»   » ಉಪೇಂದ್ರ 'ಡಾನ್' ಜಯರಾಜ್ ಆಗಲ್ಲ: 'ಸ್ಟಾರ್' ನಟನಿಗೆ ಹೋಯ್ತು ಈ ಆಫರ್?

ಉಪೇಂದ್ರ 'ಡಾನ್' ಜಯರಾಜ್ ಆಗಲ್ಲ: 'ಸ್ಟಾರ್' ನಟನಿಗೆ ಹೋಯ್ತು ಈ ಆಫರ್?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು 'ಅಂಡರ್ ವರ್ಲ್ಡ್ ಡಾನ್' ಜಯರಾಜ್ ಅವರ ಜೀವನಾಧರಿತ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಗಿರಗಿಟ್ಲೆ ಹೊಡೆದಿತ್ತು. ಆದ್ರೆ, 'ಪ್ರಜಾಕೀಯ' ಸ್ಥಾಪನೆ ಮಾಡಿದ ಹಿನ್ನೆಲೆ ಈ ಚಿತ್ರವನ್ನ ಉಪ್ಪಿ ಕೈಬಿಡಲು ನಿರ್ಧರಿಸಿದ್ದಾರಂತೆ.

ಹೀಗಿರುವಾಗ, 'ಡಾನ್' ಜಯರಾಜ್ ಪಾತ್ರದಲ್ಲಿ ಕನ್ನಡದ ಯಾವ ನಟ ಸಮರ್ಥವಾಗಿ ಅಭಿನಯಿಸಬಲ್ಲರು ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕೆ ಉತ್ತರವಾಗಿ 'ಸ್ಯಾಂಡಲ್ ವುಡ್ ಚಕ್ರವರ್ತಿ'ಯ ಕಡೆ ಬೆರಳು ತೋರಿಸಿದೆ ಚಿತ್ರತಂಡ.

ಮಾಜಿ ಡಾನ್ ಜಯರಾಜ್ ಅವರ ಪಾತ್ರವನ್ನ ಯಾರು ನಿರ್ವಹಿಸಲಿದ್ದಾರೆ ಎಂದು ತಿಳಿಯಲು ಮುಂದೆ ಓದಿ.....

'ಅಂಡರ್ ವರ್ಲ್ಡ್' ಸಿನಿಮಾಗೆ ಅಗ್ನಿಶ್ರೀಧರ್ ಚಿತ್ರಕಥೆ

ಡಾನ್ ಜಯರಾಜ್ ಅವರು ಬಯೋಗ್ರಫಿ ಚಿತ್ರಕ್ಕೆ ಅಗ್ನಿ ಶ್ರೀಧರ್ ಚಿತ್ರಕಥೆ ಬರೆಯುತ್ತಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ಕೆಲಸವನ್ನ ಶ್ರೀಧರ್ ಆರಂಭಿಸಿದ್ದಾರಂತೆ.

'ಅಂಡರ್ ವರ್ಲ್ಡ್ ಡಾನ್' ಜಯರಾಜ್ ಪಾತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ.?

ಲೋಹಿತ್ ಆಕ್ಷನ್ ಕಟ್

ಅಂದ್ಹಾಗೆ, ಜಯರಾಜ್ ಕುರಿತು ಸಿನಿಮಾ ಮಾಡಲು ಸಿದ್ದವಾಗಿರುವುದು ಯುವ ನಿರ್ದೇಶಕ ಲೋಹಿತ್. ಲೋಹಿತ್ ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಅಭಿನಯಿಸಿದ್ದ 'ಮಮ್ಮಿ ಸೇವ್ ಮಿ' ಚಿತ್ರವನ್ನ ನಿರ್ದೇಶನ ಮಾಡಿದ್ದರು.

ಶಿವಣ್ಣ ಡಾನ್ ಆಗ್ತಾರ?

ಉಪೇಂದ್ರ ಮಾಡಲಿದ್ದಾರೆ ಎನ್ನುತ್ತಿದ್ದ ಈ ಚಿತ್ರಕ್ಕೆ ಈಗ ಶಿವರಾಜ್ ಕುಮಾರ್ ಅವರನ್ನ ನಾಯಕನನ್ನಾಗಿಸಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಈ ಕುರಿತು ಶಿವಣ್ಣ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ಆಗಿದೆಯಂತೆ.

ಸದ್ಯಕ್ಕೆ ಅಧಿಕೃತವಲ್ಲ

ಚಿತ್ರದ ಕಥೆ ಕೇಳಿರುವ ಶಿವಣ್ಣ, ಲೋಹಿತ್ ಅವರು ಹೆಣೆದಿರುವ ಕಥೆಯನ್ನ ಮೆಚ್ಚಿಕೊಂಡಿದ್ದಾರಂತೆ. ಆದ್ರೆ, ಅಧಿಕೃತವಾಗಿ ಒಪ್ಪಿಗೆ ನೀಡಿಲ್ಲ ಎನ್ನುವುದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ.

ಹ್ಯಾಟ್ರಿಕ್ ಹೀರೋ ಫುಲ್ ಬಿಜಿ

ಸದ್ಯ, 'ದಿ ವಿಲನ್' ಚಿತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದು, ನಂತರ 'ಟಗರು', 'ಮಫ್ತಿ ಚಿತ್ರಗಳು ಬಿಡುಗಡೆಯಾಗಲಿವೆ. ಅದಾದ ಮೇಲೆ ಮತ್ತಷ್ಟು ಹೊಸ ಪ್ರಾಜೆಕ್ಟ್ ಗಳು ಕಾಯುತ್ತಿದ್ದು, ಇದರ ಮಧ್ಯೆ ಈ ಚಿತ್ರಕ್ಕೆ ಕಾಲ್ ಶೀಟ್ ಕೊಡ್ತಾರ ಕಾದು ನೋಡಬೇಕಿದೆ.

English summary
According to the latest buzz, Hatrick Hero Dr. Shivarajkumar to play Bengaluru Underworld Don M.P.Jayaraj in a movie which will be directed by Lohit, of 'Mummy Save Me' fame..

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X