹಾಕಿ ಸಂಥಿಂಗ್ ಸ್ಪೆಷಲ್ ಎಂದು ಹೇಳಿದ್ದರು. ಇತ್ತೀಚಿಗಷ್ಟೆ 'ನೀ ಹಿಂಗೆ ನೋಡಬ್ಯಾಡ ನನ್ನ' ಎಂಬ ಆಲ್ಬಂ ಸಾಂಗ್ ಮೂಲಕ ಸಂಗೀತ ಸುದ್ದಿಯಲ್ಲಿದ್ದರು.

ಇಂದು ಅಧಿಕೃತವಾಗಿದೆ
ಆ ಕಡೆ ಶೈನ್ ಶೆಟ್ಟಿ ಹಾಕಿದ ಪೋಸ್ಟ್‌ನಲ್ಲಿದ್ದ ಹುಡುಗಿ ಸಂಗೀತಾ ರಾಜೀವ್, ಈ ಕಡೆ ಸಂಗೀತಾ ರಾಜೀವ್ ಹಾಕಿದ ಪೋಸ್ಟ್‌ನಲ್ಲಿದ್ದ ಕೈ ಶೈನ್ ಶೆಟ್ಟಿ ಅವರದ್ದು. ಇದನ್ನು ಖುದ್ದು ಸಂಗೀತಾ ಇಂದು ಅಧಿಕೃತಗೊಳಿಸಿದ್ದಾರೆ. ''ಹೌದು, ನಿಮ್ಮ ಊಹೆ ನಿಜಾ, ನಾಳೆ ದೊಡ್ಡ ಸರ್ಪ್ರೈಸ್ ಇದೆ'' ಎಂದು ಸುಳಿವು ನೀಡಿದ್ದಾರೆ.
ನಟಿ
ಮೇಘ
ಶೆಟ್ಟಿ
ಜೊತೆ
ಹೋಳಿ
ಆಡಿದ
'ಬಿಗ್
ಬಾಸ್-7'
ವಿನ್ನರ್
ಶೈನ್
ಶೆಟ್ಟಿ
Recommended Video

ಮದ್ವೆನಾ, ನಿಶ್ವಿತಾರ್ಥನಾ ಅಥವಾ ಇನ್ನೊಂದಾ?
ಇದುವರೆಗೂ ಶೈನ್ ಶೆಟ್ಟಿ ಮತ್ತು ಸಂಗೀತಾ ರಾಜೀವ್ ಮದುವೆ ಅಥವಾ ಪ್ರೀತಿಯನ್ನು ಅಧಿಕೃತಗೊಳಿಸಿಲ್ಲ. ಆದ್ರೆ. ಇವರಿಬ್ಬರು ಹಾಕಿರುವ ಪೋಸ್ಟ್‌ಗಳು, ನೀಡಿರುವ ಸುಳಿವುಗಳನ್ನು ಗಮನಿಸಿದರೆ ಇದು ಪಕ್ಕಾ ಮದ್ವೆ ಸುದ್ದಿನೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ಈ ಎಲ್ಲ ಕುತೂಹಲ, ಅನುಮಾನಗಳಿಗೆ ಭಾನುವಾರ ಉತ್ತರ ಸಿಗಲಿದೆ.